ಬೀಟಾ ಗ್ರೂಪ್ ಮುಖ್ಯಸ್ಥರ ಸ್ಫೂರ್ತಿಯುತ ಕತೆ; ಸತತ ಕಷ್ಟ, ಸವಾಲುಗಳ ನಡುವೆ ಯಶಸ್ಸಿನ ಉದ್ಯಮ ಕಟ್ಟಿದ ರಾಜಮೋಹನ್ ಪಿಳ್ಳೈ

Inspiring story of J Rajmohan Pillai, the chairman of Beta Group: ಕೇರಳದ ಜೆ. ರಾಜಮೋಹನ್ ಪಿಳ್ಳೈ ಅವರು 2 ಬಿಲಿಯನ್ ಡಾಲರ್ ಮೌಲ್ಯದ ಬೀಟಾ ಗ್ರೂಪ್​ನ ಸಂಸ್ಥಾಪಕರು. ಆದರೆ, ಈ ಯಶಸ್ವಿ ಉದ್ಯಮ ಕಟ್ಟುವ ಮುಂಚಿನ ಅವರ ಶ್ರಮ ಬಹಳ ದೊಡ್ಡದು. ಸತತ ಸವಾಲುಗಳು, ಕಷ್ಟಗಳ ನಡುವೆ ಎದೆಗುಂದದೆ ಹೇಗೆ ಉದ್ದಿಮೆ ಕಟ್ಟಿ ಬೆಳೆಸಿದರು ಎಂಬುದು ಪ್ರೇರಣಾದಾಯಕ ಕಥೆ ಎನಿಸುತ್ತದೆ.

ಬೀಟಾ ಗ್ರೂಪ್ ಮುಖ್ಯಸ್ಥರ ಸ್ಫೂರ್ತಿಯುತ ಕತೆ; ಸತತ ಕಷ್ಟ, ಸವಾಲುಗಳ ನಡುವೆ ಯಶಸ್ಸಿನ ಉದ್ಯಮ ಕಟ್ಟಿದ ರಾಜಮೋಹನ್ ಪಿಳ್ಳೈ
ರಾಜ್‌ಮೋಹನ್ ಪಿಳ್ಳೈ
Image Credit source: X @rajmohanpillai

Updated on: Aug 26, 2026 | 4:00 PM

ಬಾಲ್ಯದಿಂದಲೂ ಡಿಸ್ಲೆಕ್ಸಿಯಾ (ಕಲಿಕೆಯ ಸಮಸ್ಯೆ) ತೊಂದರೆಯನ್ನು ಎದುರಿಸಿಕೊಂಡು ಬಂದವರು… 18 ವರ್ಷ ವಯಸ್​ಸಿನಲ್ಲಿ 40 ಕೋಟಿ ರೂ ಸಾಲದ ಹೊರೆ, ತಿಂಗಳ ಬಡ್ಡಿಯೇ 55 ಲಕ್ಷ ರೂ, ಸಾಲದಕ್ಕೆ ನೂರಕ್ಕೂ ಹೆಚ್ಚು ಕೋರ್ಟ್ ಕೇಸ್​ಗಳು… ಇವು ಯಾವುದೇ ವ್ಯಕ್ತಿಯನ್ನು ಸುಲಭವಾಗಿ ಎದೆಗುಂದಿಸಲು ಸಾಧ್ಯ. ಆದರೆ, ಬೀಟಾ ಗ್ರೂಪ್ (Beta Group) ಸಂಸ್ಥೆಯ ಅಧ್ಯಕ್ಷರಾದ ಜಿ. ರಾಜ್‌ಮೋಹನ್ ಪಿಳ್ಳೈ (J Rajmohan Pillai) ಅವರದ್ದು ಅದ್ಭುತ ಎದೆಗಾರಿಕೆಯ ವ್ಯಕ್ತಿತ್ವ. ಜೀವನದುದ್ದಕ್ಕೂ ನಿರಂತರವಾಗಿ ಎದುರಾಗುತ್ತಿದ್ದ ಅಡೆತಡೆಗಳನ್ನು ದಾಟಿ ಅವರು ಯಶಸ್ವಿ ಉದ್ಯಮಿ ಎನಿಸಿದ್ದಾರೆ. ಎರಡು ಬಿಲಿಯನ್ ಡಾಲರ್ (19,000 ಕೋಟಿ ರೂ) ಮೌಲ್ಯದ ಉದ್ಯಮ ಕಟ್ಟಿದ್ದಾರೆ. ಉದ್ದಿಮೆದಾರರಾಗಬೇಕೆನ್ನುವ ಸಾಮಾನ್ಯ ವ್ಯಕ್ತಿಗಳಿಗೆ 67 ವರ್ಷದ ಜೆ ರಾಜಮೋಹನ್ ಪಿಳ್ಳೈ ಅವರ ಜೀವನ ಒಂದು ಸ್ಫೂರ್ತಿದಾಯಕ ಕಥೆ ಎನಿಸಬಲ್ಲುದು.

ಆರಂಭಿಕ ಸವಾಲುಗಳು ಹಾಗೂ ಸಂಕಷ್ಟ: ರಾಜ್‌ಮೋಹನ್ ಅವರಿಗೆ 18 ವರ್ಷ ವಯಸ್ಸಿದ್ದಾಗ (ಬಿ.ಕಾಂ ಮೊದಲ ವರ್ಷದ ವಿದ್ಯಾರ್ಥಿ), ತಂದೆಯ ಅನಾರೋಗ್ಯದ ಕಾರಣದಿಂದಾಗಿ ಕುಟುಂಬದ ಉದ್ಯಮವನ್ನು ವಹಿಸಿಕೊಳ್ಳಬೇಕಾಯಿತು. ಆದರೆ, ಅವರಿಗೆ ಸಿಕ್ಕಿದ್ದು ಯಶಸ್ವಿ ಉದ್ಯಮವಲ್ಲ, ಬದಲಾಗಿ 40 ಕೋಟಿ ರೂ ಸಾಲ, 175ಕ್ಕೂ ಹೆಚ್ಚು ಕೋರ್ಟ್ ಕೇಸ್‌ಗಳು. ಅವರಿಗೆ ಇದ್ದದ್ದು ಕೇವಲ 3 ಕೋಟಿ ರೂ. ಮೌಲ್ಯದ ಆಸ್ತಿ.

ಇದನ್ನೂ ಓದಿ: ಅಮೆರಿಕದ ಸುಂಕ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಭಾರತೀಯ ಆರ್ಥಿಕತೆ ಬಲವಾಗಿದೆ: ಆರ್‌ಬಿಐ

ಬ್ಯಾಂಕ್ ಹಾಗೂ ಸರ್ಕಾರಿ ಏಜೆನ್ಸಿಗಳು ಹಣ ಪಾವತಿಸಲು ಒತ್ತಡ ಹೇರುತ್ತಿದ್ದವು, ಜೊತೆಗೆ ಆಸ್ತಿ ಮತ್ತು ಕಾರುಗಳನ್ನು ಜಪ್ತಿ ಮಾಡಲಾಗಿತ್ತು. ತಿಂಗಳಿಗೆ ₹55 ಲಕ್ಷ ಬಡ್ಡಿ ಕಟ್ಟಬೇಕಾದ ಪರಿಸ್ಥಿತಿಯಿತ್ತು. ನಂತರ ಅವರ ಸಹೋದರ ರಾಜನ್ ಪಿಳ್ಳೈ ಅವರ ನಿಧನದ ಬಳಿಕ ಹೆಚ್ಚುವರಿ 103 ಮಿಲಿಯನ್ ಡಾಲರ್ (₹1,000 ಕೋಟಿ) ಸಾಲದ ಹೊರೆ ಸೇರಿಕೊಂಡಿತು.

ಟೆಡ್ ಎಕ್ಸ್​ನಲ್ಲಿ ರಾಜಮೋಹನ್ ಪಿಳ್ಳೈ ಅವರ ಕಥೆ…
YouTube video player

ಬೆಂಬಲ ನೀಡಿದ ತಾಯಿ: ಬಾಲ್ಯದಲ್ಲಿ ಡಿಸ್ಲೆಕ್ಸಿಯಾ (Dyslexia) ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಅವರ ತಾಯಿ ಶಿಕ್ಷಣ ಮತ್ತು ಜೀವನದಲ್ಲಿ ಶಿಸ್ತು ಕಲಿಸಿ ಧೈರ್ಯ ತುಂಬಿದ್ದರು. ಉದ್ಯಮದ ಮಹಾ ಬಿಕ್ಕಟ್ಟಿನ ಸಮಯದಲ್ಲೂ ತಾಯಿಯ ನುಡಿಗಳೇ ಅವರಿಗೆ ದಾರಿದೀಪವಾದವು.

ಒಂದೊಂದೇ ಸಮಸ್ಯೆ ನಿವಾರಿಸಿಕೊಂಡು ಬಂದ ರಾಜಮೋಹನ್

ಮುಳುಗಿಹೋಗುತ್ತಿದ್ದ ಅಪ್ಪನ ಬ್ಯುಸಿನೆಸ್​ಗೆ ಅವರು ಎಂಟ್ರಿ ಕೊಟ್ಟಿದ್ದಾಗ ವಯಸ್ಸಿನ್ನೂ 18 ವರ್ಷ. ಅನುಭವ ಶೂನ್ಯ. ಸಮಸ್ಯೆಗಳು ನೂರಾರು. ಅದರೆ, ಜಗಮೋಹನ್ ಧೃತಿಗೆಡಲಿಲ್ಲ. ಒಂದೊಂದೇ ಸಮಸ್ಯೆ ನಿವಾರಿಸುವ ಕೆಲಸ ಮಾಡತೊಡಗಿದರು. ಅವರ ಮುಂದಿದ್ದದ್ದು ಸಾಲ ತೀರಿಸುವ ಗುರಿ. 27 ವರ್ಷಗಳ ನಿರಂತರ ಹೋರಾಟದ ನಂತರ, ಅವರು ಎಲ್ಲ ಸಾಲಗಳನ್ನು ತೀರಿಸಿ, ಸಾಲಮುಕ್ತರಾದರು.

ಇದನ್ನೂ ಓದಿ: ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ಹೂಡಿಕೆ ಮಾಡುವ ಮುನ್ನ ಈ ವಿಷಯಗಳು ತಿಳಿದಿರಲಿ

ಇಂದಿನ ಬೀಟಾ ಗ್ರೂಪ್: ಪ್ರಸ್ತುತ ಬೀಟಾ ಗ್ರೂಪ್ 2 ಬಿಲಿಯನ್ ಡಾಲರ್ (ಸುಮಾರು ₹19,000+ ಕೋಟಿ) ಮೌಲ್ಯದ ಬಹುರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದಿದೆ. ‘ನಟ್ ಕಿಂಗ್’ (Nut King) ಬ್ರ್ಯಾಂಡ್ ಸೇರಿದಂತೆ ಗೋಡಂಬಿ, ಬಾದಾಮಿ, ಪಿಸ್ತಾ, ಜ್ಯೂಸ್, ಲಾಜಿಸ್ಟಿಕ್ಸ್, ಮನರಂಜನೆ ಮತ್ತು ಕನ್ಸಲ್ಟೆನ್ಸಿ ವಲಯಗಳಲ್ಲಿ ಈ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಕೇವಲ 18ನೇ ವಯಸ್ಸಿನಲ್ಲಿ ಸಾಲದ ಸುಳಿಯಲ್ಲಿದ್ದುಕೊಂಡು, ಸೋಲನ್ನೊಪ್ಪಿಕೊಳ್ಳದೆ 27 ವರ್ಷಗಳ ಕಾಲ ಶ್ರಮಿಸಿ ಕುಟುಂಬದ ಗೌರವವನ್ನು ಮರಳಿ ತಂದುಕೊಟ್ಟ ರಾಜ್‌ಮೋಹನ್ ಪಿಳ್ಳೈ ಅವರ ಪಯಣ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us