AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC: ಎಲ್​ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್

Invest Rs 45 a Day, Earn Rs 25 Lakh: ಎಲ್​ಐಸಿಯ ಜನಪ್ರಿಯ ನ್ಯೂ ಜೀವನ್ ಆನಂದ್ ಪಾಲಿಸಿಯಲ್ಲಿ ನೀವು ತಿಂಗಳಿಗೆ 1,358 ರೂನಂತೆ 35 ವರ್ಷ ಕಟ್ಟುತ್ತಾ ಹೋದರೆ ಪಾಲಿಸಿ ಮೆಚ್ಯೂರ್ ಆದಾಗ 25 ಲಕ್ಷ ರೂ ನಿಮ್ಮ ಕೈಸೇರಿರುತ್ತದೆ.

LIC: ಎಲ್​ಐಸಿ ಪಾಲಿಸಿ ಧಮಾಕ; ದಿನಕ್ಕೆ 45 ರೂ ಕಟ್ಟಿ, 25 ಲಕ್ಷ ಪಡೆಯಿರಿ; ನೋಡಿ ಈ ಪಾಲಿಸಿ ಡೀಟೇಲ್ಸ್
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2023 | 4:18 PM

ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್​ಐಸಿ (LIC) ಭಾರತದ ಅತಿದೊಡ್ಡ ಇನ್ಷೂರೆನ್ಸ್ ಕಂಪನಿ. ಅದೂ ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಾದ ಎಲ್​ಐಸಿ ತನ್ನ ಮಾರುಕಟ್ಟೆ ಪ್ರಾಬಲ್ಯ ಉಳಿಸಿಕೊಂಡು ಹೋಗಲು ಕಾರಣವಾಗಿರುವುದು ಪ್ರಮುಖವಾಗಿ ಅದರ ಪಾಲಿಸಿಗಳೇ. ಎಲ್ಲರ ಅಗತ್ಯಗಳಿಗೆ ತಕ್ಕಂತಹ ಪ್ಲಾನ್​ಗಳು ಎಲ್​ಐಸಿಯಲ್ಲಿವೆ. ಎಂಡೋಮೆಂಟ್ ಪಾಲಿಸಿ, ಡೆತ್ ಬೆನಿಫಿಟ್ ಪ್ಲಾನ್, ಪಾರ್ಟಿಸಿಪೆಂಟ್ ಪಾಲಿಸಿ ಇತ್ಯಾದಿ ಹಲವು ರೀತಿಯ ಮತ್ತು ಎಲ್ಲಾ ವಯೋಮಾನದವರಿಗೂ ಪಾಲಿಸಿಗಳಿವೆ. ಹಣ ಉಳಿತಾಯಕ್ಕೆ, ಪಿಂಚಣಿಗೆ ಹೀಗೆ ಬಹೂಪಯೋಗಕ್ಕೆ ಹೇಳಿ ಮಾಡಿಸಿದ್ದು ಎಲ್​ಐಸಿ. ಸದ್ಯ ಅತ್ಯಂತ ಜನಪ್ರಿಯ ಎಲ್​ಐಸಿ ಪ್ಲಾನ್​ಗಳಲ್ಲಿ ಜೀವನ್ ಆನಂದ್ ಪಾಲಿಸಿ ಒಂದು. ಎಲ್​ಐಸಿಯ ಜೀವನ್ ಆನಂದ್ ಸ್ಕೀಮ್​ನಲ್ಲಿ (LIC Jeevan Anand Policy) ನೀವು ದಿನಕ್ಕೆ 45 ರೂನಂತೆ ಉಳಿಸಿದರೆ 25 ಲಕ್ಷ ರೂ ಗಳಿಸಬಹುದು. ಅದರ ಡೀಟೇಲ್ಸ್ ಇಲ್ಲಿದೆ

ಎಲ್​ಐಸಿ ಜೀವನ್ ಆನಂದ್ ಪಾಲಿಸಿಯ ಪ್ರೀಮಿಯಂ ಹಣ ಬಹಳ ಕಡಿಮೆಯಿಂದ ಆರಂಭವಾಗುತ್ತದೆ. ಹೀಗಾಗಿ ಎಲ್ಲಾ ವರ್ಗಗಳ ಜನರಿಗೂ ಈ ಪಾಲಿಸಿ ಕೈಗೆಟಕುತ್ತದೆ. ಈ ಪಾಲಿಸಿಯಲ್ಲಿ ಕನಿಷ್ಠ ಅಶೂರ್ಡ್ ಮೊತ್ತ 1 ಲಕ್ಷ ರೂ ಇದೆ. ಗರಿಷ್ಠಕ್ಕೆ ಮಿತಿ ಇಲ್ಲ.

ಇದನ್ನೂ ಓದಿATM ಪಿನ್ ನಂಬರ್ ಕೇವಲ 4 ಅಂಕೆಯಷ್ಟೇ ಇರುತ್ತದೆ ಏಕೆ? ಇದಕ್ಕಿರುವ ಅಸಲಿ ಕಾರಣವೇನು? ಇದಕ್ಕಿದೆ ಭಾರತೀಯ ಲಿಂಕ್​! ಇಂಟರೆಸ್ಟಿಂಗ್​ ಆಗಿದೆ ಓದಿ ನೋಡಿ

25 ಲಕ್ಷ ರೂ ಪಡೆಯಲು ದಿನಕ್ಕೆ 45 ರೂನಂತೆ ಎಷ್ಟು ವರ್ಷ ಕಟ್ಟಬೇಕು?

ನೀವು ತಿಂಗಳಿಗೆ 1,358 ರೂನಂತೆ 35 ವರ್ಷ ಕಟ್ಟಿದರೆ 25 ಲಕ್ಷ ರೂ ಗಳಿಕೆ ನಿಮ್ಮದಾಗುತ್ತದೆ. ತಿಂಗಳಿಗೆ 1,358 ರೂ ಎಂದರೆ ದಿನದ ಲೆಕ್ಕದಲ್ಲಿ ನೋಡಿದರೆ 45 ರೂ ಆಗುತ್ತದೆ. ಇಷ್ಟು ಹಣ ನಿಮ್ಮಿಂದ 35 ವರ್ಷಗಳವರೆಗೆ ಹೊಂದಿಸಲು ಆಗುತ್ತದೆ ಎಂದಾದರೆ 25 ಲಕ್ಷಗಳ ಒಡೆಯರಾಗಬಹುದು.

ಜೀವನ್ ಆನಂದ್ ಪಾಲಿಸಿಯಲ್ಲಿ ನೀವು ತಿಂಗಳಿಗೆ 1,358 ರೂ ಅನ್ನು 35 ವರ್ಷ ಕಟ್ಟಿದರೆ, ಒಟ್ಟು ಜಮೆಯಾಗುವ ಮೊತ್ತ 5,70,500 ರುಪಾಯಿ. ಪಾಲಿಸಿ ಮೆಚ್ಯೂರ್ ಆದಾಗ ಸಮ್ ಅಶೂರ್ಡ್ ಮೊತ್ತ 5 ಲಕ್ಷ ಇರುತ್ತದೆ. ಇದರ ಜೊತೆಗೆ ನಿಮಗೆ 8.60 ಲಕ್ಷ ರೂಗಳ ರಿವಿಶನ್ ಬೋನಸ್ ಹಾಗೂ 11.50 ಲಕ್ಷ ರೂಗಳ ಫೈನಲ್ ಬೋನಸ್ ಸಿಗುತ್ತದೆ. ಈ ಎರಡು ಬೋನಸ್ ಮೊತ್ತ ನಿಮಗೆ ಸಿಗಬೇಕೆಂದರೆ ಪಾಲಿಸಿ ಅವಧಿ 15 ವರ್ಷ ದಾಟಿರಬೇಕು. ಆದರೆ, ಪ್ರೀಮಿಯಂ ಹಣವನ್ನು ತಿಂಗಳಿಗೊಮ್ಮೆಯೋ, 3 ತಿಂಗಳಿಗೊಮ್ಮೆಯೋ, 6 ತಿಂಗಳಿಗೊಮ್ಮೆಯೋ, 1 ವರ್ಷಕ್ಕೊಮ್ಮೆಯೋ ಮಾತ್ರ ಕಟ್ಟಬಹುದು.

ಇದನ್ನೂ ಓದಿFlying Taxis: ಹಾರುವ ಕಾರು, ಡ್ರೋನ್​ಗಳ ನಿರ್ಮಾಣಕ್ಕೆ ಮೈಸೂರು, ಬೆಂಗಳೂರಿನ ಟೆಕ್ ಕಂಪನಿಗಳ ಒಪ್ಪಂದ

ಜೀವನ್ ಆನಂದ್ ಪಾಲಿಸಿ ಮಾಡಿಸಲು ಕನಿಷ್ಠ ವಯಸ್ಸು 18 ವರ್ಷವಾದರೆ ಗರಿಷ್ಠ ವಯಸ್ಸು 50 ವರ್ಷ ಇದೆ. ಪಾಲಿಸಿ ಅವಧಿ 15 ವರ್ಷದಿಂದ 35 ವರ್ಷದವರೆಗೂ ಇದೆ. ಅಂದರೆ ಕನಿಷ್ಠ ಪಾಲಿಸಿ ಅವಧಿ 15 ವರ್ಷವಾದರೆ, ಗರಿಷ್ಠ ಅವಧಿ 35 ವರ್ಷ. ಪಾಲಿಸಿ ಮೆಚ್ಯೂರಿಟಿಗೆ ಬಂದಾಗ ಪಾಲಿಸಿದಾರರ ವಯಸ್ಸು 75 ವರ್ಷ ಮೀರಿರಬಾರದು. ಉದಾಹರಣೆಗೆ, 50ನೇ ವಯಸ್ಸಿನಲ್ಲಿ ಪಾಲಿಸಿ ಖರೀದಿಸಿದವರು 35 ವರ್ಷದ ಅವಧಿಯ ಪಾಲಿಸಿ ಪಡೆಯಲು ಆಗುವುದಿಲ್ಲ. ಅವರು ಗರಿಷ್ಠ 25 ವರ್ಷದ ಪಾಲಿಸಿ ಪಡೆಯಬಹುದು.

ಈ ಪಾಲಿಸಿಯು ತೆರಿಗೆ ಲಾಭಗಳನ್ನು ಕೊಡುವುದಿಲ್ಲವಾದರೂ ಅದಕ್ಕಿಂತ ಮಿಗಿಲಾದ ಹಲವು ರೀತಿಯ ಲಾಭಗಳನ್ನು ನೀಡುತ್ತದೆ. ಹೀಗಾಗಿ, ಈ ಪಾಲಿಸಿಯು ಜನರಿಗೆ ಫೇವರಿಟ್ ಎನಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ