
ನವದೆಹಲಿ, ಜುಲೈ 15: ಕೇಂದ್ರ ಸಂಪುಟ ಇವತ್ತು ಅನುಮೋದನೆ ನೀಡಿರುವ 2.19 ಲಕ್ಷ ಕೋಟಿ ರೂ ವೆಚ್ಚದ ಏಳು ಯೋಜನೆಗಳಲ್ಲಿ ಬಹಳ ಮುಖ್ಯವೆನಿಸಿರುವುದು ಮೊಬೈಲ್ ಪಿಎಲ್ಐ 2.0 ಸ್ಕೀಮ್. ಇದು 62,500 ಕೋಟಿ ರೂ ಬಜೆಟ್ ವೆಚ್ಚದ್ದಾಗಿದ್ದು, ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಎನಿಸಲಿದೆ. ಈಗಾಗಲೇ ಮೊಬೈಲ್ ತಯಾರಿಕೆಗೆ ಪಿಎಲ್ಐ ಸ್ಕೀಮ್ ಇದ್ದು ಅದರ ಅವಧಿ ಮುಗಿದಿದೆ. ಈಗ ಎರಡನೇ ಆವೃತ್ತಿಯ ಸ್ಕೀಮ್ ಇದಾಗಿದೆ. ಈ ನೂತನ ‘ಮೊಬೈಲ್ ಫೋನ್ ಉತ್ಪಾದನಾ ಯೋಜನೆ’ (Mobile Phone Manufacturing Scheme – MPMS) ಕೇವಲ ಮೊಬೈಲ್‌ಗಳನ್ನು ಜೋಡಿಸುವ (ಅಸೆಂಬ್ಲಿಂಗ್) ಕೆಲಸಕ್ಕೆ ಸೀಮಿತವಾಗಿರದೆ, ಭಾರತವನ್ನು ಜಾಗತಿಕ ಮಟ್ಟದ ಸ್ವಾವಲಂಬಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಹಬ್ ಆಗಿ ರೂಪಿಸುವ ಮತ್ತು ಪ್ರಮುಖವಾಗಿ ಭಾರತದ್ದೇ ಆದ ಸ್ವಂತ ಮೊಬೈಲ್ ಬ್ರಾಂಡ್‌ಗಳನ್ನು ಜಾಗತಿಕವಾಗಿ ಬೆಳೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.
ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಮುಂದಿನ 5 ವರ್ಷಗಳಲ್ಲಿ (ಹಣಕಾಸು ವರ್ಷ 2026-27 ರಿಂದ 2030-31ರ ವರೆಗೆ) ಈ ಯೋಜನೆಯ ಜಾರಿಯಿಂದ ದೇಶದಲ್ಲಿ ಸುಮಾರು 60,000 ಹೊಸ ನೇರ ಉದ್ಯೋಗಗಳು (Direct Jobs) ಸೃಷ್ಟಿಯಾಗಲಿವೆ. ಇದರ ಜೊತೆಗೆ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಇದನ್ನೂ ಓದಿ: ಸೆಮಿಕಂಡಕ್ಟರ್, ಮೂಲಸೌಕರ್ಯ, ಮೊಬೈಲ್ ಫೋನ್ ಉತ್ಪಾದನೆ ಸೇರಿದಂತೆ ಏಳು ಪ್ರಮುಖ ಯೋಜನೆಗಳಿಗೆ ಸರ್ಕಾರದ ಅನುಮೋದನೆ
ಯೋಜನೆಗಾಗಿ ಸರ್ಕಾರ ರೂ. 62,500 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಈ 5 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸುಮಾರು 39 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಸುಮಾರು ರೂ. 15 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಫೋನ್‌ಗಳು ವಿದೇಶಕ್ಕೆ ರಫ್ತಾಗುವ ಗುರಿ ಹೊಂದಲಾಗಿದೆ.
ಮೊಬೈಲ್ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಅತ್ಯಂತ ಆಕರ್ಷಕವಾದ ಸಬ್ಸಿಡಿ/ಪ್ರೋತ್ಸಾಹ ಧನವನ್ನು ಘೋಷಿಸಿದೆ. ಈ ಪ್ರೋತ್ಸಾಹ ಧನದ ವಿವರ, ಶೇಕಡವಾರು ದರ ಮತ್ತು ಅದನ್ನು ಯಾಕಾಗಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ಈ ಕೆಳಕಂಡಂತಿದೆ:
ಇದನ್ನೂ ಓದಿ: ಐಬಿಎಂ ಮಹಾಪತನ; ಆರು ದಶಕದಲ್ಲೇ ಹೀನಾಯ ಪ್ರದರ್ಶನ; 6.7 ಲಕ್ಷ ಕೋಟಿ ರೂ ಮೌಲ್ಯನಷ್ಟ; ಈ ಕುಸಿತಕ್ಕೆ ಏನು ಕಾರಣ?
ಭಾರತವು ಜಾಗತಿಕವಾಗಿ ಕೇವಲ ಮೊಬೈಲ್‌ಗಳನ್ನು ಜೋಡಿಸುವ ದೇಶವಾಗುಳಿಯದೆ, ತನ್ನದೇ ಆದ ಪೇಟೆಂಟ್‌ಗಳನ್ನು (H/W Patents) ಹೊಂದಿ, ತಂತ್ರಜ್ಞಾನದ ಸಾರ್ವಭೌಮತ್ವವನ್ನು (Technological Sovereignty) ಸಾಧಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ