Green Card: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದಶಕದಿಂದ ಕಾಯುತ್ತಿರುವ ಭಾರತೀಯರು; ಯಾಕಿಷ್ಟು ವಿಳಂಬ? ಬಯಲಾಯ್ತು ಕಾರಣ

Why Green Cards Delayed For Indians: ಅಮೆರಿಕದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಹಲವು ಭಾರತೀಯರು ಈಗಲೂ ಖಾಯಂ ನಿವಾಸಿ ಪತ್ರ ಸಿಕ್ಕದೇ ಅತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಭಾರತೀಯರಿಗೆ ಗ್ರೀನ್ ಕಾರ್ಡ್ ಸಿಗಲು ಯಾಕಿಷ್ಟು ತಡವಾಗುತ್ತಿದೆ, ಇಲ್ಲಿದೆ ನೋಡಿ ಕಾರಣ....

Green Card: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದಶಕದಿಂದ ಕಾಯುತ್ತಿರುವ ಭಾರತೀಯರು; ಯಾಕಿಷ್ಟು ವಿಳಂಬ? ಬಯಲಾಯ್ತು ಕಾರಣ
ಅಮೆರಿಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2023 | 12:25 PM

ವಾಷಿಂಗ್ಟನ್: ಅಮೆರಿಕದ ಗ್ರೀನ್ ಕಾರ್ಡ್ ಅಥವಾ ಖಾಯಂ ನಿವಾಸಿ ಪತ್ರ (Permanent Resident Card) ಪಡೆಯಲು ಭಾರತೀಯರು ಹರಸಾಹಸ ನಡೆಸುವಂತಾಗಿದೆ. ದಶಕದ ಹಿಂದೆ ಗ್ರೀನ್ ಕಾರ್ಡ್​ಗೆ (US Green Card) ಅರ್ಜಿ ಹಾಕಿದವರು ಈಗಲೂ ಕಾಯುತ್ತಾ ಕೂತಿರುವುದುಂಟು. ಭಾರತ ಮಾತ್ರವಲ್ಲ ಇದು ಚೀನಾ, ಮೆಕ್ಸಿಕೋ ಮತ್ತು ಫಿಲಿಪ್ಪೈನ್ಸ್ ದೇಶದ ಜನರಿಗೂ ಇದೇ ಕಥೆ ಮತ್ತು ವ್ಯಥೆ. ಇದಕ್ಕೇನು ಕಾರಣ ಎಂಬುದನ್ನು ಅಮೆರಿಕದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (USCIS) ನಿರ್ದೇಶಕರಿಗೆ ಹಿರಿಯ ಸಲಹೆಗಾರರಾದ ಡೌಗ್ಲಸ್ ರಾಂಡ್ ಎಂಬುವವರು ಹೇಳಿದ ಪ್ರಕಾರ ಗ್ರೀನ್ ಕಾರ್ಡ್ ಪಡೆಯಲು ಪ್ರತಿಯೊಂದು ದೇಶಕ್ಕೂ ಇರುವ ಮಿತಿಯೇ ಈ ವಿಳಂಬಕ್ಕೆ ಕಾರಣವಾಗಿದೆ. ಈ ಮಿತಿಯನ್ನು ಅಮೆರಿಕದ ಸಂಸತ್ತಿನಲ್ಲಿ ಕಾನೂನು ತಿದ್ದುಪಡಿ ಮಾಡುವ ಮೂಲಕ ಮಾತ್ರ ಬದಲಾಯಿಸಲು ಸಾಧ್ಯ ಎಂಬುದನ್ನು ಡಗ್ಲಸ್ ರಾಂಡ್ ತಿಳಿಸಿದ್ದಾರೆ.

ಎಷ್ಟು ಮಂದಿ ವಿದೇಶೀಯರು ಅಮೆರಿಕದ ಗ್ರೀನ್ ಕಾರ್ಡ್ ಪಡೆಯಬಹುದು?

ಅಮೆರಿಕದಲ್ಲಿ ಖಾಯಂ ನಿವಾಸಿ ಪತ್ರ ಅಥವಾ ಗ್ರೀನ್ ಕಾರ್ಡ್ ಅನ್ನು ವಿದೇಶೀಯರಿಗೆ ನೀಡಲು ಮಿತಿ ಹಾಕಲಾಗಿದೆ. ಒಂದು ವರ್ಷದಲ್ಲಿ 3,36,000 ಮಂದಿಗೆ ಮಾತ್ರ ಗ್ರೀನ್ ಕಾರ್ಡ್ ನೀಡಬಹುದು. ಅದರಲ್ಲಿ ಕುಟುಂಬ ಕಾರಣಕ್ಕೆ ನೀಡಲಾಗುವ ಗ್ರೀನ್ ಕಾರ್ಡ್ ಮಿತಿ 2,26,000 ಆದರೆ, ಉದ್ಯೋಗ ಕಾರಣಕ್ಕೆ ಗ್ರೀನ್ ಕಾರ್ಡ್ ಮಿತಿ 1,40,000 ಇದೆ.

ಇದನ್ನೂ ಓದಿFlying Taxis: ಹಾರುವ ಕಾರು, ಡ್ರೋನ್​ಗಳ ನಿರ್ಮಾಣಕ್ಕೆ ಮೈಸೂರು, ಬೆಂಗಳೂರಿನ ಟೆಕ್ ಕಂಪನಿಗಳ ಒಪ್ಪಂದ

ಇದು ಒಟ್ಟಾರೆ ವಿಶ್ವದ ಎಲ್ಲಾ ದೇಶಗಳಿಗೂ ಸೇರಿಸಿ ಇಡಲಾಗಿರುವ ಮಿತಿ. ಇನ್ನು, ಈ ಒಟ್ಟಾರೆ ಗ್ರೀನ್ ಕಾರ್ಡ್ ಅವಕಾಶದಲ್ಲಿ ಪ್ರತಿಯೊಂದು ದೇಶಕ್ಕೂ ಶೇ. 7ರಷ್ಟು ಪಾಲು ಕೊಡಲಾಗಿದೆ. ಅಂದರೆ 3,36,000 ಗ್ರೀನ್ ಕಾರ್ಡ್​ನಲ್ಲಿ ಶೇ. 7 ಎಂದರೆ 25,620 ಗ್ರೀನ್ ಕಾರ್ಡ್​ಗಳನ್ನಷ್ಟೇ ಭಾರತೀಯರು ಒಂದು ವರ್ಷದಲ್ಲಿ ಪಡೆಯಲು ಸಾಧ್ಯವಿದೆ.

ಭಾರತ, ಚೀನಾ, ಫಿಲಿಪ್ಪೈನ್ಸ್ ಮತ್ತು ಮೆಕ್ಸಿಕೋ ದೇಶಗಳಿಂದ ಹೆಚ್ಚಿನ ಜನರು ಅಮೆರಿಕದ ಗ್ರೀನ್ ಕಾರ್ಡ್​ಗೆ ಪ್ರತೀ ವರ್ಷವೂ ಅರ್ಜಿ ಹಾಕುತ್ತಲೇ ಇರುತ್ತಾರೆ. ಗ್ರೀನ್ ಕಾರ್ಡ್ ಬಯಸುವ ಭಾರತೀಯರ ಸಂಖ್ಯೆ ಒಂದು ವರ್ಷದಲ್ಲಿ 1 ಲಕ್ಷದವರೆಗೂ ಹೋಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ, ಭಾರತೀಯರು ಗ್ರೀನ್ ಕಾರ್ಡ್ ಪಡೆಯಲು ಹೆಚ್ಚಿನ ಕಾಲ ಕಾಯುತ್ತಾ ಕೂರಬೇಕಾದ ಪರಿಸ್ಥಿತಿ ಇದೆ. ಅಮೆರಿಕದಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಅನೇಕ ಭಾರತೀಯರಿಗೆ ಈಗಲೂ ಕೂಡ ಗ್ರೀನ್ ಕಾರ್ಡ್ ಸಿಕ್ಕದೇ ಅತಂತ್ರ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿTCS Confusion: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ತೆರಿಗೆ; ಫಾರೀನ್ ಟ್ರಿಪ್ ಗಲಿಬಿಲಿ; ತಿಳಿದಿರಬೇಕಾದ ಕೆಲ ಸಂಗತಿಗಳು

ಈ ಪರಿಪಾಟಲು ನೀಗಿಸಬೇಕಾದರೆ ಗ್ರೀನ್ ಕಾರ್ಡ್ ಮಿತಿಯಲ್ಲಿರುವ ನಿಯಮಗಳನ್ನು ಬದಲಾಯಿಸಬೇಕು. ಅದಾಗಬೇಕಾದರೆ ಅಮೆರಿಕದ ಸಂಸತ್ತಿನಲ್ಲೇ ನಿಯಮ ತಿದ್ದುಪಡಿ ಆಗಬೇಕಂತೆ. ಜೋ ಬೈಡನ್ ನೇತೃತ್ವದ ಸರ್ಕಾರ ಈ ಕೆಲಸ ಮಾಡುತ್ತಾ, ಕಾದುನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್