AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sam Altman vs Indian CEOs: ನನ್ನ ನೀನು ಗೆಲ್ಲಲಾರೆ… ಚಾಲೆಂಜ್… ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ

OpenAI CEO vs Indian Startups CEOs Duel: ನನ್ನ ಹೇಳಿಕೆಯ ಸಾಂದರ್ಭಿಕತೆ ಭಿನ್ನವಾಗಿತ್ತು. ನನಗೆ ಕೇಳಿದ ಪ್ರಶ್ನೆಯೇ ತಪ್ಪಾಗಿತ್ತು. ಭಾರತೀಯ ಕಂಪನಿಗಳ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ ಎಂದು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಹೇಳಿದ್ದಾರೆ.

Sam Altman vs Indian CEOs: ನನ್ನ ನೀನು ಗೆಲ್ಲಲಾರೆ... ಚಾಲೆಂಜ್... ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ
ಸ್ಯಾಮ್ ಆಲ್ಟ್​ಮ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2023 | 11:37 AM

Share

ನವದೆಹಲಿ: ಚ್ಯಾಟ್​ಜಿಪಿಟಿ ಎಂಬ ಕೃತಕಬುದ್ಧಿಮತ್ತೆ ಮಾಯಾಜಾಲದ ರೂವಾರಿ ಓಪನ್​ಎಐ ಸಂಸ್ಥೆಯ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ (OpenAI CEO Sam Altman) ಮೊನ್ನೆ ಭಾರತ ಭೇಟಿ ಮಾಡಿದ್ದು ಹಲವರಿಗೆ ಗೊತ್ತಿರಬಹುದು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೂ ಅಲ್ಲದೇ ಭಾರತದ ವಿವಿಧ ಕಂಪನಿಗಳ ಸಿಇಒಗಳ ಜೊತೆಗೆ ಸಂವಾದದಲ್ಲೂ ಭಾಗಿಯಾಗಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಗೂಗಲ್ ಇತ್ಯಾದಿ ದಿಗ್ಗಜ ಸಂಸ್ಥೆಗಳನ್ನೂ ತಲೆಕೆಡಿಸಿಕೊಳ್ಳುವಂತೆ ಮಾಡಿರುವ ಓಪನ್​ಎಐ ಬಹಳ ಆಳಕ್ಕೆ ಜಿಗಿದಿರುವಂತೆ ಭಾಸವಾಗುತ್ತಿದೆ. ಓಪನ್​ಎಐ ಸಂಸ್ಥೆ ಮಾಡಿರುವ ಸಾಧನೆಯನ್ನು ಭಾರತದ ಕಂಪನಿಯೊಂದು ಮಾಡಲು ಸಾಧ್ಯವಾ ಎಂಬ ಪ್ರಶ್ನೆಯೊಂದಕ್ಕೆ ಸ್ಯಾಮ್ ಆಲ್ಟ್​​ಮ್ಯಾನ್ ‘ಹೋಪ್​ಲೆಸ್’ ಎಂದು ಉತ್ತರಿಸಿದರೆಂದು ಮೊನ್ನೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸಂವಾದ ಹೇಗಿತ್ತು, ಭಾರತೀಯ ಸಿಇಒಗಳ ಪ್ರತಿಕ್ರಿಯೆ ಹೇಗಿತ್ತು, ಸ್ಯಾಮ್ ಅಂತಿಮವಾಗಿ ಕೊಟ್ಟ ಸ್ಪಷ್ಟನೆ, ಎಲ್ಲವೂ ಕುತೂಹಲ ಮೂಡಿಸುವಂತಿದೆ….

ಹೋಪ್​ಲೆಸ್ ಎಂದರಾ ಚ್ಯಾಟ್​ಜಿಪಿಟಿ ರೂವಾರಿ…?

ದಿ ಎಕನಾಮಿಟ್ ಟೈಮ್ಸ್ ಪತ್ರಿಕೆ ಆಯೋಜಿಸಿದ ಸಂವಾದ ಕಾರ್ಯಕ್ರಮವೊಂದರಲ್ಲಿ ಸ್ಯಾಮ್ ಆಲ್ಟ್​ಮ್ಯಾನ್ ಹಾಗೂ ವಿವಿಧ ಭಾರತೀಯ ಸಿಇಒಗಳು ಪಾಲ್ಗೊಂಡಿದ್ದರು. ಈ ವೇಳೆ ಗೂಗಲ್ ಇಂಡಿಯಾದ ಮಾಜಿ ಮುಖ್ಯಸ್ಥ ಹಾಗೂ ಹೂಡಿಕೆದಾರರೂ ಆದ ರಾಜನ್ ಆನಂದನ್ ಒಂದು ಪ್ರಶ್ನೆ ಹಾಕಿದರು:

‘ಓಪನ್​ಎಐ ಅಭಿವೃದ್ಧಿಪಡಿಸಿದ ಎಐ ಮಾದರಿ ರೀತಿಯಲ್ಲಿ ಭಾರತದ ಸ್ಟಾರ್ಟಪ್​ಗಳಿಂದ ಸಾಧ್ಯವಾಗಬಹುದಾ?’ ಎಂದು ಕೇಳಿದರು.

ಇದನ್ನೂ ಓದಿಮಗಳ ಮೊಬೈಲ್ ಗೇಮ್ ಚಟದಿಂದ ₹52 ಲಕ್ಷ ಕಳೆದುಕೊಂಡ ಅಮ್ಮ, ಬ್ಯಾಂಕ್ ಖಾತೆಯಲ್ಲಿ ಉಳಿದದ್ದು ಕೇವಲ ₹5

ಇದಕ್ಕೆ ಸ್ಯಾಮ್ ಆಲ್ಟ್​ಮ್ಯಾನ್ ಒಂದು ಪದದ ಉತ್ತರ ‘ಹೋಪ್​ಲೆಸ್’ ಎಂದಾಗಿತ್ತು. ‘ಎಐ ಮಾದರಿಗಳ ತಯಾರಿಕೆಯಲ್ಲಿ ನಮ್ಮ ಜೊತೆ ಸ್ಪರ್ಧೆಗೆ ಇಳಿಯುವುದು ನಿಮ್ಮ ಪಾಲಿಗೆ ಹೋಪ್​ಲೆಸ್ ಎಂದು ಹೇಳಬಯಸುತ್ತೇನೆ. ನೀವು ಈ ನಿಟ್ಟಿನಲ್ಲಿ ಪ್ರಯತ್ನಿಸಲೇಬಾರದು. ನೀವು ಪ್ರಯತ್ನಿಸಿದರೆ ಅದರ ಜವಾಬ್ದಾರಿ ನಿಮ್ಮದೇಎರಡೂ ದೃಷ್ಟಿಕೋನವನ್ನು ನಾನು ಬೆಂಬಲಿಸುತ್ತೇನೆ. ಆದರೆ, ನಿಮಗೆ ಯಶಸ್ಸಿನ ಸಾಧ್ಯತೆ ಬಹಳ ಕಡಿಮೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ’ ಎಂದು ಓಪನ್​ಎಐ ಸಿಇಒ ಅಭಿಪ್ರಾಯಪಟ್ಟರು.

ಟ್ವಿಟ್ಟರ್​ನಲ್ಲಿ ಈ ವಿಚಾರ ಮುನ್ನೆಲೆಗೆ ತಂದ ರಾಜನ್ ಆನಂದನ್, ‘ಭಾರತದ ವ್ಯಾವಹಾರಿಯನ್ನು ಯಾವತ್ತೂ ಕಡಿಮೆ ಅಂದಾಜು ಮಾಡಬಾರದು ಎಂಬುದಕ್ಕೆ 5,000 ವರ್ಷಗಳ ಭಾರತೀಯ ಉದ್ಯಮ ನಮಗೆ ತೋರಿಸಿಕೊಟ್ಟಿದೆ. ನಾವು ಪ್ರಯತ್ನಿಸುವ ಉದ್ದೇಶದಲ್ಲಿದ್ದೇವೆ’ ಎಂದು ಸ್ಯಾಮ್ ಆಲ್ಟ್​ಮ್ಯಾನ್​ಗೆ ಸವಾಲು ಹಾಕಿದರು.

ಟೆಕ್ ಮಹೀಂದ್ರ ಕಂಪನಿಯ ಸಿಇಒ ಸಿ.ಪಿ. ಗುರ್ನಾನಿ ಕೂಡ ಟ್ವಿಟ್ಟರ್ ವೇದಿಕೆಯಲ್ಲಿ ಈ ಬಗ್ಗೆ ಸ್ಪಂದಿಸಿ, ಸ್ಯಾಮ್ ಆಲ್ಟ್​ಮ್ಯಾನ್​ಗೆ ಚಾಲೆಂಜ್ ಅಕ್ಸೆಪ್ಟೆಡ್ ಎಂದು ಸವಾಲು ಹಾಕಿದ್ದಾರೆ.

ನಾನು ಹಾಗೆ ಹೇಳಿಲ್ಲನನ್ನ ಮಾತನ್ನು ತಪ್ಪು ತಿಳಿಯಲಾಗಿದೆ ಎಂದು ಸ್ಯಾಮ್ ಸ್ಪಷ್ಟನೆ

ಇದೇ ವೇಳೆ, ಟ್ವಿಟ್ಟರ್​ನಲ್ಲಿ ಭಾರತೀಯ ಕಂಪನಿಗಳ ಸಿಇಒಗಳು ಭಾರತದಲ್ಲಿ ಸ್ವಂತವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಧನಗಳನ್ನು ರೂಪಿಸುವ ಬಗ್ಗೆ ಸವಾಲು ಹಾಕುತ್ತಿರುವಂತೆಯೇ ಸ್ಯಾಮ್ ಆಲ್ಟ್​ಮ್ಯಾನ್ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ….

ಇದನ್ನೂ ಓದಿRRR vs RC: ರಘುರಾಮ್ ರಾಜನ್ ಆರ್​ಬಿಐ ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗಂಭೀರ ಆರೋಪ

10 ಮಿಲಿಯನ್ ಡಾಲರ್ (ಸುಮಾರು 82 ಕೋಟಿ ರೂ) ಹಣದಲ್ಲಿ ನಮಗೆ ಸರಿಸಮಾನವಾಗಿ ಎಐ ಸಾಧನಗಳನ್ನು ತಯಾರಿಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ. ಆದರೂ ತಾವು ಪ್ರಯತ್ನಿಸಿ ಎಂದು ನಾನು ಹೇಳಿದೆ. ನನ್ನ ಪ್ರಕಾರ ಅಗ ಕೇಳಿದ ಪ್ರಶ್ನೆಯೇ ತಪ್ಪಾಗಿತ್ತು

‘ಈ ಹಿಂದೆ ಎಂದೂ ಮಾಡದ ಯಾವ ಕಾರ್ಯವನ್ನು ಒಂದು ಸ್ಟಾರ್ಟಪ್ ಮಾಡಿ ಈ ವಿಶ್ವಕ್ಕೆ ಹೊಸದೊಂದನ್ನು ಕೊಡಬಹುದು ಎಂಬುದು ಸರಿಯಾದ ಪ್ರಶ್ನೆ ಆಗಿರುತ್ತಿತ್ತು. ಭಾರತೀಯ ಸ್ಟಾರ್ಟಪ್​ಗಳು ಈ ಕೆಲಸವನ್ನು ಮಾಡುವಷ್ಟು ಸಾಮರ್ಥ್ಯ ಹೊಂದಿರುವುದರಲ್ಲಿ ನನಗೆ ಅನುಮಾನ ಇಲ್ಲ….’ ಎಂದು ಸ್ಯಾಮ್ ಆಲ್ಟ್​ಮ್ಯಾನ್ ಟ್ವೀಟ್​ಗಳ ಮೂಲಕ ಉತ್ತರಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಟೆಕ್ ಮಹೀಂದ್ರ ಸಿಇಒ ಸಿ.ಪಿ. ಗುರ್ನಾನಿ, ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಕ್ಕೆ ಸ್ಯಾಮ್​ಗೆ ಧನ್ಯವಾದ ಹೇಳಿ, ಎಐ ವಾರ್ ಅಂತ್ಯಗೊಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ