LIC Saral Pension: ಲಕ್ಷ ರೂ ಆದಾಯ ಬರುವಂತಾಗಬೇಕಾ? ಇಲ್ಲಿದೆ ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್
Get Pension Until Death In This LIC Scheme: ನೀವು ಏಕಕಾಲದಲ್ಲಿ ಪ್ರೀಮಿಯಮ್ ಕಟ್ಟಿದಲ್ಲಿ ಆ ಮೊತ್ತಕ್ಕೆ ಅನುಗುಣವಾಗಿ ಪಿಂಚಣಿ ಕೊಡುತ್ತದೆ ಎಲ್ಐಸಿ ಸರಳ್ ಪೆನ್ಷನ್ ಸ್ಕೀಮ್. ಪಾಲಿಸಿದಾರ ಮೃತಪಟ್ಟರೆ ಆ ಇಡಿ ಮೊತ್ತವು ನಾಮಿನಿಗೆ ವರ್ಗವಾಗುತ್ತದೆ.
ನಾವು ಉಳಿತಾಯ ಮತ್ತು ಹೂಡಿಕೆ ಯೋಜನೆಗಳನ್ನು ಕೈಗೊಳ್ಳುವುದು ಹಣಕಾಸು ಭದ್ರತೆ ಮತ್ತು ನಿವೃತ್ತಿಜೀವನದ ಭದ್ರತೆಗೆ. ಸರ್ಕಾರಿ ನೌಕರರಿಗಾದರೆ ನಿವೃತ್ತಿ ಬಳಿಕ ಮಾಸಿಕ ಪಿಂಚಣಿ ಸಿಗುತ್ತದೆ. ಆದರೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಇಪಿಎಫ್ ಬಿಟ್ಟರೆ ಬೇರೆ ಪಿಂಚಣಿ ಅವಕಾಶ ಇರುವುದಿಲ್ಲ. ಬೇರೆ ಪಿಂಚಣಿ ಯೋಜನೆಗಳಲ್ಲಿ ಹಣ ತೊಡಗಿಸಿಕೊಳ್ಳದಿದ್ದರೆ ವೃದ್ಧಾಪ್ಯದಲ್ಲಿ ಜೀವನ ಕಷ್ಟಕರ ಎನಿಸಲಿದೆ. ಈ ಹಿನ್ನೆಲೆಯಲ್ಲಿ ಎಲ್ಐಸಿಯ ಸರಳ್ ಪೆನ್ಷನ್ ಯೋಜನೆ (LIC Saral Pension Plan) ಬಹಳ ಮಂದಿಯ ಆಯ್ಕೆ ಆಗಿದೆ. ಬೇರೆ ಈಕ್ವಿಟಿ ಮೇಲಿನ ಹೂಡಿಕೆಗಳ ಅನಿಶ್ಚಿತತೆ ಬಗ್ಗೆ ಚಿಂತಿಸುವುದನ್ನು ಬಿಟ್ಟು ಈ ಪೆನ್ಷನ್ ಪ್ಲಾನ್ನಲ್ಲಿ ನಿಯಮಿತವಾಗಿ ಹಣ ತೊಡಗಿಸಿಕೊಳ್ಳುತ್ತಾ ಹೋದರೆ ತಿಂಗಳಿಗೆ ನಿರ್ದಿಷ್ಟ ಮೊತ್ತದ ಆದಾಯ ನಿಮಗೆ ಸಿಗುವಂತೆ ಮಾಡಿಕೊಳ್ಳಲು ಸಾಧ್ಯ.
ಎಲ್ಐಸಿ ಸರಳ್ ಪೆನ್ಷನ್ ಯೋಜನೆಯಲ್ಲಿ ಹೂಡಿಕೆ ಒಂದೇ ಪ್ರೀಮಿಯಮ್ನಲ್ಲಿ….
ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್ ವೃದ್ಧಾಪ್ಯದಲ್ಲಿ ಪಿಂಚಣಿಗೆಂದು ರೂಪಿಸಿರುವ ಸ್ಕೀಮ್. ಇದು 40ರಿಂದ 80 ವರ್ಷದವರಿಗೆ ಲಭ್ಯ ಇರುವ ಪ್ಲಾನ್. ಒಮ್ಮೆ ಮಾತ್ರ ಪ್ರೀಮಿಯಮ್ ಕಟ್ಟಲು ಅವಕಾಶ ಇರುತ್ತದೆ. ಕನಿಷ್ಠ ಹೂಡಿಕೆ ಮೊತ್ತ 2.5 ಲಕ್ಷ ರೂ ಇದೆ. ಗರಿಷ್ಠ ಎಷ್ಟು ಬೇಕಾದರೂ ಆಗಬಹುದು.
ಇದನ್ನೂ ಓದಿ: RBI: ನೀವು ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್ಬಿಐ ತರುತ್ತಿದೆ ಹೊಸ ಕಾನೂನು
ನೀವು 2.50 ಲಕ್ಷ ರೂನಷ್ಟು ಹೂಡಿಕೆ ಮಾಡಿದರೆ ತಿಂಗಳಿಗೆ 1,000 ರೂ ಅಥವಾ ವರ್ಷಕ್ಕೆ 12,000 ರೂ ಪೆನ್ಷನ್ ಬರುತ್ತಿರುತ್ತದೆ. ಪೆನ್ಷನ್ ಹಣ ತಿಂಗಳಿಗೆ ಬರುವಂತೆ ಬೇಕಾದರೂ ಮಾಡಬಹುದು. ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಸಿಗುವಂತೆ ಮಾಡಬಹುದು.
10 ಲಕ್ಷ ರೂ ಪ್ರೀಮಿಯಮ್ ಕಟ್ಟಿದರೆ ಎಷ್ಟು ಸಿಗುತ್ತೆ?
ನೀವು 10 ಲಕ್ಷ ರೂ ಮೊತ್ತದ ಪ್ರೀಮಿಯಮ್ ಕಟ್ಟಿದಲ್ಲಿ ವರ್ಷಕ್ಕೆ 64,350 ರೂ ಪಿಂಚಣಿ ಪಡೆಯಬಹುದು. ನಿಮಗೆ ಒಂದು ಲಕ್ಷ ರೂ ವಾರ್ಷಿಕ ಪಿಂಚಣಿ ಬೇಕೆಂದರೆ 20 ಲಕ್ಷ ರೂನಷ್ಟು ಪ್ರೀಮಿಯಮ್ ಕಟ್ಟಬೇಕಾಗುತ್ತದೆ.
ಈ ಸ್ಕೀಮ್ನಲ್ಲಿ ನೀವು ಮೃತಪಡುವವರೆಗೂ ಪಿಂಚಣಿ ಬರುತ್ತಲೇ ಇರುತ್ತದೆ. ನಿಮ್ಮ ನಿಧನದ ಬಳಿಕ ನೀವು ಹೆಸರಿಸಿದ ನಾಮಿನಿಗೆ ನಿಮ್ಮ ಇಡೀ ಪ್ರೀಮಿಯಮ್ ಮೊತ್ತವು ವರ್ಗವಾಗುತ್ತದೆ.
ಇದನ್ನೂ ಓದಿ: Earn Money: ನಿಮ್ಮ ಟ್ವೀಟ್ಗಳಿಗೆ ಬರುವ ರಿಪ್ಲೈಗಳಿಂದ ಹಣ ಮಾಡಲು ಅವಕಾಶ; ಶೀಘ್ರದಲ್ಲೇ ಈ ಸೌಲಭ್ಯ; ಇದು ಹೇಗೆ ಸಾಧ್ಯ?
ಒಂದು ವೇಳೆ ನಿಮ್ಮ ನಿಧನದ ಬಳಿಕ ನಾಮಿನಿಗೆ ಪಿಂಚಣಿ ಸೌಲಭ್ಯ ಮುಂದುವರಿಯಬೇಕೆಂದು ನೀವು ಇಷ್ಟಪಟ್ಟಲ್ಲಿ ಅದಕ್ಕೂ ಆಯ್ಕೆ ಇದೆ. ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್ ಕೊಳ್ಳುವಾಗ ನಿಮಗೆ ಎರಡು ಆಯ್ಕೆಗಳಿರುತ್ತವೆ. ಎರಡನೇ ಆಯ್ಕೆಯಲ್ಲಿ ಜಂಟಿ ಫಲಾನುಭವಿ ಸೌಲಭ್ಯ ಇರುತ್ತದೆ. ಇದರಲ್ಲಿ ನೀವು ಮೃತಪಟ್ಟಾಗ ಜಂಟಿ ಯೋಜನೆಯಲ್ಲಿರುವ ಎರಡನೇ ವ್ಯಕ್ತಿಗೆ ಪಿಂಚಣಿ ಹಣ ಮುಂದುವರಿಯುತ್ತಾ ಹೋಗುತ್ತದೆ. ಆ ವ್ಯಕ್ತಿ ನಿಧನಗೊಂಡಾಗ ಪ್ರೀಮಿಯಮ್ ಮೊತ್ತ ನಾಮಿನಿಗೆ ವರ್ಗವಾಗುತ್ತದೆ. ಆದರೆ, ಪ್ಲಾನ್ನ ಮೊದಲ ಆಯ್ಕೆಯಲ್ಲಿ ಸಿಗುವ ಪಿಂಚಣಿಗಿಂತ ಎರಡನೇ ಆಯ್ಕೆಯಲ್ಲಿನ ಪಿಂಚಣಿ ತುಸು ಕಡಿಮೆ ಇರುತ್ತದೆ.
ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್ನ ಇತರ ಸೌಲಭ್ಯಗಳು
ಎಲ್ಐಸಿ ಸರಳ್ ಪೆನ್ಷನ್ ಪ್ಲಾನ್ನಲ್ಲಿ ನೀವು ಪ್ರೀಮಿಯಮ್ ಕಟ್ಟಿದ 6 ತಿಂಗಳಲ್ಲಿ ಸಾಲ ಕೂಡ ಪಡೆಯಬಹುದು. ಅಥವಾ ಪಾಲಿಸಿ ಇಷ್ಟವಾಗಲಿಲ್ಲವೆಂದರೆ ಹಿಂಪಡೆಯುವ ಅವಕಾಶವೂ ಇರುತ್ತದೆ. ಇದು ಪಿಂಚಣಿ ಯೋಜನೆಯಾದ್ದರಿಂದ ಮೆಚ್ಯೂರಿಟಿ ಬೆನಿಫಿಟ್ ಎಂಬುದು ಇರುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ