RBI: ನೀವು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್​ಬಿಐ ತರುತ್ತಿದೆ ಹೊಸ ಕಾನೂನು

Penalties On Banks If Property Papers Lost: ಸಾಲ ಪಡೆಯಲು ಅಡಮಾನವಾಗಿ ಇಡುವ ಆಸ್ತಿಪತ್ರಗಳು ಬ್ಯಾಂಕ್​ನಲ್ಲೇ ಕಳೆದುಹೋದರೆ ಅಥವಾ ಅದು ಮರಳುವುದು ವಿಳಂಬವಾದರೆ ಗ್ರಾಹಕರಿಗೆ ಪರಿಹಾರ ಕೊಡಬೇಕು ಎಂದು ಆರ್​ಬಿಐನ ಸಮಿತಿಯೊಂದು ಶಿಫಾರಸು ಮಾಡಿತ್ತು. ಅದನ್ನು ಆರ್​ಬಿಐ ಜಾರಿಗೊಳಿಸುವ ಸಾಧ್ಯತೆ ಇದೆ.

RBI: ನೀವು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್​ಬಿಐ ತರುತ್ತಿದೆ ಹೊಸ ಕಾನೂನು
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2023 | 1:07 PM

ನವದೆಹಲಿ: ಬ್ಯಾಂಕುಗಳಲ್ಲಿ ಸಾಲ ಪಡೆಯಲು ನಾವು ಅಡಮಾನವಾಗಿ ಇಡುವ ಮನೆಪತ್ರ, ಇನ್ಷೂರೆನ್ಸ್ ಸರ್ಟಿಫಿಕೇಟ್ ಇತ್ಯಾದಿ ಮೂಲ ಆಸ್ತಿಪತ್ರಗಳು (Property Documents) ಕಳೆದುಹೋದರೆ ಏನು ಗತಿ? ಇಂಥ ಕೆಲ ಪ್ರಕರಣಗಳು ಬೆಳಕಿಗೆ ಬಂದಿರುವುದುಂಟು. ಇದೀಗ ಆರ್​ಬಿಐ ಈ ನಿಟ್ಟಿನಲ್ಲಿ ಗಮನ ಹರಿಸಿದ್ದು, ಸಾಲ ಪಡೆಯುವವರ ಆಸ್ತಿ ದಾಖಲೆಗಳು ಬ್ಯಾಂಕ್​ನಲ್ಲಿ ಕಳೆದುಹೋಗಿದ್ದರೆ ಆ ಗ್ರಾಹಕರಿಗೆ ಬ್ಯಾಂಕುಗಳು ಪರಿಹಾರ ನೀಡಬೇಕು. ಜೊತೆಗೆ ದಂಡವನ್ನೂ ಕಟ್ಟಿಕೊಡಬೇಕಾಗುವಂತಹ ನಿಯಮ ಮಾರಿ ಮಾಡಲು ಹೊರಟಿದೆ.

ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಸೇವೆಯ ಮಟ್ಟವನ್ನು ಪರಿಶೀಲಿಸಲು ಆರ್​ಬಿಐ ಕಳೆದ ವರ್ಷ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಮಾಜಿ ಡೆಪ್ಯೂಟಿ ಆರ್​ಬಿಐ ಗವರ್ನರ್ ಬಿ.ಪಿ. ಕಣುಂಗೋ ನೇತೃತ್ವದ ಈ ಸಮಿತಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಇದೇ ಏಪ್ರಿಲ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್​ಗೆ ಸಲ್ಲಿಸಿತ್ತು. ಆಸ್ತಿಪತ್ರ ಕಳೆದುಹೋದಾಗ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರ ಮತ್ತು ದಂಡ ಕಟ್ಟಿಕೊಡಬೇಕೆನ್ನುವುದು ಈ ಸಮಿತಿ ಮಾಡಿದ ಶಿಫಾರಸುಗಳಲ್ಲಿ ಸೇರಿದೆ.

ಇದನ್ನೂ ಓದಿEarn Money: ನಿಮ್ಮ ಟ್ವೀಟ್​ಗಳಿಗೆ ಬರುವ ರಿಪ್ಲೈಗಳಿಂದ ಹಣ ಮಾಡಲು ಅವಕಾಶ; ಶೀಘ್ರದಲ್ಲೇ ಈ ಸೌಲಭ್ಯ; ಇದು ಹೇಗೆ ಸಾಧ್ಯ?

ಈ ಸಮಿತಿ ಮಾಡಿದ ಶಿಫಾರಸುಗಳ ಬಗ್ಗೆ ಸಂಬಂಧಿತ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಆರ್​ಬಿಐ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಈ ಪ್ರತಿಕ್ರಿಯೆಗಳನ್ನು ಪರಿಶೀಲಿಸಿರುವ ಆರ್​ಬಿಐ ತನ್ನ ಸಮಿತಿಯ ಕೆಲ ಶಿಫಾರಸುಗಳನ್ನು ಜಾರಿಗೊಳಿಸಲು ನಿರ್ಧರಿಸಿರುವುದು ತಿಳಿದುಬಂದಿದೆ.

ವಿಳಂಬ ಮಾಡಿದರೂ ದಂಡ; ಸಮಿತಿ ಶಿಫಾರಸಿನಲ್ಲಿ ಏನಿದೆ ಅಂಶಗಳು?

ಬ್ಯಾಂಕ್​ನಲ್ಲಿ ಸಾಲದ ಖಾತೆ ಮುಗಿದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಅಡಮಾನದ ಆಸ್ತಿದಾಖಲೆಗಳನ್ನು ಗ್ರಾಹಕರಿಗೆ ಮರಳಿಸಬೇಕು. ಈ ಗಡುವು ಮೀರಿದರೆ ಅಷ್ಟು ವಿಳಂಬ ಅವಧಿಗೆ ಪರಿಹಾರ ಅಥವಾ ದಂಡವನ್ನು ಬ್ಯಾಂಕುಗಳು ಗ್ರಾಹರಿಗೆ ನೀಡಬೇಕು.

ಇದನ್ನೂ ಓದಿLIC vs Bank Deposit: ಎಲ್​ಐಸಿ ಪಾಲಿಸಿಗೆ ಹಾಕುವ ಹಣ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ರಿಟರ್ನ್ಸ್? ಇಲ್ಲಿದೆ ಒಂದು ಹೋಲಿಕೆ

ಒಂದು ವೇಳೆ, ಆಸ್ತಿದಾಖಲೆ ಕಳೆದುಹೋದರೆ ಆ ದಾಖಲೆಗಳ ಸರ್ಟಿಫೈಡ್ ಕಾಪಿಗಳನ್ನು ಪಡೆಯಲು ಬ್ಯಾಂಕು ತನ್ನದೇ ಖರ್ಚಿನಲ್ಲಿ ಗ್ರಾಹಕರಿಗೆ ನೆರವಾಗಬೇಕು. ಜೊತೆಗೆ ವಿಳಂಬಗೊಂಡ ಸಮಯದ ಆಧಾರದ ಮೇಲೆ ಗ್ರಾಹಕರಿಗೆ ಪರಿಹಾರವನ್ನೂ ಕೊಡಬೇಕು ಎಂದು ಆರ್​ಬಿಐನ ಈ ಸಮಿತಿ ತನ್ನ ಶಿಫಾರಸಿನಲ್ಲಿ ಸಲಹೆ ನೀಡಿತ್ತು.

ಬ್ಯಾಂಕುಗಳು ದೊಡ್ಡ ಮೊತ್ತದ ಸಾಲ ಕೊಡಲು ಮೂಲ ಆಸ್ತಿಪತ್ರಗಳನ್ನು ಅಡಮಾನವಾಗಿ ಪಡೆಯುತ್ತವೆ. ಸಾಲ ಪೂರ್ಣವಾಗಿ ತೀರಿದ ಬಳಿಕವಷ್ಟೇ ಈ ದಾಖಲೆಗಳನ್ನು ಗ್ರಾಹಕರಿಗೆ ಮರಳಿಸುತ್ತವೆ. ಆದರೆ ಸಾಲ ಮುಗಿದು ಬಹಳ ದಿನಗಳಾದರೂ ಆಸ್ತಿಪತ್ರಗಳನ್ನು ಮರಳಿಸುತ್ತಿಲ್ಲ ಎಂಬ ದೂರಗಳು ಬಹಳ ಕೇಳಿಬಂದಿದ್ದವಂತೆ. ಈ ಹಿನ್ನೆಲೆಯಲ್ಲಿ ಆರ್​ಬಿಐನ ಸಮಿತಿ ಈ ಸಮಸ್ಯೆಯನ್ನು ಪರಿಶೀಲಿಸಿ ನಿಯಮ ರೂಪಿಸಲು ಸಲಹೆ ನೀಡಿದೆ. ಆದರೆ, ಗ್ರಾಹಕರಿಗೆ ಎಷ್ಟು ಪರಿಹಾರ ಕೊಡಬೇಕು ಎಂಬ ಬಗ್ಗೆ ನಿರ್ದಿಷ್ಟವಾಗಿ ಮಾಹಿತಿ ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ