Earn Money: ನಿಮ್ಮ ಟ್ವೀಟ್​ಗಳಿಗೆ ಬರುವ ರಿಪ್ಲೈಗಳಿಂದ ಹಣ ಮಾಡಲು ಅವಕಾಶ; ಶೀಘ್ರದಲ್ಲೇ ಈ ಸೌಲಭ್ಯ; ಇದು ಹೇಗೆ ಸಾಧ್ಯ?

Tweet Ad Monetisation: ಟ್ವೀಟ್​ಗಳಿಗೆ ಪ್ರತಿಕ್ರಿಯೆಯಾಗಿ ಪ್ರಕಟವಾಗುವ ಜಾಹೀರಾತುಗಳಿಂದ ಬಳಕೆದಾರನು ಹಣ ಮಾಡುವ ಅವಕಾಶ ಸಿಗಲಿದೆ. ಈ ಬಗ್ಗೆ ಸ್ವತಃ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಅವರೇ ಮಾಹಿತಿ ನೀಡಿದ್ದಾರೆ.

Earn Money: ನಿಮ್ಮ ಟ್ವೀಟ್​ಗಳಿಗೆ ಬರುವ ರಿಪ್ಲೈಗಳಿಂದ ಹಣ ಮಾಡಲು ಅವಕಾಶ; ಶೀಘ್ರದಲ್ಲೇ ಈ ಸೌಲಭ್ಯ; ಇದು ಹೇಗೆ ಸಾಧ್ಯ?
ಎಲಾನ್‌ ಮಸ್ಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2023 | 12:21 PM

ಫೇಸ್ಬುಕ್, ಇನ್ಸ್​ಟಾಗ್ರಾಮ್, ಹಲವು ವಿಡಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರು ಹಣ ಮಾಡುವ ಅವಕಾಶ ಬಹಳಷ್ಟಿದೆ. ಈ ಕಾರಣಕ್ಕೆ ಬಹಳ ಮಂದಿ ಆ ಪ್ಲಾಟ್​ಫಾರ್ಮ್​ಗಳನ್ನು ಬಳಸುತ್ತಾರೆ. ಟ್ವಿಟ್ಟರ್​ನಲ್ಲಿ ಇಂಥ ಅವಕಾಶ ಕಡಿಮೆ ಎಂದು ಹಲವರು ದೂರಿದ್ದರು. ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್​ನಲ್ಲಿ ಹಣ ಗಳಿಕೆಗೆ (Monetisation) ಹಲವು ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ. ಟ್ವಿಟ್ಟರ್ ಅನ್ನು ಹೆಚ್ಚು ಆಕರ್ಷಕವಾಗಿಸಲು ಮತ್ತು ಜನರನ್ನು ಸೆಳೆಯಲು ಹೊಸ ಫೀಚರ್ ರೂಪಿಸಲಾಗುತ್ತದೆ. ಇದರ ಪ್ರಕಾರ ಟ್ವೀಟ್​ಗಳಿಗೆ ಪ್ರತಿಕ್ರಿಯೆಯಾಗಿ ಪ್ರಕಟವಾಗುವ ಜಾಹೀರಾತುಗಳಿಂದ ಬಳಕೆದಾರನು ಹಣ ಮಾಡುವ ಅವಕಾಶ ಸಿಗಲಿದೆ. ಈ ಬಗ್ಗೆ ಸ್ವತಃ ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರೇ ಮಾಹಿತಿ ನೀಡಿದ್ದಾರೆ.

‘ಇನ್ನು ಕೆಲ ವಾರಗಳಲ್ಲಿ ಎಕ್ಸ್ ಅಥವಾ ಟ್ವಿಟ್ಟರ್ ಕ್ರಿಯೇಟರುಗಳಿಗೆ ಬರುವ ರಿಪ್ಲೈಗಳಲ್ಲಿ ಪ್ರಕಟಿಸಲಾಗುವ ಜಾಹೀರಾತುಗಳಿಗೆ ಹಣ ನೀಡತೊಡಗುತ್ತದೆ…’ ಎಂದು ಜೂನ್ 10ರಂದು ಅವರು ತಮ್ಮ ಟ್ವೀಟ್​ವೊಂದರಲ್ಲಿ ತಿಳಿಸಿದ್ದಾರೆ. ನೀವು ಒಂದು ಟ್ವೀಟ್​ಗೆ ಬರುವ ಪ್ರತಿಕ್ರಿಯೆಗಳನ್ನು ಓದುವಾಗ ಮಧ್ಯೆ ಮಧ್ಯೆ ಜಾಹೀರಾತುಗಳು ಪ್ರದರ್ಶಿತಗೊಂಡಿರುವುದನ್ನು ನೋಡಿರಬಹುದು. ಈ ಜಾಹೀರಾತುಗಳು ಟ್ವಿಟ್ಟರ್​ನ ಪ್ರಮುಖ ಆದಾಯಮೂಲಗಳಾಗಿವೆ. ಇದರಲ್ಲಿ ಬರುವ ಆದಾಯವನ್ನು ಆ ಟ್ವೀಟ್ ಮಾಡಿದ ಕ್ರಿಯೇಟರ್​ಗೆ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿTech Tips: ನಿಮ್ಮ ಫೇಸ್​ಬುಕ್ ಪ್ರೊಫೈಲ್ ಯಾರೆಲ್ಲ ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಟ್ರಿಕ್

ಆದರೆ, ಎಲ್ಲಾ ಟ್ವಿಟ್ಟರ್ ಬಳಕೆದಾರರಿಗೂ ಈ ಸೌಲಭ್ಯ ಇಲ್ಲ. ಅಕೌಟ್ ವೆರಿಫೈ ಆಗಿರುವ ಬಳಕೆದಾರರಿಗೆ ಮಾತ್ರ ಈ ಅವಕಾಶ ಇರುತ್ತದೆ. ಇದಲ್ಲದೇ, ಮೊದಲ ಬ್ಲಾಕ್ ಪೇಮೆಂಟ್ 5 ಮಿಲಿಯನ್ ಡಾಲರ್ ಆಗಿರುತ್ತದೆ. ಅಂದರೆ ಟ್ವಿಟ್ಟರ್ ಬಳಕೆದಾರ ಇಂಥ ಜಾಹೀರಾತುಗಳಿಂದ ಗಳಿಸಿದ ಹಣ 5 ಮಿಲಿಯನ್ ಡಾಲರ್ (ಸುಮಾರು 41 ಲಕ್ಷ ರೂ) ಆದಾಗ ಪೇಮೆಂಟ್ ನಡೆಯುತ್ತದೆ.

ಟ್ವಿಟ್ಟರ್​ನಲ್ಲಿ ಅಕೌಂಟ್ ವೆರಿಫೈ ಆಗಬೇಕೆಂದರೆ ಮಾಸಿಕ ಸಬ್​ಸ್ಕ್ರಿಪ್ಷನ್ ಸ್ಕೀಮ್ ಪಡೆಯಬೇಕು. ತಿಂಗಳಿಗೆ 650 ರೂ ಅಥವಾ ವರ್ಷಕ್ಕೆ 6,800 ರೂ ಪಾವತಿಸಿ ಸದಸ್ಯತ್ವ ಪಡೆಯಬೇಕು. ಈ ರೀತಿಯ ಪೇಯ್ಡ್ ಸದಸ್ಯರಿಗೆ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಸ್ಕೀಮ್ ಅನ್ನು ಇನ್ನಷ್ಟು ಆಕರ್ಷಕಗೊಳಿಸಲು ಈಗ ಟ್ವೀಟ್ ರಿಪ್ಲೈಗಳಲ್ಲಿನ ಜಾಹೀರಾತುಗಳಿಂದ ಬರುವ ಆದಾಯವನ್ನು ಹಂಚಿಕೊಳ್ಳುವ ಯೋಜನೆಯೂ ಸೇರಿದೆ.

ಇದನ್ನೂ ಓದಿSam Altman vs Indian CEOs: ನನ್ನ ನೀನು ಗೆಲ್ಲಲಾರೆ… ಚಾಲೆಂಜ್… ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ

ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಬಹಳಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ನಷ್ಟದಲ್ಲಿದ್ದ ಟ್ವಿಟ್ಟರ್ ಅನ್ನು ಲಾಭದ ಹಳಿಗೆ ತರಲು ಬಹಳಷ್ಟು ಕಸರತ್ತು ನಡೆಸಿದ್ದಾರೆ. ಟ್ವಿಟ್ಟರ್ ಎಂಬ ಗೂಡಿಗೆ ಕೈಹಾಕಿದ ಬಳಿಕ ಅವರು ಬಹಳಷ್ಟು ಷೇರುಸಂಪತ್ತು ಕಳೆದುಕೊಳ್ಳಬೇಕಾಯಿತು. ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ್ದ ಅವರು ರಾತ್ರೋರಾತ್ರಿ ನಂಬರ್ ಒನ್ ಪಟ್ಟ ಕಳೆದುಕೊಂಡಿದ್ದರು. ಇತ್ತೀಚೆಗೆ ಅವರು ಮತ್ತೊಮ್ಮೆ ವಿಶ್ವದ ಅತಿದೊಡ್ಡ ಶ್ರೀಮಂತ ಎನಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ