- Kannada News Photo gallery Union Minister Dharmendra Pradhan Visits BPCL 2G Ethanol Biorefinery In Bargarh, Odisha
Dharmendra Pradhan: ಒಡಿಶಾದ ಬಾರಗಡ್ನಲ್ಲಿ ಬಿಪಿಸಿಎಲ್ 2ಜಿ ಎಥೆನಾಲ್ ಬಯರಿಫೈನರಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ
ಭುನವೇಶ್ವರ್: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆದಾರಿಕೆ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಜೂನ್ 11ರಂದು ಒಡಿಶಾದ ಬಾರಗಡ್ (Bargarh) ಜಿಲ್ಲೆಯಲ್ಲಿರುವ ಬಿಪಿಸಿಎಲ್ 2ಜಿ ಬಯೋರಿಫೈನರಿ (2G Biorefinery) ಘಟಕಕ್ಕೆ ಭೇಟಿ ನೀಡಿದರು.
Updated on: Jun 11, 2023 | 7:07 PM

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷದ ಆಡಳಿತದ ಯಶಸ್ಸಿನ ಆಚರಣೆಯ ಭಾಗವಾಗಿ ವಿಕಾಸತೀರ್ಥ ಯಾತ್ರೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಬಾರಗಡ್ ಜಿಲ್ಲೆಯಲ್ಲಿರುವ ಬಿಪಿಸಿಎಲ್ನ 2ಜಿ ಎಥನಾಲ್ ಬಯೋರಿಫೈನರಿ ಘಟಕಕ್ಕೆ ಭೇಟಿ ನೀಡಿದರು.

ಭಾನುವಾರ (ಜೂನ್ 11) ಬೆಳಗ್ಗೆ ಒಡಿಶಾಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್ ಅವರನ್ನು ರಾಜ್ಯದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ಕೇಂದ್ರ ಸಚಿವರು ಬಾರಗಡ್ನಲ್ಲಿರುವ ಬಿಪಿಸಿಎಲ್ 2ಜಿ ಎಥನಾಲ್ ಜೈವಿಕ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಅಧಿಕಾರಿಗಳಿಗೆ ಒಂದಷ್ಟು ಸಲಹೆಗಳನ್ನೂ ನೀಡಿದರು.

ಬಾರಗಡ್ 2ಜಿ ಬಯೋ ರಿಫೈನರಿಯಿಂದ ದೇಶದ ಹಸಿರು ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಜೈವಿಕ ಸಂಸ್ಕರಣ ಘಟಕ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದರು.

2ಜಿ ಬಯೋ-ರಿಫೈನರಿಯಿಂದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ. ರೈತರಿಗೆ ಒಳಿತಾಗುತ್ತದೆ. ಅವರ ಆದಾಯ ಹೆಚ್ಚುತ್ತದೆ. ಹಸಿರು ಶಕ್ತಿ ಉತ್ಪಾದನೆ ಹೆಚ್ಚುತ್ತದೆ. ದೊಡ್ಡ ಮಟ್ಟದಲ್ಲಿ ಉದ್ಯೋಗಸೃಷ್ಟಿ ಆಗುತ್ತದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರ ಆಲೋಚನೆಗಳು ಮತ್ತು ಚಿಂತನೆಗಳು ಒಡಿಶಾದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ರಾಜ್ಯವನ್ನು ಸ್ವಾವಲಂಬನೆಗೆ ಕರೆದೊಯ್ಯುತ್ತದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

ಒಡಿಶಾ, ಹಾಗೂ ಅದರ ನೆರೆಯ ರಾಜ್ಯಗಳಾದ ಛತ್ತೀಸ್ಗಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಸಿರು ಪ್ರಗತಿ ಕಾಣಲಿವೆ. ಸ್ಥಳೀಯ ಯುವಕರನ್ನು ಈ ಕಾರ್ಯಗಳಲ್ಲಿ ಬಳಸಿಕೊಳ್ಳುವತ್ತ ಪ್ರಯತ್ನಗಳಾಗುತ್ತಿವೆ ಎಂದು ಸ್ಥಳೀಯ ಉದ್ಯೋಗಸೃಷ್ಟಿ ಬಗ್ಗೆ ಸಚಿವರು ಮಾಹಿತಿ ನೀಡಿದರು.

ಸ್ಥಳೀಯ ಭಾಷೆಯಲ್ಲಿ ಎಥನಾಲ್ ಎಂಜಿನಿಯರಿಂಗ್, ಎಕನಾಮಿಕ್ಸ್ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಸರ್ಕಾರಿ ಐಟಿಐ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಕೋರ್ಸ್ಗಳನ್ನು ರೂಪಿಸುವಂತೆ ಸಲಹೆ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಕೌಶಲ್ಯಭರಿತ ಉದ್ಯೋಗಿಗಳನ್ನು ರೂಪಿಸಲು ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.



















