LIC vs Bank Deposit: ಎಲ್​ಐಸಿ ಪಾಲಿಸಿಗೆ ಹಾಕುವ ಹಣ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ರಿಟರ್ನ್ಸ್? ಇಲ್ಲಿದೆ ಒಂದು ಹೋಲಿಕೆ

LIC New Jeevan Anand Policy Comparison With Bank Deposit: ವರ್ಷಕ್ಕೆ 10,922 ರೂ ಹಣವನ್ನು 21 ವರ್ಷ ಕಾಲ ಎಲ್​ಐಸಿ ನ್ಯೂಜೀವನ್ ಆನಂದ್ ಮತ್ತು ಬ್ಯಾಂಕ್ ಎಫ್​ಡಿಯಲ್ಲಿ ಇಟ್ಟರೆ ಅವುಗಳಿಂದ ಎಷ್ಟೆಷ್ಟು ರಿಟರ್ನ್ ಬರಬಹುದು ಎಂಬ ಲೆಕ್ಕಾಚಾರ ಇಲ್ಲಿದೆ...

LIC vs Bank Deposit: ಎಲ್​ಐಸಿ ಪಾಲಿಸಿಗೆ ಹಾಕುವ ಹಣ ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಎಷ್ಟು ಸಿಗುತ್ತೆ ರಿಟರ್ನ್ಸ್? ಇಲ್ಲಿದೆ ಒಂದು ಹೋಲಿಕೆ
ಎಲ್​ಐಸಿ ವರ್ಸಸ್ ಬ್ಯಾಂಕ್ ಠೇವಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 10, 2023 | 8:50 AM

ಇನ್ಷೂರೆನ್ಸ್ ಸ್ಕೀಮ್​ಗಳನ್ನು (Insurance Policies) ಬಹಳ ಮಂದಿ ತಪ್ಪಾಗಿ ಅರ್ಥ ಮಾಡಿಕೊಂಡಿರುವುದುಂಟು. ಹಲವು ಸ್ಕೀಮ್​ಗಳಲ್ಲಿ ನೀವು ಇಷ್ಟು ವರ್ಷ ಕಟ್ಟಿದ್ದಕ್ಕೆ ತಮಗೆ ಅಷ್ಟು ಮಾತ್ರವಾ ರಿಟರ್ನ್ ಎಂದು ಹೇಳುವುದುಂಟು. ಬ್ಯಾಂಕ್​ನಲ್ಲಿ ಎಫ್​ಡಿಯೋ, ಆರ್​ಡಿಯೋ ಇಟ್ಟಿದ್ದರೆ ಇದಕ್ಕಿಂತ ಹೆಚ್ಚು ಹಣ ರಿಟರ್ನ್ ಸಿಗುತ್ತಿತ್ತು ಎಂದು ಹೇಳುವವರಿದ್ದಾರೆ. ಇಲ್ಲಿ ಇನ್ಷೂರೆನ್ಸ್ ಸ್ಕೀಮ್​ಗಳ ಉದ್ದೇಶವೇ ಬೇರೆ, ಬ್ಯಾಂಕ್ ಠೇವಣಿಗಳ ಉದ್ದೇಶವೇ ಬೇರೆ ಎಂಬುದನ್ನು ಗಮನಿಸಬೇಕು.

ಬ್ಯಾಂಕ್ ಠೇವಣಿಗಳಾಗಲೀ, ಮ್ಯೂಚುವಲ್ ಫಂಡ್ ಎಸ್​ಐಪಿಗಳಾಗಲೀ ಅಪ್ಪಟ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಾಗಿವೆ. ಆದರೆ, ಇನ್ಷೂರೆನ್ಸ್ ಪ್ಲಾನ್​ಗಳು ನಿಮಗೆ ನಿರ್ದಿಷ್ಟ ರಿಟರ್ನ್ ಕೊಡುವುದಷ್ಟೇ ಅಲ್ಲ, ಆಕಸ್ಮಿಕವಾಗಿ ಸಾವಾದಾಗ ಪರಿಹಾರ ಕೊಡುತ್ತದೆ. ಹೀಗಾಗಿ, ವಿಮೆ ಮತ್ತು ಠೇವಣಿ ಸ್ಕೀಮ್​ಗಳ ಉದ್ದೇಶಗಳು ಭಿನ್ನ ಇರುತ್ತವೆ. ಆದಾಗ್ಯೂ ಬ್ಯಾಂಕ್ ಠೇವಣಿ ಮತ್ತು ಇನ್ಷೂರೆನ್ಸ್ ಪಾಲಿಸಿ ಬಗ್ಗೆ ಪ್ರಾಕ್ಟಿಕಲ್ ಆಗಿ ಲೆಕ್ಕ ಮಾಡಿ ಹೋಲಿಸುವ ಕೆಲಸ ಮಾಡಿಯೂ ನೋಡಬಹುದು.

ಎಲ್​ಐಸಿ ನ್ಯೂ ಜೀವನ್ ಆನಂದ್ ಮತ್ತು ಬ್ಯಾಂಕ್ ಆರ್​ಡಿ ಮಧ್ಯೆ ಒಂದು ಹೋಲಿಕೆ…. ಸುಮ್ಮನೆ ಉದಾಹರಣೆಗೆ ಮಾತ್ರ ಪಾಲಿಸಿಯನ್ನು ಆಯ್ಕೆ ಮಾಡಿದ್ದೇವೆ

ಎಲ್​ಐಸಿ ನ್ಯೂ ಜೀವನ್ ಆನಂದ್ ಪಾಲಿಸಿ

  • ಸಮ್ ಅಷೂರ್ಡ್ (ಭರವಸೆ ಮೊತ್ತ): 2 ಲಕ್ಷ ರೂ
  • ಪಾಲಿಸಿ ಅವಧಿ: 21 ವರ್ಷ
  • ವರ್ಷದ ಪ್ರೀಮಿಯಂ: 10,922 ರೂ
  • ಒಟ್ಟು ಕಟ್ಟುವ ಹಣ: 2,29,362 ರೂ
  • ತೆರಿಗೆ ವಿನಾಯಿತಿ ಸೌಲಭ್ಯ ಉಪಯೋಗಿಸಿದರೆ: 22,936 ರೂ ಉಳಿತಾಯ
  • ಮೆಚ್ಯೂರ್ ಆದಾಗ ಸಿಗುವ ಮೊತ್ತ: ಅಂದಾಜು 4.36 ಲಕ್ಷ ರೂ

ಇದನ್ನೂ ಓದಿLIC Aadhaar Shila: ಎಲ್​ಐಸಿ ಆಧಾರ್ ಶಿಲಾ ಪಾಲಿಸಿ: ದಿನಕ್ಕೆ 58 ರೂನಂತೆ ಕಟ್ಟಿ, 8 ಲಕ್ಷ ರೂ ಲಾಭ ಮಾಡಿ

ಈಗ ನೀವು ಎಲ್​ಐಸಿ ಪಾಲಿಸಿಗೆ ಕಟ್ಟುವ ಹಣವನ್ನೇ ಬ್ಯಾಂಕ್ ಡೆಪಾಸಿಟ್ ಸ್ಕೀಮ್​ಗಳಲ್ಲಿ ಉಪಯೋಗಿಸಿದರೆ ಎಷ್ಟು ಸಿಗಬಹುದು? ಅದನ್ನೂ ಲೆಕ್ಕ ಮಾಡಿ ನೋಡೋಣ

ಬ್ಯಾಂಕ್ ಆರ್​ಡಿಯಲ್ಲಿ ಶೇ. 8ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ ಎಂದು ಪರಿಗಣಿಸೋಣ. ವರ್ಷಕ್ಕೆ 10,922 ರೂ ಹಣವನ್ನು 21 ವರ್ಷ ಕಟ್ಟಿದಾಗ ಎಷ್ಟು ಹಣ ಸಿಗುತ್ತೆ? ಮೆಚ್ಯೂರ್ ಆಗುವ ಮೊತ್ತ 5,94,776 ರೂ.

ಎಲ್​ಐಸಿಯಲ್ಲಿ ಮೆಚ್ಯೂರ್ ಆಗುವುದು 4.36 ಲಕ್ಷ ರೂ; ಆರ್​ಡಿಯಿಂದ ಬರುವುದು 5.95 ಲಕ್ಷ ರೂ. ಅಬ್ಬಾ 1.6 ಲಕ್ಷದಷ್ಟು ವ್ಯತ್ಯಾಸವಾ ಎಂದನಿಸಬಹುದು. ಆದರೆ, ಟ್ವಿಸ್ಟ್ ಸಿಗುವುದು ಇಲ್ಲಿಯೇ

ಆರ್​ಡಿಯಲ್ಲಿ ನೀವು ಪಡೆಯುವ ಬಡ್ಡಿ ಹಣಕ್ಕೆ ಆದಾಯ ತೆರಿಗೆ ಅನ್ವಯ ಆಗುತ್ತದೆ. ನೀವು ಆರ್​ಡಿಯಿಂದ 21 ವರ್ಷದಲ್ಲಿ ಗಳಿಸುವ ಬಡ್ಡಿ 3.65 ಲಕ್ಷ ರೂನಷ್ಟು. ಇದಕ್ಕೆ ಆದಾಯ ತೆರಿಗೆ ಪಾವತಿಸಬೇಕಾದ್ದು 73,083 ರೂ. ಅಂದರೆ, ಮೆಚ್ಯೂರ್ ಮೊತ್ತವಾದ 5,94,776 ರೂನಿಂದ 73,083 ರೂ ಅನ್ನು ಕಳೆದರೆ ಉಳಿಯುವುದು 5,21,693 ರೂ.

ಇದನ್ನೂ ಓದಿLIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್​ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ

ಈಗ ಎಲ್​ಐಸಿಯಲ್ಲಿ ಮೆಚ್ಯೂರ್ ಆಗುವ ಮೊತ್ತ 4,35,800 ರೂ. ಈ ವೇಳೆ ನೀವು ತೆರಿಗೆ ಲಾಭ ಬಳಸಿಕೊಂಡರೆ 22,936 ರೂ ಉಳಿತಾಯ ಮಾಡಬಹುದು. ಅಂದರೆ ನಿಮಗೆ ಈ ಪಾಲಿಸಿಯಿಂದ ಸಿಗುವ ಲಾಭ 4,58,736 ರೂ.

ಆದಾಯ ತೆರಿಗೆ, ತೆರಿಗೆ ಉಳಿತಾಯ ಎಲ್ಲವನ್ನೂ ಗಣಿಸಿದಾಗಲೂ ಆರ್​ಡಿಯಿಂದ ಸಿಗುವ ಹಣ ಎಲ್​ಐಸಿಗಿಂತ 62,957 ರೂನಷ್ಟು ಹೆಚ್ಚು. ಆದರೆ, ಈ ಎಲ್​ಐಸಿ ಪಾಲಿಸಿ ಮೆಚ್ಯೂರ್ ಆದಾಗ ಸರೆಂಡರ್ ಮಾಡಿದಾಗ 60,000 ರೂ ಉಳಿಯುತ್ತದೆ. ಸುಮಾರು 3,000 ರೂನಷ್ಟು ವ್ಯತ್ಯಾಸ ಬರುತ್ತದೆ. ಎಲ್​ಐಸಿ ನ್ಯೂ ಜೀವನ್ ಆನಂದ್ ಪಾಲಿಸಿಯು ಮೆಚ್ಯೂರ್ ಆದ ಬಳಿಕವೂ ಲೈಫ್ ಕವರ್ ನೀಡುತ್ತದೆ. ಆಕಸ್ಮಿಕವಾಗಿ ಸತ್ತಾಗ 2,00,000 ರೂ ಹಣವು ವಾರಸುದಾರರಿಗೆ ಸಲ್ಲುತ್ತದೆ. ಈ ಕಾರಣದಿಂದ ನೋಡಿದಾಗ ಬ್ಯಾಂಕ್ ಆರ್​ಡಿಗಿಂತ ಎಲ್​ಐಸಿ ನ್ಯೂ ಜೀವನ್ ಆನಂದ್ ಕೈ ಮೇಲು ಎನಿಸುತ್ತದೆ. ಆದರೆ ಹೂಡಿಕೆ ದೃಷ್ಟಿಯಿಂದ ಬ್ಯಾಂಕ್​ನ ಠೇವಣಿ ಯೋಜನೆಗಳು ಉತ್ತಮ ಎನಿಸುತ್ತವೆ. ಆದರೆ, ಶೇ. 8ಕ್ಕಿಂತ ಕಡಿಮೆ ಬಡ್ಡಿ ದರ ಇದ್ದರೆ ಹೆಚ್ಚು ರಿಟರ್ನ್ ಸಿಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ