Flying Taxis: ಹಾರುವ ಕಾರು, ಡ್ರೋನ್​ಗಳ ನಿರ್ಮಾಣಕ್ಕೆ ಮೈಸೂರು, ಬೆಂಗಳೂರಿನ ಟೆಕ್ ಕಂಪನಿಗಳ ಒಪ್ಪಂದ

MoU With ePlane: ಬೆಂಗಳೂರಿನ ಪ್ರಿಂಟಾಲಿಟಿಕ್ಸ್, ಮೈಸೂರಿನ ವಿನ್ಯಾಸ್ ಸಂಸ್ಥೆಗಳು ಇಪ್ಲೇನ್ ಕಂಪನಿ ಜೊತೆ ಸೇರಿ ಡ್ರೋನ್, ಫ್ಲೈಯಿಂಗ್ ಟ್ಯಾಕ್ಸಿ ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಮೈಸೂರಿನ ವಿನ್ಯಾಸ್ ಘಟಕದಲ್ಲಿ ಉತ್ಪಾದನೆ ನಡೆಯಲಿದೆ.

Flying Taxis: ಹಾರುವ ಕಾರು, ಡ್ರೋನ್​ಗಳ ನಿರ್ಮಾಣಕ್ಕೆ ಮೈಸೂರು, ಬೆಂಗಳೂರಿನ ಟೆಕ್ ಕಂಪನಿಗಳ ಒಪ್ಪಂದ
ಹಾರುವ ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2023 | 10:41 AM

ಮೈಸೂರು: ಹಾರುವ ಎಲೆಕ್ಟ್ರಿಕ್ ಕಾರು (Flying Electric Vehicle) ಮತ್ತು ಡ್ರೋನ್​ಗಳ ನಿರ್ಮಾಣಕ್ಕೆ ಬೆಂಗಳೂರು ಮತ್ತು ಮೈಸೂರಿನ ಟೆಕ್ ಕಂಪನಿಗಳೆರಡು ಐಐಟಿ ಮದ್ರಾಸ್ ಸ್ಥಾಪಿತ ಇಪ್ಲೇನ್ (ePlane) ಎಂಬ ಕಂಪನಿ ಜೊತೆ ಎಂಒಯು ಒಪ್ಪಂದ ಮಾಡಿಕೊಂಡಿದೆ. ಇಪ್ಲೇನ್ ಕಂಪನಿ ಎಲೆಕ್ಟ್ರಿಕ್ ಟ್ಯಾಕ್ಸಿ ಮತ್ತು ಡ್ರೋನ್ ಸಿಸ್ಟಂಗಳ ನಿರ್ಮಾಣದಲ್ಲಿ ಸ್ಪೆಷಲಿಸ್ಟ್ ಎನಿಸಿದೆ. ಇದರೊಂದಿಗೆ ಎಂಒಯು ಮಾಡಿಕೊಂಡಿರುವುದು ವಿನ್ಯಾಸ್ ಇನೊವೇಟಿವ್ ಟೆಕ್ನಾಲಜೀಸ್ ಮತ್ತು ಪ್ರಿಂಟಾಲಿಟಿಕ್ಸ್ ಸಂಸ್ಥೆಗಳು. ವಿನ್ಯಾಸ್ ಇನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆ ಮೈಸೂರಿನದ್ದಾದರೆ, ಪ್ರಿಂಟಾಲಿಟಿಕ್ಸ್ ಬೆಂಗಳೂರು ಮೂಲದ ಕಂಪನಿ. ಮೇ 18ರಂದು ಮೈಸೂರಿನಲ್ಲಿ ಎಂಒಯುಗೆ ಸಹಿಬಿದ್ದಿದೆ.

ಮೈಸೂರಿನ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆ ವಿವಿಧ ರೀತಿಯ ಡ್ರೋನ್​ಗಳು ಮತ್ತು ಚಾಲಕರಹಿತ ವಿಮಾನಗಳನ್ನು (UAV- Unmanned Aerial Vehicle) ತಯಾರಿಸಲಿದೆ. ಇವುಗಳ ಸರ್ವಿಸಿಂಗ್ ಮತ್ತು ಮಾರ್ಕೆಂಟಿಂಗ್ ಹೊಣೆಯನ್ನೂ ಹೊತ್ತುಕೊಂಡಿದೆ. ಇನ್ನು, ಬೆಂಗಳೂರಿನ ಪ್ರಿಂಟಾಲಿಟಿಕ್ಸ್ ಸಂಸ್ಥೆ ಈ ಯುಎವಿ ಮತ್ತು ಫ್ಲೈಯಿಂಗ್ ಟ್ಯಾಕ್ಸಿಗಳ ತಯಾರಿಕೆಗೆ ಬೇಕಾದ ಮೆಕ್ಯಾನಿಕಲ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಸಪೋರ್ಟ್ ಒದಗಿಸಲಿದೆ.

ಇದನ್ನೂ ಓದಿEnvestnet Bengaluru: ಬೆಂಗಳೂರಿನ ಕಚೇರಿ ಮುಚ್ಚಿದ ಎನ್ವೆಸ್ಟ್​ನೆಟ್; ಟಿಸಿಎಸ್​ಗೆ ಹೊರಗುತ್ತಿಗೆ ಕೊಟ್ಟು ಕೈತೊಳೆದುಕೊಂಡ ಅಮೆರಿಕನ್ ಕಂಪನಿ

ಐಐಟಿ ಮದ್ರಾಸ್​ನಿಂದ ಸ್ಥಾಪಿತವಾದ ಇಪ್ಲೇನ್ ಕಂಪನಿ ಬಳಿ ಡ್ರೋನ್, ಯುಎವಿ, ಫ್ಲೈಯಿಂಗ್ ಟ್ಯಾಕ್ಸಿಗಳ ನಿರ್ಮಾಣಕ್ಕೆ ಬೇಕಾದ ತಂತ್ರಜ್ಞಾನ ಮತ್ತಿತರ ಎಲ್ಲವೂ ಜ್ಞಾನವೂ ಇದೆ. ಇದರ ನೆರವಿನಿಂದ ಈ ವಾಯು ವಾಹನಗಳ ನಿರ್ಮಾಣವಾಗಲಿದೆ. ಮೈಸೂರಿನಲ್ಲಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆಯ ಉತ್ಪಾದಕ ಘಟಕ ಇದ್ದು, ಅಲ್ಲಿಯೇ ಈ ಬ್ಯಾಟರಿ ಚಾಲಿತ ಹಾರುವ ವಾಹನಗಳ ತಯಾರಿಕೆ ನಡೆಯಲಿದೆ.

ಆದರೆ, ಸದ್ಯ ಯಾವಾಗಿನಿಂದ ಏರಿಯಲ್ ವಾಹನಗಳ ತಯಾರಿಕೆ ನಡೆಯುತ್ತದೆ ಎಂಬ ಮಾಹಿತಿ ಗೊತ್ತಾಗಿಲ್ಲ. ಇಲ್ಲಿ ಸಿದ್ಧವಾಗುವ ವಾಹನಗಳು ಎಲ್ಲೆಲ್ಲಿ ಬಳಕೆಯಾಗುತ್ತದೆ ಎಂಬುದೂ ಗೊತ್ತಿಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಇಪ್ಲೇನ್ ವಿಶ್ವದ ಅತ್ಯಂತ ಕಾಂಪ್ಯಾಕ್ಟ್ ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸುತ್ತದೆ. ವಿಶ್ವದಲ್ಲಿ ಎಲ್ಲೆಲ್ಲಿ ಇದರ ಟ್ಯಾಕ್ಸಿಗಳನ್ನು ಕೊಳ್ಳಲು ಒಪ್ಪಂದವಾಗಿದೆ ಎಂಬುದು ತಿಳಿದಿಲ್ಲ. ಭಾರತದಲ್ಲಿ ಈ ಫ್ಲೈಯಿಂಗ್ ಟ್ಕಾಕ್ಸಿ ಓಡಾಟ ನಡೆಸುತ್ತಾ ಕಾದುನೋಡಬೇಕುಆದರೆ, ಇಪ್ಲೇನ್ ಈ ಫ್ಲೈಯಿಂಗ್ ಕಾರಿನ ಪ್ರೋಟೋಟೈಪ್ ನಿರ್ಮಿಸಿ ಬೆಂಗಳೂರಿನ ಏರೋ ಇಂಡಿಯಾ 2023 ಶೋನದಲ್ಲಿ ಪ್ರದರ್ಶಿಸಿತ್ತು.

ಇದನ್ನೂ ಓದಿSuper Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್

ಹೆಲಿಕಾಪ್ಟರಿಗಿಂತ 10 ಪಟ್ಟು ಹೆಚ್ಚು ವೇಗ

2017ರಲ್ಲಿ ಆರಂಭವಾದ ಇಪ್ಲೇನ್ ಕಂಪನಿಯ ಹಾರುವ ವಾಹನಗಳು ಎಸ್​ಯುವಿ ಕಾರಿನ ಗಾತ್ರ ಇದ್ದು, ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀ ದೂರದದವರೆಗೂ ಸಾಗಬಲ್ಲುದು. ಆದರೆ, ಎಷ್ಟು ಮಂದಿ ಈ ಟ್ಯಾಕ್ಸಿಯಲ್ಲಿ ಕೂರಬಹುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸದ್ಯಲ್ಲಿ ಕೆಲವೇ ವರ್ಷಗಳಲ್ಲಿ ಭಾರತದ ನಗರಗಳ ಮೇಲೆ ಹಾರುವ ಕಾರುಗಳ ಹಾರಾಟ ಕಾಣಬಹುದು ಎಂಬುದು ಮಾತ್ರ ನಿಜ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ