Envestnet Bengaluru: ಬೆಂಗಳೂರಿನ ಕಚೇರಿ ಮುಚ್ಚಿದ ಎನ್ವೆಸ್ಟ್​ನೆಟ್; ಟಿಸಿಎಸ್​ಗೆ ಹೊರಗುತ್ತಿಗೆ ಕೊಟ್ಟು ಕೈತೊಳೆದುಕೊಂಡ ಅಮೆರಿಕನ್ ಕಂಪನಿ

Envestnet Office Closed In Bengaluru: ಬೆಂಗಳೂರಿನಲ್ಲಿರುವ ಅಮೆರಿಕ ಮೂಲದ ಎನ್ವೆಸ್ಟ್​ನೆಟ್​ನ ಗ್ಲೋಬಲ್ ಕೇಪಬಿಲಿಟಿ ಸೆಂಟರ್ ಅನ್ನು ಮುಚ್ಚಲಾಗಿದೆ. ಇದರಿಂದ ನಡೆಯುತ್ತಿದ್ದ ಕಾರ್ಯಾಚರಣೆಗಳನ್ನು ಟಿಸಿಎಸ್​ಗೆ ಹೊರಗುತ್ತಿಗೆಯಾಗಿ ನೀಡಲಾಗಿದೆ.

Envestnet Bengaluru: ಬೆಂಗಳೂರಿನ ಕಚೇರಿ ಮುಚ್ಚಿದ ಎನ್ವೆಸ್ಟ್​ನೆಟ್; ಟಿಸಿಎಸ್​ಗೆ ಹೊರಗುತ್ತಿಗೆ ಕೊಟ್ಟು ಕೈತೊಳೆದುಕೊಂಡ ಅಮೆರಿಕನ್ ಕಂಪನಿ
ಐಟಿ ಪಾರ್ಕ್
Follow us
|

Updated on: May 18, 2023 | 5:43 PM

ಬೆಂಗಳೂರು: ಅಮೆರಿಕದ ಹಣಕಾಸು ತಂತ್ರಜ್ಞಾನ ಸಂಸ್ಥೆ ಎನ್ವೆಸ್ಟ್​ನೆಟ್ (Envestnet) ತನ್ನ ಭಾರತೀಯ ಕಾರ್ಯಾಚರಣೆಗಳನ್ನು ಟಿಸಿಎಸ್​ಗೆ ಹೊರಗುತ್ತಿಗೆಗೆ (Outsourcing) ಕೊಟ್ಟು ಹೊರಬಿದ್ದಿದೆ. ಬೆಂಗಳೂರಿನಲ್ಲಿ ಇದ್ದ ತನ್ನ ಕಚೇರಿಯನ್ನು ಎನ್ವೆಸ್ಟ್​ನೆಟ್ ಮುಚ್ಚಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಪರಿಹಾರ ಕೊಟ್ಟು ಕೆಲಸದಿಂದ ಬಿಡಿಸಿದೆ. ಬೆಂಗಳೂರಿನ ಅದರ ಕಚೇರಿಯು ಗ್ಲೋಬಲ್ ಕೇಪಬಿಲಿಟಿ ಸೆಂಟರ್ (GCC- Global Capability Center) ಆಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಅದನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಸ್ಥೆ ನಿಭಾಯಿಸುತ್ತದೆ.

ಇತ್ತೀಚೆಗೆ ವಿವಿಧ ಜಾಗತಿಕ ಕಂಪನಿಗಳು ಭಾರತದಲ್ಲಿನ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳ ನಿರ್ವಹಣೆಯನ್ನು ನಿಲ್ಲಿಸಿ ಭಾರತೀಯ ಕಂಪನಿಗಳಿಗೆ ಔಟ್​ಸೋರ್ಸ್ ಮಾಡುವ ಟ್ರೆಂಡ್ ಇದೆ. ಈ ಸಾಲಿಗೆ ಎನ್ವೆಸ್ಟ್​ನೆಟ್ ಸೇರಿದೆ. ಇಂಥ ಜಿಸಿಸಿ ಕೇಂದ್ರಗಳ ನಿರ್ವಹಣಾ ವೆಚ್ಚ ಅಧಿಕ ಇರುವುದಿರಂದ ಇದಾಗುತ್ತಿದೆ. ಅನೇಕ ಕಂಪನಿಗಳು ಇಂಥ ಕೇಂದ್ರಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿವೆ.

ಇದನ್ನೂ ಓದಿSBI Profit: ಎಸ್​ಬಿಐ ಸಖತ್ ಲಾಭ; ಷೇರುದಾರರಿಗೆ ಡಿವಿಡೆಂಡ್ ಸುಗ್ಗಿ; ಐಟಿಸಿ, ಗೇಲ್ ಲಾಭ ಎಷ್ಟಿದೆ ನೋಡಿ?

ಭಾರತದಲ್ಲಿ ಅತ್ಯಧಿಕ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್

ಜಾಗತಿಕ ಜಿಸಿಸಿ ಕೇಂದ್ರಗಳಲ್ಲಿ ಹೆಚ್ಚಿನವು ಭಾರತದಲ್ಲಿವೆ. 1,500 ಜಿಸಿಸಿಗಳು ಭಾರತದಲ್ಲಿವೆ. ವಿಶ್ವದ ಶೇ. 45ರಷ್ಟು ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳು ಇಲ್ಲಿದ್ದು, ಭಾರತದ ಐಟಿ ರಫ್ತಿಗೆ ಪ್ರಮುಖ ಕೊಡುಗೆ ನೀಡುತ್ತಿವೆ. ಒಂದು ಅಂದಾಜು ಪ್ರಕಾರ ಭಾರತದಿಂದ ಹೊರದೇಶಗಳಿಗೆ ರಫ್ತಾಗುವ 194 ಬಿಲಿಯನ್ ಡಾಲರ್ ಮೊತ್ತದ ಐಟಿ ಸರ್ವಿಸ್ ಮತ್ತು ಪ್ರಾಡಕ್ಟ್​ಗಳ ಪೈಕಿ ಶೇ. 40ರಷ್ಟು ಈ ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳಂದಲೇ ಆಗುತ್ತವೆ ಎಂಬುದು ಗಮನಾರ್ಹ.

ಇನ್ನು, ಎನ್ವೆಸ್ಟ್​ನೆಟ್ ಸಂಸ್ಥೆ 2022ರ ಅಕ್ಟೋಬರ್ ತಿಂಗಳಲ್ಲೇ ಟಿಸಿಎಸ್ ಜೊತೆ ಔಟ್​ಸೋರ್ಸಿಂಗ್ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. 10 ವರ್ಷ ಕಾಲ ಈ ಒಪ್ಪಂದದ ಅವಧಿ ಇರುವುದು ತಿಳಿದುಬಂದಿದೆ. ಎನ್ವೆಸ್ಟ್​ನೆಟ್ ಡಾಟಾ ಮತ್ತು ಅನಾಲಿಟಿಕ್ಸ್​ನ ವ್ಯವಹಾರದ ಬ್ಯಾಕ್ ಆಫೀಸ್ ಕಾರ್ಯಗಳು, ಎಂಜಿನಿಯರಿಂಗ್ ಕಾರ್ಯಗಳನ್ನು ಟಿಸಿಎಸ್​ಗೆ ಹೊರಗುತ್ತಿಗೆಯಾಗಿ ನೀಡಿದ್ದಾಗಿ ರೆಗ್ಯುಲೇಟರಿ ಅಥಾರಿಟಿಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಎನ್ವೆಸ್ಟ್​ನೆಟ್ ಕಂಪನಿ ತಿಳಿಸಿದೆ.

ಇದನ್ನೂ ಓದಿSuper Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್

ಬೆಂಗಳೂರಿನಲ್ಲಿರುವ ಎನ್ವೆಸ್ಟ್​ನೆಟ್ ಕಚೇರಿ ಜಾಗ ಏನು ಮಾಡುತ್ತದೆ?

ಎನ್ವೆಸ್ಟ್​ನೆಟ್ ಕಂಪನಿಯ ಕಚೇರಿ ಸ್ಥಳ ಬೆಂಗಳೂರಿನ ಸರ್ಜಾರಪುರ ಮಾರತ್ತಹಳ್ಳಿ ರಸ್ತೆಯ ಕಾಡುಬೀಸನಹಳ್ಳಿ ಸಮೀಪದ ಪ್ರೆಸ್ಟೀಜ್ ಟೆಕ್ನಾಲಜಿ ಪಾರ್ಕ್​ನಲ್ಲಿದೆ. ಲೀಸ್​ಗೆ ಪಡೆದಿರುವ ಈ ಜಾಗವನ್ನು ಏನು ಮಾಡುವುದೆಂದು ಎನ್ವೆಸ್ಟ್​ನೆಟ್ ಇನ್ನೂ ನಿರ್ಧರಿಸಿಲ್ಲ. ಸಬ್​ಲೀಸ್​ಗೆ ಕೊಡುವುದೋ ಅಥವಾ ಬೇರೆ ಯಾವುದಾಕ್ಕಾದರೂ ಈ ಸ್ಥಳವನ್ನು ಬಳಸುವುದೋ ಇವೇ ಮುಂತಾದ ಆಯ್ಕೆಗಳನ್ನು ಕಂಪನಿ ಪರಾಮರ್ಶಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ