Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ! 48,262 ಕೋಟಿ ರೂ ಕ್ಲೈಮ್ ಮಾಡದ ಠೇವಣಿ ಮೊತ್ತಗಳನ್ನು ಹಿಂದಿರುಗಿಸಲು ‘100 ದಿನಗಳಲ್ಲಿ 100 ಪಾವತಿ’ ಅಭಿಯಾನ ಜೂನ್ 1 ರಿಂದ ಪ್ರಾರಂಭ

unclaimed bank deposits: ಆರ್‌ಬಿಐ ಪ್ರಕಾರ 2021-22ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಮೊತ್ತ 48,262 ಕೋಟಿ ರೂ.ಗೆ ತಲುಪಿದೆ.

ಅಬ್ಬಬ್ಬಾ! 48,262 ಕೋಟಿ ರೂ ಕ್ಲೈಮ್ ಮಾಡದ ಠೇವಣಿ ಮೊತ್ತಗಳನ್ನು ಹಿಂದಿರುಗಿಸಲು '100 ದಿನಗಳಲ್ಲಿ 100 ಪಾವತಿ' ಅಭಿಯಾನ ಜೂನ್ 1 ರಿಂದ ಪ್ರಾರಂಭ
ಅಬ್ಬಬ್ಬಾ 48,262 ಕೋಟಿ ರೂ! ಕ್ಲೈಮ್ ಮಾಡದ ಠೇವಣಿ ಮೊತ್ತ
Follow us
ಸಾಧು ಶ್ರೀನಾಥ್​
|

Updated on: May 18, 2023 | 8:58 PM

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಪ್ರತಿ ಜಿಲ್ಲೆಯ ಪ್ರತಿಯೊಂದು ಬ್ಯಾಂಕ್‌ನ ಅಗ್ರ ‘100 ಕ್ಲೈಮ್ ಮಾಡದ ಠೇವಣಿಗಳನ್ನು’ ಪತ್ತೆ ಹಚ್ಚಲು ಮತ್ತು ಇತ್ಯರ್ಥಗೊಳಿಸಲು ಬ್ಯಾಂಕ್‌ಗಳಿಗೆ ‘100 ದಿನಗಳಲ್ಲಿ 100 ಪಾವತಿ’ ಅಭಿಯಾನವನ್ನು (100 Days 100 Pays) ಘೋಷಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ‘100 ದಿನಗಳಲ್ಲಿ100 ಪಾವತಿ’ ಅಭಿಯಾನವನ್ನು ಬ್ಯಾಂಕ್‌ಗಳಿಗೆ ಘೋಷಿಸಿದ್ದು, 100 ದಿನಗಳಲ್ಲಿ ದೇಶದ ಪ್ರತಿ ಜಿಲ್ಲೆಯ ಪ್ರತಿಯೊಂದು ಬ್ಯಾಂಕ್‌ನ ಟಾಪ್ 100 ಕ್ಲೈಮ್ ಮಾಡದ ಠೇವಣಿಗಳನ್ನು (unclaimed deposits) ಪತ್ತೆ ಹಚ್ಚಲು ಮತ್ತು ಇತ್ಯರ್ಥಪಡಿಸಲು ಸೂಚಿಸಿದೆ.

ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲೈಮ್ ಮಾಡದ ಠೇವಣಿಗಳ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಅಂತಹ ಠೇವಣಿಗಳನ್ನು ಅದರ ನಿಜವಾದ ಮಾಲೀಕರು/ಹಕ್ಕುದಾರರಿಗೆ ಹಿಂದಿರುಗಿಸಲು ರಿಸರ್ವ್ ಬ್ಯಾಂಕ್‌ ನಡೆಸುತ್ತಿರುವ ಪ್ರಯತ್ನಗಳು ಮತ್ತು ಉಪಕ್ರಮಗಳಿಗೆ ಪೂರಕವಾಗಿದೆ ಎಂದು ಅಂದಾಜಿಸಲಾಗಿದೆ. ಜೂನ್ 01, 2023 ರಿಂದ ಬ್ಯಾಂಕ್‌ಗಳು ಈ ಅಭಿಯಾನವನ್ನು ಪ್ರಾರಂಭಿಸುತ್ತವೆ.

10 ವರ್ಷಗಳವರೆಗೆ ಕಾರ್ಯನಿರ್ವಹಿಸದ ಉಳಿತಾಯ ಅಥವಾ ಚಾಲ್ತಿ ಖಾತೆಗಳಲ್ಲಿನ ಬಾಕಿಗಳು ಅಥವಾ ಮುಕ್ತಾಯ ದಿನಾಂಕದಿಂದ 10 ವರ್ಷಗಳೊಳಗೆ ಕ್ಲೈಮ್ ಮಾಡದ ಅವಧಿಯ ಠೇವಣಿಗಳನ್ನು ‘ಕ್ಲೈಮ್ ಮಾಡದ ಠೇವಣಿಗಳು’ ಎಂದು ವರ್ಗೀಕರಿಸಲಾಗಿದೆ. ಈ ಮೊತ್ತವನ್ನು ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ (DEA) ನಿಧಿಗೆ ವರ್ಗಾಯಿಸುತ್ತವೆ.

ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ತನ್ನ ಸಾರ್ವಜನಿಕ ಜಾಗೃತಿ ಉಪಕ್ರಮಗಳ ಮೂಲಕ, ಅಂತಹ ಠೇವಣಿಗಳನ್ನು ಕ್ಲೈಮ್ ಮಾಡಲು ಸಂಬಂಧಿಸಿದ ಬ್ಯಾಂಕ್ ಅನ್ನು ಗುರುತಿಸಲು ಮತ್ತು ಸಂಪರ್ಕಿಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸುತ್ತಿದೆ. ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಅನೇಕ ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳನ್ನು ಹುಡುಕಲು ಕೇಂದ್ರೀಕೃತ ವೆಬ್ ಪೋರ್ಟಲ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

ಆರ್‌ಬಿಐ ಪ್ರಕಾರ, 2021-22ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಲ್ಲಿ ಕ್ಲೈಮ್ ಮಾಡದ ಮೊತ್ತ 48,262 ಕೋಟಿ ರೂ.ಗೆ ತಲುಪಿದೆ. 2020-21ರ ಆರ್ಥಿಕ ವರ್ಷದಲ್ಲಿ ಈ ಮೊತ್ತ ರೂ. 39,264 ಕೋಟಿ. ತಮಿಳುನಾಡು, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಬಂಗಾಳ, ಕರ್ನಾಟಕ, ಬಿಹಾರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಅತಿ ಹೆಚ್ಚು ಕ್ಲೈಮ್ ಮಾಡದ ಠೇವಣಿಗಳನ್ನು ಹೊಂದಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ