LIC Aadhaar Shila: ಎಲ್​ಐಸಿ ಆಧಾರ್ ಶಿಲಾ ಪಾಲಿಸಿ: ದಿನಕ್ಕೆ 58 ರೂನಂತೆ ಕಟ್ಟಿ, 8 ಲಕ್ಷ ರೂ ಲಾಭ ಮಾಡಿ

LIC Scheme For Females: ಎಲ್​ಐಸಿ ಆಧಾರ್ ಶಿಲಾ ಪಾಲಿಸಿ ಮೆಚ್ಯೂರ್ ಆದಾಗ ಪಾಲಿಸಿದಾರಳ ವಯಸ್ಸು 70 ವರ್ಷ ಮೀರಿರಬಾರದು. ಅಂದರೆ ನೀವು 55 ರ ವಯಸ್ಸಿನಲ್ಲಿ ಈ ಪಾಲಿಸಿಯನ್ನು ಖರೀದಿಸಿದಲ್ಲಿ 20 ವರ್ಷದ ಪ್ಲಾನ್ ಅನ್ನು ಪಡೆಯಲು ಆಗುವುದಿಲ್ಲ.

LIC Aadhaar Shila: ಎಲ್​ಐಸಿ ಆಧಾರ್ ಶಿಲಾ ಪಾಲಿಸಿ: ದಿನಕ್ಕೆ 58 ರೂನಂತೆ ಕಟ್ಟಿ, 8 ಲಕ್ಷ ರೂ ಲಾಭ ಮಾಡಿ
ಎಲ್​ಐಸಿ
Follow us
|

Updated on: Jun 09, 2023 | 4:53 PM

ಎಲ್​ಐಸಿ ಭಾರತದ ನಂಬರ್ ಒನ್ ವಿಮಾ ಸಂಸ್ಥೆ. ಹಲವು ವೈವಿಧ್ಯಮಯ ಪಾಲಿಸಿ ಪ್ಲಾನ್​ಗಳನ್ನು ಹೊಂದಿರುವ ಎಲ್​ಐಸಿಯಲ್ಲಿ (LIC) ಎಲ್ಲರ ಅಗತ್ಯಗಳಿಗೆ ತಕ್ಕಂತಹ ಸ್ಕೀಮ್​ಗಳಿವೆ. ನಿಶ್ಚಿತ ರಿಟರ್ನ್ ಕೊಡುವ ಪ್ಲಾನ್​ಗಳಿಂದ ಹಿಡಿದು ಷೇರುಜೋಡಿತ ಪ್ಲಾನ್​ಗಳವರೆಗೆ ನೀವು ಎಲ್​ಐಸಿ ಪಾಲಿಸಿಯ ಆಯ್ಕೆ ಪಡೆಯಬಹುದು. ಎಲ್​ಐಸಿಯ ನ್ಯೂ ಜೀವನ್ ಆನಂದ್ ಇತ್ಯಾದಿ ಕೆಲ ಜನಪ್ರಿಯ ಪಾಲಿಸಿಗಳಿಗೆ ಹೊರತಾಗಿಯೂ ಬೇರೆ ಪ್ರಮುಖ ಸ್ಕೀಮ್​ಗಳು ಎಲ್​ಐಸಿಯಲ್ಲಿ ಇವೆ. ಅದರಲ್ಲಿ ಎಲ್​ಐಸಿ ಆಧಾರ್ ಶಿಲಾ ಯೋಜನೆಯೂ (LIC Aadhaar Shila Plan) ಒಂದು. ಇದು ಮಹಿಳೆಯರಿಗೆಂದೇ ರೂಪಿಸಲಾದ ಸ್ಕೀಮ್ ಎಂಬುದು ವಿಶೇಷ. 8ರಿಂದ 55 ವರ್ಷದೊಳಗಿನ ಮಹಿಳೆಯರು ಈ ಸ್ಕೀಮ್ ಪಡೆಯಬಹುದಾಗಿದ್ದು 75,000 ರೂನಿಂದ 3,00,000 ರೂವರೆಗೂ ಹೂಡಿಕೆ ಮಾಡಬಹುದು. ಇದರಲ್ಲಿ 8 ಲಕ್ಷ ರೂವರೆಗೂ ರಿಟರ್ನ್ ಪಡೆಯುವ ಅವಕಾಶ ಇದೆ.

ಎಲ್​ಐಸಿ ಆಧಾರ್ ಶಿಲಾ ಯೋಜನೆಗೆ ಆಧಾರ್ ಹೆಸರು ಇರುವುದು ಯಾಕೆ?

ಈ ಪಾಲಿಸಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತದೆ. ನೀವು ಈ ಪಾಲಿಸಿ ಮಾಡಿಸಬೇಕೆಂದರೆ ಆಧಾರ್ ದಾಖಲೆ ಕಡ್ಡಾಯ.

  • ಪಾಲಿಸಿ ಹೆಸರು: ಆಧಾರ್ ಶಿಲಾ ಪ್ಲಾನ್
  • ಅರ್ಹತೆ: 18ರಿಂದ 55 ವರ್ಷದೊಳಗಿನ ಮಹಿಳೆಯರು
  • ಕನಿಷ್ಠ ಭರವಸೆ ಮೊತ್ತ: 3,00,000 ರೂ
  • ಗರಿಷ್ಠ ಭರವಸೆ ಮೊತ್ತ: 5,00,000 ರೂ
  • ಪಾಲಿಸಿ ಅವಧಿ: 10-20 ವರ್ಷ
  • ಪಾಲಿಸಿದಾರಳ ಕನಿಷ್ಠ ವಯಸ್ಸು: 8 ವರ್ಷ
  • ಪಾಲಿಸಿದಾರಳ ಗರಿಷ್ಠ ವಯಸ್ಸು: 55 ವರ್ಷ

ಇದನ್ನೂ ಓದಿAadhaar: ಆಧಾರ್ ಅಪ್​ಡೇಶನ್; ಡೆಡ್​ಲೈನ್​ಗೆ ಕೆಲವೇ ದಿನ; ಜೂನ್ 14ರೊಳಗೆ ಹೇಗೆ ಮಾಡುವುದು? ಅಪ್​ಡೇಟ್ ಮಾಡದಿದ್ದರೆ ಮುಂದೇನು?

ಪಾಲಿಸಿ ಮೆಚ್ಯೂರ್ ಆದಾಗ ಪಾಲಿಸಿದಾರಳ ವಯಸ್ಸು 70 ವರ್ಷ ಮೀರಿರಬಾರದು. ಅಂದರೆ ನೀವು 55 ರ ವಯಸ್ಸಿನಲ್ಲಿ ಈ ಪಾಲಿಸಿಯನ್ನು ಖರೀದಿಸಿದಲ್ಲಿ 20 ವರ್ಷದ ಪ್ಲಾನ್ ಅನ್ನು ಪಡೆಯಲು ಆಗುವುದಿಲ್ಲ. ಗರಿಷ್ಠ ಎಂದರೆ 15 ವರ್ಷದ ಪಾಲಿಸಿ ಪಡೆಯಬಹುದು.

ಪಾಲಿಸಿ ಕಂತುಗಳನ್ನು ತಿಂಗಳಿಗಾದರೂ ಕಟ್ಟಬಹುದು, ಮೂರು ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮೆಯೂ ಕಟ್ಟಡಬಹುದು.

ದಿನಕ್ಕೆ 58 ರೂ ಕಟ್ಟಿ 8 ಲಕ್ಷ ರೂ ಪಡೆಯುವುದು ಹೇಗೆ?

ನೀವು 20 ವರ್ಷ ಪಾಲಿಸಿ ಆಯ್ದುಕೊಂಡರೆ 8 ಲಕ್ಷ ರೂ ಪಡೆಯಲು ಹೇಗೆ ಸಾಧ್ಯವಾಗುತ್ತದೆ? ನೀವು ವರ್ಷಕ್ಕೆ 22,000 ರೂನಷ್ಟು ಪ್ರೀಮಿಯಮ್ ಅನ್ನು 20 ವರ್ಷ ಕಾಲ ಕಟ್ಟಿದರೆ, 4.30 ಲಕ್ಷ ರೂ ಕಟ್ಟಿದಂತಾಗುತ್ತದೆ. ನಿಮಗೆ ಬರುವ ರಿಟರ್ನ್ಸ್ 8 ಲಕ್ಷ ರೂ ಆಸುಪಾಸು ಇರುತ್ತದೆ. ಇಲ್ಲಿ ನೀವು ವರ್ಷಕ್ಕೆ 22,000 ರೂ ಸೇರಿಸಲು ದಿನಕ್ಕೆ ಸುಮಾರು 58 ರೂ ಸೇರಿಸುತ್ತಾ ಹೋಗಬೇಕಾಗುತ್ತದೆ. ತಿಂಗಳಿಗೆ 1,833 ರೂ ಕಟ್ಟಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ