
ನವದೆಹಲಿ, ನವೆಂಬರ್ 10: ದೀಪಾವಳಿ ಹಬ್ಬ ಮತ್ತು ಧನತ್ರಯೋದಶಿ ಸಂದರ್ಭದಲ್ಲಿ ಭಾರತೀಯರು ಆನ್‌ಲೈನ್ ಮೂಲಕ ನಡೆಸಿದ ಶಾಪಿಂಗ್‌ನ ಕುತೂಹಲಕಾರಿ ಅಂಕಿಅಂಶಗಳನ್ನು ‘ಇನ್‌ಸ್ಟಾಮಾರ್ಟ್’ ಬಿಡುಗಡೆ ಮಾಡಿದೆ. ನವೆಂಬರ್ 6 ರ ಧನತ್ರಯೋದಶಿ ಆರಂಭವಾಗುತ್ತಿದ್ದಂತೆ (ಮಧ್ಯರಾತ್ರಿ 12:00:30 ಕ್ಕೆ) ಹೈದರಾಬಾದ್‌ನ ಗ್ರಾಹಕರೊಬ್ಬರು 24 ಕ್ಯಾರೆಟ್‌ನ ಹೂವಿನ ವಿನ್ಯಾಸದ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೇವಲ 4 ಸೆಕೆಂಡ್‌ಗಳ ಅಂತರದಲ್ಲಿ ಬೆಂಗಳೂರಿನ ಗ್ರಾಹಕರೊಬ್ಬರು ಬೆಳ್ಳಿ ನಾಣ್ಯ ಆರ್ಡರ್ ಮಾಡಿದ್ದಾರೆ. ಇಂಥ ಕೆಲ ವಿಶೇಷ ಹಬ್ಬದ ಶಾಪಿಂಗ್ ವಿವರವನ್ನು ಇನ್‌ಸ್ಟಾಮಾರ್ಟ್ ವರದಿಯಲ್ಲಿ ಕಾಣಬಹುದು.
ಖರೀದಿಯಾದ ಪ್ರತಿ ಮೂರು ಚಿನ್ನದ ನಾಣ್ಯಗಳಲ್ಲಿ ಎರಡು ಗುಲಾಬಿ ಅಥವಾ ಹೂವಿನ ವಿನ್ಯಾಸದ್ದಾಗಿದ್ದರೆ, ಶೇ. 73 ರಷ್ಟು ಜನರು ಲಕ್ಷ್ಮಿ-ಗಣೇಶ ವಿನ್ಯಾಸದ ಬೆಳ್ಳಿ ನಾಣ್ಯಗಳನ್ನು ಇಷ್ಟಪಟ್ಟು ಖರೀದಿಸಿದ್ದಾರೆ. ಸಂಜೆ 6:38 ರ ಸಮಯವು ಅತಿ ಹೆಚ್ಚು ಚಿನ್ನ-ಬೆಳ್ಳಿ ಆರ್ಡರ್ ಬಂದ ‘ಬ್ಯುಸಿ ನಿಮಿಷ’ವಾಗಿ ದಾಖಲಾಗಿದೆ.
ದೀಪಾವಳಿ ಸಿಹಿತಿಂಡಿಗಳ ಪಟ್ಟಿಯಲ್ಲಿ ‘ಕಾಜು ಕತ್ಲಿ’ ಮೊದಲ ಸ್ಥಾನ ಪಡೆದಿದೆ. ಇದರ ನಂತರ ಮೋತಿಚೂರ್ ಲಡ್ಡು, ಬೇಸನ್ ಲಡ್ಡು, ಮೈಸೂರ್ ಪಾಕ್ ಮತ್ತು ಸೋನ್ ಪಾಪಡಿ ಅತಿ ಹೆಚ್ಚು ಮಾರಾಟವಾಗಿವೆ.
ಇದನ್ನೂ ಓದಿ: ಇಪಿಎಫ್ಒ ವಿಶ್ವಸ್ತ ಮಂಡಳಿ ಸಭೆ ನವೆಂಬರ್ 19ಕ್ಕೆ; ಕನಿಷ್ಠ ಇಪಿಎಸ್ ಪಿಂಚಣಿ ಏರಿಸುವ ಸಂಬಂಧ ಚರ್ಚೆ
ಪಾರ್ಟಿಗಳಿಗೆ ಬೇಕಾದ ವಸ್ತುಗಳ ಆರ್ಡರ್ ಕಳೆದ ವರ್ಷಕ್ಕಿಂತ ಶೇ. 162 ರಷ್ಟು ಹೆಚ್ಚಾಗಿದ್ದು, ದೀಪಾವಳಿಯ ಹಿಂದಿನ ರಾತ್ರಿ ದಿನಸಿಯೇತರ ವಸ್ತುಗಳ ಪೈಕಿ ‘ಡಯಟ್ ಕೋಕಾ ಕೋಲಾ’ ಅತಿ ಹೆಚ್ಚು ಬೇಡಿಕೆ ಪಡೆದಿದೆ. ಉಡುಗೊರೆಗಳ ವಿಭಾಗದಲ್ಲಿ ‘ಡಿನ್ನರ್ ಸೆಟ್’ ಮತ್ತು ಡ್ರೈ-ಫ್ರೂಟ್ಸ್ ಪ್ಯಾಕ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಹಬ್ಬದ ಶಾಪಿಂಗ್‌ನಲ್ಲಿ ರಾಯ್‌ಪುರ, ಮಧುರೈ, ಗುವಾಹಟಿ, ತ್ರಿಶೂರ್ ಮತ್ತು ಕೊಲ್ಲಂ ನಗರಗಳು ಭಾರಿ ಬೇಡಿಕೆ ಸೃಷ್ಟಿಸುವ ಮೂಲಕ ದೊಡ್ಡ ಮೆಟ್ರೋ ನಗರಗಳಿಗೆ ತೀವ್ರ ಪೈಪೋಟಿ ನೀಡಿವೆ.
ಇದನ್ನೂ ಓದಿ: ರಿಲಯನ್ಸ್ ಜಿಯೋ 10,000 ರೂ ಪ್ರೀಪೇಯ್ಡ್ ಪ್ಲಾನ್; ಇದರ ವ್ಯಾಲಿಡಿಟಿ, ದೈನಂದಿನ ಡಾಟಾ, ಒಟಿಟಿ ಮತ್ತಿತರ ಸೇವೆಗಳ ವಿವರ
ಮುಂಬೈನ ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ ಚಿನ್ನದ ನಾಣ್ಯಗಳಿಗಾಗಿ ಬರೋಬ್ಬರಿ 1.11 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಬೆಂಗಳೂರಿನ ಗ್ರಾಹಕರೊಬ್ಬರು 2 ಗ್ರಾಂ ಲಕ್ಷ್ಮಿ ಚಿನ್ನದ ನಾಣ್ಯದ ಜೊತೆಗೆ ಅಡುಗೆಗೆ ಬಳಸುವ ‘ಆಲಿವ್ ಆಯಿಲ್’ ಖರೀದಿಸಿದ್ದಾರೆ. ಗುರುಗ್ರಾಮ್ನಲ್ಲಿ 1 ಗ್ರಾಂ ಚಿನ್ನದೊಂದಿಗೆ ಮಗುವಿನ ‘ಲಂಚ್ ಬಾಕ್ಸ್’ ಹಾಗೂ ದೆಹಲಿಯಲ್ಲಿ ಎಲ್.ಇ.ಡಿ ಕರ್ಟನ್ ಲೈಟ್ಸ್ ಆರ್ಡರ್ ಮಾಡಲಾಗಿದೆ. ನೋಯ್ಡಾದಲ್ಲಿ ಹಬ್ಬದ ಸ್ವಚ್ಛತೆಗಾಗಿ ಏರ್ ಪ್ಯೂರಿಫೈಯರ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಖರೀದಿಸಿರುವುದು ವಿಶೇಷವಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ