ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್

India's exports rise by 15pc says Commerce minister Piyush Goyal: ಭಾರತದ ಸರಕುಗಳ ರಫ್ತು ಸಖತ್ ಏರಿಕೆ ಆಗಿದೆ ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಅವರ ಪ್ರಕಾರ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಜೂನ್ 14) ರಫ್ತು ಶೇ. 15ರಷ್ಟು ಹೆಚ್ಚಳ ಆಗಿದೆ. ಜೂನ್ ತಿಂಗಳ ಆಮದು ಮತ್ತು ರಫ್ತು ದತ್ತಾಂಶವು ಜುಲೈ 15ರಂದು ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.

ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್
ಪಿಯೂಶ್ ಗೋಯಲ್
Image Credit source: PTI

Updated on: Jun 21, 2026 | 2:58 PM

ಮುಂಬೈ, ಜೂನ್ 21: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಮತ್ತು ಸವಾಲುಗಳು ಇದ್ದರೂ ಸಹ, ಭಾರತದ ರಫ್ತು ವಲಯವು ಉತ್ತಮ ಸಾಧನೆ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಜೂನ್ 14ರವರೆಗೆ (ಏಪ್ರಿಲ್ 1ರಿಂದ ಜೂನ್ 14) ದೇಶದ ಸರಕುಗಳ ರಫ್ತು (Mercantile Exports) ಶೇಕಡಾ 15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ತಿಳಿಸಿದ್ದಾರೆ. ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಜಾಗತಿಕ ಆರ್ಥಿಕ ಪರಿಸ್ಥಿತಿ ಅಷ್ಟು ಪೂರಕವಾಗಿಲ್ಲದಿದ್ದರೂ, ಭಾರತದ ರಫ್ತು ವಲಯವು ಈ ಬೆಳವಣಿಗೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ. ಸರ್ಕಾರದ ನೀತಿಗಳು ಮತ್ತು ರಫ್ತು ಉತ್ತೇಜಕ ಕ್ರಮಗಳು ಇದಕ್ಕೆ ಸಹಕಾರಿಯಾಗಿವೆ ಎಂಬುದು ಸಚಿವರ ಅಭಿಪ್ರಾಯವಾಗಿದೆ. ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ಹೇರಿದರೂ 2025-26ರಲ್ಲಿ ಭಾರತ ಉತ್ತಮ ರಫ್ತು ದಾಖಲಿಸಿರುವ ಸಂಗತಿಯನ್ನು ವಾಣಿಜ್ಯ ಸಚಿವರು ಎತ್ತಿ ತೋರಿಸಿದರು.

ಇದನ್ನೂ ಓದಿ: ವಿಶ್ವಬ್ಯಾಂಕ್​ನಿಂದ 1.5 ಬಿಲಿಯನ್, ಎಡಿಬಿಯಿಂದ 1 ಬಿಲಿಯನ್ ಡಾಲರ್ ಸಾಲ ಪಡೆಯಲಿರುವ ಭಾರತ

‘ಈಗಲೂ ಕೂಡ ನೀವು ಏಪ್ರಿಲ್​ನಿಂದ ಹಿಡಿದು ಜೂನ್​ನ 14 ದಿನಗಳವರೆಗೆ ದತ್ತಾಂಶ ನನ್ನ ಬಳಿ ಇದೆ. ಈ ಅವಧಿಯಲ್ಲಿ ರಫ್ತು ಶೇ. 15ರಷ್ಟು ಹೆಚ್ಚಿದೆ ಎಂದವರು ಹೇಳಿದರು.

ಜೂನ್ ತಿಂಗಳ ಆಮದು ಮತ್ತು ರಫ್ತು ದತ್ತಾಂಶವನ್ನು ಸರ್ಕಾರ ಜುಲೈ 15ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಕಳೆದ ವಾರ ಮೇ ತಿಂಗಳ ರಫ್ತು ದತ್ತಾಂಶ ಬಿಡುಗಡೆ ಆಗಿತ್ತು. ಅದರ ಪ್ರಕಾರ ರಫ್ತು ಮೇ ತಿಂಗಳಲ್ಲಿ 45.2 ಬಿಲಿಯನ್ ಡಾಲರ್​ಗೆ ಏರಿತ್ತು. ಶೇ. 18ರಷ್ಟು ಹೆಚ್ಚಳ ಅದು. ಕಳೆದ ಆರು ತಿಂಗಳಲ್ಲೇ ಗರಿಷ್ಠ ರಫ್ತು ಮಟ್ಟವಾಗಿದೆ.

ಇದನ್ನೂ ಓದಿ: 2008ರ ಆರ್ಥಿಕ ಹಿಂಜರಿತದಂತೆ ಕಾಡಲಿದೆಯೇ ಕೃತಕ ಬುದ್ಧಿಮತ್ತೆ?: ಜಾಗತಿಕ ಎಐ ಹೂಡಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ ಪ್ರೊ. ಅಶ್ವತ್ ದಾಮೋದರನ್

ದೇಶದ ವಿದೇಶಿ ವ್ಯಾಪಾರ ವಲಯದಲ್ಲಿನ ಈ ಧನಾತ್ಮಕ ಬೆಳವಣಿಗೆಯು ಭಾರತದ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಮತ್ತು ಮುಂಬರುವ ದಿನಗಳಲ್ಲಿ ರಫ್ತು ವಲಯ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us