AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SpiceJet: ಸ್ಪೈಸ್​ಜೆಟ್ ಬಿಕ್ಕಟ್ಟು; ನ್ಯಾಯಮಂಡಳಿ ಬಳಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿದ ವಿಮಾನ ಗುತ್ತಿಗೆ ಸಂಸ್ಥೆ; ನನಗೇನೂ ಸಮಸ್ಯೆ ಇಲ್ಲ ಎನ್ನುವ ಸ್ಪೈಸ್​ಜೆಟ್

Insolvency Plea Against Spicejet by Lessor: ಸ್ಪೈಸ್​ಜೆಟ್​ನಿಂದ ತನ್ನ ಸಾಲ ವಸೂಲಾತಿ ಮಾಡಿಸಿಕೊಡುವಂತೆ ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್ ಸಂಸ್ಥೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಮೆಟ್ಟಿಲೇರಿದೆ.

SpiceJet: ಸ್ಪೈಸ್​ಜೆಟ್ ಬಿಕ್ಕಟ್ಟು; ನ್ಯಾಯಮಂಡಳಿ ಬಳಿ ಇನ್ಸಾಲ್ವೆನ್ಸಿ ಕ್ರಮಕ್ಕೆ ಮನವಿ ಮಾಡಿದ ವಿಮಾನ ಗುತ್ತಿಗೆ ಸಂಸ್ಥೆ; ನನಗೇನೂ ಸಮಸ್ಯೆ ಇಲ್ಲ ಎನ್ನುವ ಸ್ಪೈಸ್​ಜೆಟ್
ಸ್ಪೈಸ್​ಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 11, 2023 | 4:36 PM

Share

ನವದೆಹಲಿ: ಭಾರತದಲ್ಲಿ ಕಡಿಮೆ ಬೆಲೆಗೆ ವಿಮಾನ ಪ್ರಯಾಣ ಸೌಲಭ್ಯ ಒದಿಸುವ ಸಂಸ್ಥೆಗಳ ಗ್ರಹಚಾರ ವಕ್ರವಾದಂತಿದೆ. ಸಾಲ ಮತ್ತು ನಷ್ಟದ ಹೊಡೆತಕ್ಕೆ ಸಾಲು ಸಾಲಾಗಿ ಪತನಗೊಳ್ಳುತ್ತಿವೆ. ಇತ್ತೀಚೆಗಷ್ಟೇ ಗೋ ಫಸ್ಟ್ ಏರ್ಲೈನ್ ಸಂಸ್ಥೆ ತಾನೇ ಖುದ್ದಾಗಿ ಇನ್ಸಾಲ್ವೆನ್ಸಿಗೆ ಮನವಿ ಅರ್ಜಿ ಹಾಕಿದೆ. ಇದೀಗ ಸ್ಪೈಸ್​ಜೆಟ್ ಸಂಸ್ಥೆ ವಿರುದ್ಧ ಮೂರನೇ ಇನ್ಸಾಲ್ವೆನ್ಸಿ ಅರ್ಜಿ (Insolvency Plea) ಸಲ್ಲಿಕೆಯಾಗಿದೆ. ಸ್ಪೈಸ್​ಜೆಟ್​ನಿಂದ ತನ್ನ ಸಾಲ ವಸೂಲಾತಿ ಮಾಡಿಸಿಕೊಡುವಂತೆ ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್ ಸಂಸ್ಥೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ಮೆಟ್ಟಿಲೇರಿದೆ. ವಿಲ್ಮಿಂಗ್ಟನ್ ಟ್ರಸ್ಟ್ ಸಂಸ್ಥೆಯು ವಿಮಾನಗಳನ್ನು ಗುತ್ತಿಗೆಗೆ ನೀಡುವ ಸಂಸ್ಥೆ. ಇದೇ ರೀತಿ ವಿಮಾನ ಗುತ್ತಿಗೆ ನೀಡುವ ಇನ್ನೆರಡು ಕಂಪನಿಗಳೂ ಈ ಮುಂಚೆ ಸ್ಪೈಸ್​ಜೆಟ್ ವಿರುದ್ಧ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ಎನ್​ಸಿಎಲ್​ಟಿಯಲ್ಲಿ ನಡೆಯುತ್ತಿದೆ. ವಿಲ್ಮಿಂಗ್ಟನ್ ಟ್ರಸ್ಟ್ ಸಂಸ್ಥೆಯ ಅರ್ಜಿಯ ವಿಚಾರಣೆ ಜೂನ್ 12ರಂದು ನಡೆಯುವ ನಿರೀಕ್ಷೆ ಇದೆ.

ಸ್ಪೈಸ್​ಜೆಟ್​ನ ಮೂರು ವಿಮಾನಗಳ ನೊಂದಣಿಯನ್ನು ಡಿಜಿಸಿಎ ಕಳೆದ ತಿಂಗಳು (2023 ಮೇ) ರದ್ದು ಮಾಡಿತ್ತು. ಇದರಲ್ಲಿ ವಿಲ್ಮಿಂಗ್ಟನ್​ಗೆ ಸೇರಿದ ಒಂದು ವಿಮಾನವೂ ಇದೆ. ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್, ಸಬರಮತಿ ಏವಿಯೇಶನ್ ಲೀಸಿಂಗ್ ಹಾಗೂ ಫಾಲ್ಗು ಏವಿಯೇಶನ್ ಲೀಸಿಂಗ್ ಸಂಸ್ಥೆಗಳು ಸ್ಪೈಸ್​ಜೆಟ್​ನಿಂದ ಹಣಬಾಕಿ ಪಾವತಿಯಾಗಿಲ್ಲ ಎಂದು ಆರೋಪಿಸಿ, ತಮ್ಮ ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬಳಿ ಮನವಿ ಮಾಡಿದ್ದವು. ಅದರಂತೆ ಸ್ಪೈಸ್​ಜೆಟ್​ನ ವಿಟಿಎಂಎಕ್ಸ್​ಜೆ, ಎಂಎಕ್ಸ್​ಎಫ್ ಮತ್ತು ಎಸ್​ಝಡ್​ಜೆ ವಿಮಾನಗಳ ನೊಂದಣಿಯನ್ನು ಡಿಜಿಸಿಎ ರದ್ದು ಮಾಡಿತ್ತು.

ಇದನ್ನೂ ಓದಿSam Altman vs Indian CEOs: ನನ್ನ ನೀನು ಗೆಲ್ಲಲಾರೆ… ಚಾಲೆಂಜ್… ವಿಶ್ವದ ಎಐ ದೊರೆ ಮತ್ತು ಭಾರತೀಯ ಸಿಇಒಗಳ ಮಧ್ಯೆ ಇಂಟ್ರೆಸ್ಟಿಂಗ್ ಪ್ರಸಂಗ

ಮೂರು ಸಂಸ್ಥೆಗಳಿಂದ ಇನ್ಸಾಲ್ವೆನ್ಸಿ ಅರ್ಜಿ:

ವಿಲ್ಮಿಂಗ್ಟನ್ ಟ್ರಸ್ಟ್ ಎಸ್​ಪಿ ಸರ್ವಿಸಸ್​ಗಿಂತ ಮುಂಚೆ ಏರ್​ಕ್ಯಾಸಲ್ ಮತ್ತು ವಿಲ್ಲಿಸ್ ಲೀಸ್ ಫೈನಾನ್ಸ್ ಸಂಸ್ಥೆಗಳು ಎನ್​ಸಿಎಲ್​ಟಿ ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿದ್ದವು. ಇದರಲ್ಲಿ ಏರ್​ಕ್ಯಾಸಲ್ ಸಂಸ್ಥೆ ವಿಮಾನಗಳ ಗುತ್ತಿಗೆ ನೀಡುವ ಸಂಸ್ಥೆಯಾದರೆ, ವಿಲ್ಲಿಸ್ ಎಂಜಿನ್ನುಗಳ ಗುತ್ತಿಗೆ ನೀಡುವಂತಹ ಕಂಪನಿ.

ವಿಲ್ಲಿಸ್ ಲೀಸಿಂಗ್ ಕಂಪನಿಯ ಅರ್ಜಿ ಜುಲೈ 4ಕ್ಕೆ ನಿಗದಿಯಾಗಿದ್ದರೆ, ಏರ್​ಕ್ಯಾಸಲ್​ನ ಅರ್ಜಿಯ ವಿಚಾರಣೆ ಜುಲೈ 17ರಂದು ನಡೆಯಲಿದೆ. ಈಗ ಇನ್ಸಾಲ್ವೆನ್ಸಿ ಕ್ರಮಕ್ಕೆ ಅರ್ಜಿ ಹಾಕಿರುವ ವಿಲ್ಮಿಂಗ್ಟನ್ ಟ್ರಸ್ಟ್​ನ ಅರ್ಜಿವಿಚಾರಣೆ ಜೂನ್ 12, ಅಂದರೆ ನಾಳೆಯೇ ನಡೆಯಲಿದೆ. ಈ ಮೂರಷ್ಟೇ ಅಲ್ಲದೇ ಈ ಹಿಂದೆ ಎಕ್ರೆಸ್ ಬ್ಯುಲ್ಡ್​ವೆಲ್ ಪ್ರೈ ಲಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯೂ ಸ್ಪೈಸ್​ಜೆಟ್ ವಿರುದ್ಧ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಆದರೆ, ಎರಡೂ ಕಡೆಯಿಂದ ರಾಜಿಸಂಧಾನವಾದ್ದರಿಂದ ತನ್ನ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದೆ ರಿಯಲ್ ಎಸ್ಟೇಟ್ ಕಂಪನಿ.

ಇದನ್ನೂ ಓದಿRBI: ನೀವು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್​ಬಿಐ ತರುತ್ತಿದೆ ಹೊಸ ಕಾನೂನು

ಚೆನ್ನಾಗಿದ್ದೀನಿ, ಬ್ಯುಸಿನೆಸ್ ಮುಂದುವರಿಸ್ತೀನಿ ಎನ್ನುತ್ತಿದೆ ಸ್ಪೈಸ್​ಜೆಟ್

ಇನ್ನೊಂದೆಡೆ, 2022ರ ವರದಿ ಪ್ರಕಾರ ಸ್ಪೈಸ್​ಜೆಟ್ ಸಂಸ್ಥೆ ಸುಮಾರು 1020ಕೋಟಿ ರೂ ಸಾಲ ಹೊಂದಿದೆ. ತಾನು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕುವ ಪ್ರಮೇಯಕ್ಕೇನೂ ಸಿಲುಕಿಲ್ಲ. ಸರ್ಕಾರದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್​ನಿಂದ (ಇಸಿಎಲ್​ಜಿಎಸ್) 50 ಮಿಲಿಯನ್ ಡಾಲರ್ (ಸುಮಾರು 820 ಕೋಟಿ ರೂ) ಸಾಲ ಸಿಕ್ಕಿದ್ದು ಅದನ್ನು ವಿಮಾನಗಳ ಮರುಚಾಲನೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ಸಾಲ್ವೆನ್ಸಿಗೆ ಅರ್ಜಿ ಹಾಕುವ ಉದ್ದೇಶ ಇಲ್ಲ ಎಂದು ಸ್ಪೈಸ್​ಜೆಟ್ ಸ್ಪಷ್ಟಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್