Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Loan: ಎಲ್​ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

Loan Against LIC Policy: ಎಲ್​ಐಸಿ ಪಾಲಿಸಿ ಮೇಲೆ ಸುಲಭವಾಗಿ ಸಾಲ ಪಡೆಯಬಹುದು. ಸಾಲಕ್ಕೆ ಬಡ್ಡಿಯೂ ಬಹಳ ಕಡಿಮೆ ಇರುತ್ತದೆ. ಪಾಲಿಸಿ ಆರಂಭಿಸಿ 3 ವರ್ಷವಾದ ಬಳಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

LIC Loan: ಎಲ್​ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಎಲ್​ಐಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2023 | 4:51 PM

ಜೀವ ವಿಮಾ ನಿಗಮ (LIC) ಭಾರತದ ನಂಬರ್ ಒನ್ ಇನ್ಷೂರೆನ್ಸ್ ಕಂಪನಿ ಎನಿಸಿದೆ. ವಿವಿಧ ಜನರ ಅನುಕೂಲತೆಗೆ ತಕ್ಕಂತಹ ಮತ್ತು ಸಂದರ್ಭಗಳಿಗೆ ತಕ್ಕಂತಹ ಇನ್ಷೂರೆನ್ಸ್ ಪಾಲಿಸಿಗಳನ್ನು ಎಲ್​ಐಸಿ ಆಫರ್ ಮಾಡುತ್ತದೆ. ಜೀವಕ್ಕೆ ವಿಮೆ ಒದಗಿಸುವುದಲ್ಲದೇ, ಭವಿಷ್ಯಕ್ಕೆ ಹಣಕಾಸು ಭದ್ರತೆಯೂ ಆಗಿದೆ. ಜೊತೆಗೆ, ನಿಮಗೆ ನಡುವಿನಲ್ಲಿ ಹಣಕಾಸು ಕಷ್ಟ ಬಂದರೆ ಸಾಲದ ಸೌಲಭ್ಯವನ್ನೂ ಅದು ಕೊಡುತ್ತದೆ. ನೀವು ಎಲ್​ಐಸಿ ಪಾಲಿಸಿಯ ಆಧಾರದ ಮೇಲೆ ಸಾಲ ಪಡೆಯಬಹುದಾಗಿದೆ. ಅದಕ್ಕೆ ಬಡ್ಡಿ ದರವೂ ಬಹಳ ಕಡಿಮೆ. ಗೃಹಸಾಲಕ್ಕೆ ಸಿಗುವ ಬಡ್ಡಿದರಕ್ಕಿಂತಲೂ ಕಡಿಮೆ ಬಡ್ಡಿಗೆ ಎಲ್​ಐಸಿ ಸಾಲ ಸಿಗುತ್ತದೆ.

ಎಲ್​ಐಸಿ ಪಾಲಿಸಿಯಲ್ಲಿ ನೀವು ಎಷ್ಟು ಪ್ರೀಮಿಯಮ್ ಕಟ್ಟಿದ್ದೀರೋ ಅದರ ಆಧಾರದ ಮೇಲೆ ಲೋನ್ ಮೊತ್ತ ಇರುತ್ತದೆ. ಎಲ್​ಐಸಿ ಪಾಲಿಸಿ ಮೇಲೆ ಲೋನ್ ಪಡೆಯಲು ಕನಿಷ್ಠ 3 ವರ್ಷ ಪ್ರೀಮಿಯಮ್ ಪಾವತಿಸಿರಬೇಕು. ಪಾಲಿಸಿ ಈಗಲೂ ಚಾಲನೆಯಲ್ಲಿರಬೇಕು. ನೀವು 5 ವರ್ಷಗಳ ಹಿಂದೆ ಎಲ್​ಐಸಿ ಪಾಲಿಸಿ ಮಾಡಿಸಿದ್ದು ಈವರೆಗೂ 2 ಲಕ್ಷ ರೂನಷ್ಟು ಪ್ರೀಮಿಯಮ್ ಪಾವತಿಸಿರುವಿರಿ ಎಂದು ಭಾವಿಸಿ. ಆಗ ನಿಮಗೆ ಶೇ. 70ರಿಂದ 80ರಷ್ಟು ಪ್ರೀಮಿಯಮ್ ಮೊತ್ತದಷ್ಟು ಸಾಲ ಸಿಗುತ್ತದೆ. ಅಂದರೆ 1.4ರಿಂದ 1.6 ಲಕ್ಷ ರೂವರೆಗೂ ಸಾಲ ಪಡೆಯಬಹುದು.

ಇದನ್ನೂ ಓದಿ: LIC: ಎಲ್​ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್

ಎಲ್​ಐಸಿ ಪಾಲಿಸಿ ಮೇಲೆ ಸಾಲಕ್ಕೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಎಲ್​ಐಸಿ ಇ ಸರ್ವಿಸಸ್ ಪೋರ್ಟಲ್​ಗೆ ಹೋಗಿ ಅಲ್ಲಿ ಸೈನ್ ಅಪ್ ಮೂಲಕ ಅಕೌಂಟ್ ತೆರೆಯಿರಿ.

ಅಥವಾ ಎಲ್​ಐಸಿ ಇಂಡಿಯಾ ವೆಬ್​ಸೈಟ್​ಗೆ ಹೋದರೆ ಅಲ್ಲಿ ನಡುಭಾಗದಲ್ಲಿ ನಾಲ್ಕು ಸೇವೆಗಳು ಲಭ್ಯ ಇದ್ದು, ಅದರಲ್ಲಿ ಲಾಗಿನ್ ಟು ಕಸ್ಟಮರ್ ಪೋರ್ಟಲ್ ಅನ್ನು ಕ್ಲಿಕ್ ಮಾಡಿ.

ಎಲ್​ಐಸಿ ಇಂಡಿಯಾದ ಇಬಿಜ್ ಪುಟ ತೆರೆದುಕೊಳ್ಳುತ್ತದೆ: ebiz.licindia.in

ಇಲ್ಲಿ ಸೈನ್ ಅಪ್ ಕ್ಲಿಕ್ ಮಾಡಿ

ನಿಮ್ಮ ಪಾಲಿಸಿ ನಂಬರ್, ಇನ್ಷೂರೆನ್ಸ್ ನಂಬರ್ ಇತ್ಯಾದಿ ವಿವರ ತುಂಬಿ ಸಬ್ಮಿಟ್ ಕೊಡಿ

ರಿಜಿಸ್ಟ್ರೇಶನ್ ಆದ ಬಳಿಕ ನಿಮಗೆ ನಿಮ್ಮ ಇನ್ಷೂರೆನ್ಸ್ ವಿವರ ಎಲ್ಲವೂ ಸಿಗುತ್ತದೆ.

ನಿಮ್ಮ ಎಲ್​ಐಸಿ ಪಾಲಿಸಿಗೆ ಸಾಲ ಸೌಲಭ್ಯ ಸಿಗುತ್ತಾ? ಎಷ್ಟು ಸಿಗಬಹುದು, ಬಡ್ಡಿ ದರ ಇತ್ಯಾದಿ ವಿವರ ಕಾಣುತ್ತದೆ. ಸಾಲಕ್ಕೆ ನೀವು ಅರ್ಜಿ ಸಲ್ಲಿಸಬಹುದು.

ಸಮೀಪದ ಎಲ್​ಐಸಿ ಕಚೇರಿಗೆ ಹೋಗಿ ಕೆವೈಸಿ ದಾಖಲೆಗಳನ್ನು ಕೊಡಬಹುದು. ಅಥವಾ ಅನ್​ಲೈನ್​ನಲ್ಲೇ ಕೆವೈಸಿ ದಾಖಲೆಗಳನ್ನು ಅಪ್​ಲೋಡ್ ಮಾಡಬಹುದು.

ಇದನ್ನೂ ಓದಿ: LIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್​ಐಸಿ ಸರಳ್ ಪೆನ್ಷನ್ ಪ್ಲಾನ್

ಯಾವ್ಯಾವ ದಾಖಲೆಗಳು ಬೇಕಾಗಬಹುದು?

  • ಎಲ್​ಐಸಿ ಪಾಲಿಸಿಯ ಮೂಲ ಪ್ರತಿ
  • ಭರ್ತಿ ಮಾಡಿದ ಅರ್ಜಿ
  • ಎರಡು ಪಾಸ್​ಪೋರ್ಟ್ ಗಾತ್ರದ ಫೋಟೋ
  • ಗುರುತಿನ ದಾಖಲೆಗೆ ಆಧಾರ್ ಕಾರ್ಡ್, ಪಾಸ್​ಪೋರ್ಟ್, ವೋಟರ್ ಐಡಿ ಮತ್ತಿತರವು.
  • ನಿವಾಸಿ ದಾಖಲೆಗೆ ಆಧಾರ್ ಕಅರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ವಿದ್ಯುತ್ ಅಥವಾ ಕರೆಂಟ್ ಬಿಲ್ ಇತ್ಯಾದಿಯವು
  • ಸ್ಯಾಲರಿ ಸ್ಲಿಪ್, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
  • ಎಲ್​ಐಸಿ ಕೇಳುವ ಬೇರೆ ಯಾವುದಾದರೂ ದಾಖಲೆ

ನಿಮ್ಮ ಸಾಲದ ಅರ್ಜಿಗೆ ಅನುಮೋದನೆ ಸಿಕ್ಕ ಬಳಿಕ ಸಾಲ ಮರುಪಾವತಿ ವೇಳಾಪಟ್ಟಿಯನ್ನು ನಿಮಗೆ ಕಳುಹಿಸಿಕೊಡಲಾಗುತ್ತದೆ. ಎಲ್​ಐಸಿ ಇಸರ್ವಿಸಸ್ ಪೋರ್ಟಲ್ ಮೂಲಕ ಆನ್​ಲೈನ್​ನಲ್ಲೂ ಲೋನ್ ರೀಪೇಮೆಂಟ್ ಸ್ಕೆಡ್ಯೂಲ್ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಯಡಿಯೂರಪ್ಪ ಕುಟುಂಬ ಮುಕ್ತ ಬಿಜೆಪಿಗಾಗಿ ನಾವು ಹೋರಾಡುತ್ತಿದ್ದೇವೆ: ಯತ್ನಾಳ್
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ಸವದತ್ತಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ 3.68 ಕೋಟಿ ರೂ. ಕಾಣಿಕೆ ಸಂಗ್ರಹ
ವಿಜಯೇಂದ್ರ ಫೋರ್ಜರಿ ಮಾಡಿದ್ದು ಸತ್ಯ ಅಂತ ಈಗಲೂ ಹೇಳುತ್ತೇನೆ: ಯತ್ನಾಳ್
ವಿಜಯೇಂದ್ರ ಫೋರ್ಜರಿ ಮಾಡಿದ್ದು ಸತ್ಯ ಅಂತ ಈಗಲೂ ಹೇಳುತ್ತೇನೆ: ಯತ್ನಾಳ್
‘ಅಪ್ಪು’ ಅದ್ದೂರಿ ಮರು ಬಿಡುಗಡೆ; ಫ್ಯಾನ್ಸ್ ಸಂಭ್ರಮ ಕಣ್ತುಂಬಿಕೊಂಡ ಯುವ
‘ಅಪ್ಪು’ ಅದ್ದೂರಿ ಮರು ಬಿಡುಗಡೆ; ಫ್ಯಾನ್ಸ್ ಸಂಭ್ರಮ ಕಣ್ತುಂಬಿಕೊಂಡ ಯುವ
ಮಗಳಿಗೆ ಹೊಟ್ಟೆನೋವಿನ ಸಮಸ್ಯೆ ಇತ್ತೆಂದ ತಂದೆ ಶಿವಕುಮಾರ್
ಮಗಳಿಗೆ ಹೊಟ್ಟೆನೋವಿನ ಸಮಸ್ಯೆ ಇತ್ತೆಂದ ತಂದೆ ಶಿವಕುಮಾರ್
ಅಮೆರಿಕದ ಏರ್​ಪೋರ್ಟ್​ನಲ್ಲಿ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
ಅಮೆರಿಕದ ಏರ್​ಪೋರ್ಟ್​ನಲ್ಲಿ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ
‘ಅಪ್ಪು’ ಸಿನಿಮಾಗೆ ದರ್ಶನ್ ಅಭಿಮಾನಿ ಬೆಂಬಲ; ವಿಶೇಷ ಕಲಾಕೃತಿ ತಂದ ಫ್ಯಾನ್
‘ಅಪ್ಪು’ ಸಿನಿಮಾಗೆ ದರ್ಶನ್ ಅಭಿಮಾನಿ ಬೆಂಬಲ; ವಿಶೇಷ ಕಲಾಕೃತಿ ತಂದ ಫ್ಯಾನ್
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು
ಹರಪನಹಳ್ಳಿ: ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು