ನವದೆಹಲಿ, ಜುಲೈ 24: ಭಾರತದ ಷೇರು ಮಾರುಕಟ್ಟೆಯಲ್ಲಿ (Indian Stock Markets) ನಾವೀನ್ಯತೆಯ ಸ್ಪರ್ಶ ತರಲಾಗಿದೆ. ಷೇರುಪೇಟೆಗಳ ಟ್ರೇಡಿಂಗ್ ಚಕ್ರದ ಅವಧಿ ಕಡಿಮೆ ಮಾಡಲಾಗಿದೆ. ಜನವರಿ 27ರಿಂದ ಟಿ+1 ಟ್ರೇಡಿಂಗ್ ಸೈಕಲ್ (Trading Cycle) ಬರಲಿದೆ. ಈಗಿರುವ ಷೇರುಪೇಟೆ ವ್ಯವಸ್ಥೆಯಲ್ಲಿ ಟಿ+2 ವೃತ್ತದ ಸೂತ್ರವನ್ನು ಅನುಸರಿಸಲಾಗುತ್ತಿದೆ. ಇದು ಷೇರು ವಹಿವಾಟಿಗೆ ಅನ್ವಯ ಆಗುವ ಸೂತ್ರ. ಉದಾಹರಣೆಗೆ, ಟಿ+2 ಟ್ರೇಡಿಂಗ್ ಸೈಕಲ್ ಎಂದರೆ ನೀವು ಷೇರು ಖರೀದಿ ಮಾಡಿದ 2 ಎರಡು ದಿನದ ಬಳಿಕ ಅದು ನಿಮ್ಮ ಡಿಮ್ಯಾಟ್ ಅಕೌಂಟ್ಗೆ ವರ್ಗಾವಣೆ ಆಗುತ್ತದೆ. ಅದೇ ಟಿ+1 ಸೈಕಲ್ ಜಾರಿಗೆ ಬಂದರೆ ಒಂದೇ ದಿನದಲ್ಲಿ ಷೇರು ಡೀಮ್ಯಾಟ್ ಖಾತೆಗೆ ಜಮೆ ಆಗುತ್ತದೆ. ನೀವು ಷೇರು ಖರೀದಿಸಿದ ಒಂದು ದಿನದ ಬಳಿಕ ಅದನ್ನು ಮಾರಬಹುದು.
ಒಂದೇ ದಿನದ ಟ್ರೇಡಿಂಗ್ ಸೈಕಲ್ ಅಳವಡಿಸಿರುವ ಮೊದಲ ಪ್ರಮುಖ ದೇಶ ಎಂದರೆ ಭಾರತವೇ. ಅಮೆರಿಕ ಇತ್ಯಾವುದೇ ಮುಖ್ಯ ದೇಶಗಳ ಷೇರುಪೇಟೆಗಳಲ್ಲಿ ಈ ಕ್ಷಿಪ್ರ ಸೆಟಲ್ಮೆಂಟ್ ಸಿಸ್ಟಂ ಇಲ್ಲ.
ಸೆಬಿ ಛೇರ್ಮನ್ ಮಾಧಬಿ ಪುರಿ ಬುಚ್ ಅವರು ಜುಲೈ 24ರಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಭಾರತದ ಷೇರುಮಾರುಕಟ್ಟೆಯಲ್ಲಿ ಟಿ+1 ಟ್ರೇಡಿಂಗ್ ಸೆಟಲ್ಮೆಂಟ್ ವ್ಯವಸ್ಥೆ ಜಾರಿಗೆ ತರುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: HAL Share: ಎಚ್ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್ಎಎಲ್ ಷೇರು
ಷೇರು ವಹಿವಾಟುಗಳ ಕ್ಷಿಪ್ರ ಸೆಟಲ್ಮೆಂಟ್ ಜಾರಿಗೆ ತರಲು ಯತ್ನಿಸುತ್ತಿದ್ದೇವೆ. ಆ ದಿನ ದೂರ ಇಲ್ಲ ಎಂದೂ ಸೆಬಿ ಮುಖ್ಯಸ್ಥೆ ಹೇಳಿದ್ದಾರೆ. ಷೇರು ವಹಿವಾಟುಗಳ ಸೆಟಲ್ಮೆಂಟ್ ರಿಯಲ್ ಟೈಮ್ನಲ್ಲಿ ಆಗುವ ಸಾಧ್ಯತೆ ಬಗ್ಗೆ ಮಾಧಬಿ ಪುರಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಅಂದರೆ ಷೇರು ಖರೀದಿಸಿದ ತತ್ಕ್ಷಣವೇ ಅದು ಡೀಮ್ಯಾಟ್ ಅಕೌಂಟ್ಗೆ ಜಮೆ ಆಗುವ ವ್ಯವಸ್ಥೆ ಶೀಘ್ರದಲ್ಲಿ ಬರಬಹುದು ಎಂದು ನಿರೀಕ್ಷಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ