Post Office Monthly Income Scheme: ಪೋಸ್ಟ್​ ಆಫೀಸ್​ನ ಈ ಯೋಜನೆ ಅಡಿಯಲ್ಲಿ ಹಣ ಉಳಿಸಿ ರೂ. 3300 ಗಳಿಸಿ

| Updated By: Srinivas Mata

Updated on: Jun 15, 2022 | 6:08 PM

ಪೋಸ್ಟ್ ಆಫೀಸ್ ಮಂತ್ಲಿ ಇನ್​ಕಮ್​ನ ಈ ಯೋಜನೆಯಡಿ 50 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 3300 ರೂಪಾಯಿ ಪೆನ್ಷನ್ ದೊರೆಯುತ್ತದೆ. ಲೆಕ್ಕಾಚಾರ ಹೇಗೆ ಎಂಬುದು ಇಲ್ಲಿದೆ.

Post Office Monthly Income Scheme: ಪೋಸ್ಟ್​ ಆಫೀಸ್​ನ ಈ ಯೋಜನೆ ಅಡಿಯಲ್ಲಿ ಹಣ ಉಳಿಸಿ ರೂ. 3300 ಗಳಿಸಿ
ಸಾಂದರ್ಭಿಕ ಚಿತ್ರ
Follow us on

ಕಷ್ಟಪಟ್ಟು ದುಡಿದ ಹಣವನ್ನು ಹೂಡುವಾಗ ಪ್ರಮುಖವಾಗಿ ಎರಡು ವಿಷಯಗಳು ಮನಸ್ಸಿಗೆ ಬರುತ್ತವೆ: ಭದ್ರತೆ ಮತ್ತು ಯೋಗ್ಯವಾದ ಆದಾಯ. ಅಂಚೆ ಇಲಾಖೆ ಈ ಎರಡನ್ನೂ ಒದಗಿಸುವ ವಿವಿಧ ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಅಂಥದ್ದೇ ಅತ್ಯುತ್ತಮ-ಯಶಸ್ವಿ ಯೋಜನೆ ಬಗ್ಗೆ ಈಗ ಹೇಳುತ್ತೇವೆ. ಒಮ್ಮೆ ಪೋಸ್ಟ್ ಆಫೀಸ್ MIS ಸ್ಕೀಮ್ ಪ್ರಯೋಜನಗಳ ಅಡಿಯಲ್ಲಿ ಹಣವನ್ನು ಠೇವಣಿ ಮಾಡಿದ ಮೇಲೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಬಡ್ಡಿ ಹಣವನ್ನು ಪಡೆಯಬಹುದು. ಇದರ ಜೊತೆಯಲ್ಲಿ, ಸ್ಕೀಮ್​ ಮೆಚ್ಯೂರ್​ ಆದ ಮೇಲೆ ಒಂದು-ಬಾರಿ ಹಣವನ್ನು ಹಿಂತಿರುಗಿಸಲಾಗುತ್ತದೆ. ಪೋಸ್ಟ್ ಆಫೀಸ್ (post office) ಎಂಐಎಸ್ ಮೇಲಿನ ಬಡ್ಡಿ ದರ ಈಗ ಪ್ರತಿ ವರ್ಷ ಶೇಕಡಾ 6.6ರಷ್ಟಿದೆ. ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಒಂದು ಖಾತೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 4.5 ಲಕ್ಷ ರೂಪಾಯಿ ಇದ್ದು, ಜಂಟಿ ಖಾತೆಯ ಗರಿಷ್ಠ ಹೂಡಿಕೆ ಮಿತಿ 9 ಲಕ್ಷ ರೂಪಾಯಿ ಆಗಿದೆ. ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿದೆ.

ವಯಸ್ಕ: ಮೂರು ವಯಸ್ಕರವರೆಗೆ ಜಂಟಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ/ ಮಾನಸಿಕವಾಗಿ ಬೆಳವಣಿಗೆ ಇರದ ವ್ಯಕ್ತಿಯ ಪರವಾಗಿ ಪಾಲಕರು (Guardian) ಅಗತ್ಯ. 10 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮದೇ ಹೆಸರಿನಲ್ಲಿ ಖಾತೆ ತೆರೆಯಬಹುದು.

ಅಂಚೆ ಕಚೇರಿ MIS ಠೇವಣಿ ಕನಿಷ್ಠ 1000 ರೂಪಾಯಿ. ಮತ್ತು ಅದಕ್ಕೆ ಮೇಲ್ಪಟ್ಟಂತೆ 100ರ ಗುಣಕದಲ್ಲಿ ಹಣ ಕಟ್ಟಿ ಖಾತೆ ತೆರೆಯಬಹುದು. ಒಂದು ಖಾತೆಯಲ್ಲಿ ರೂ. 4.50 ಲಕ್ಷ, ಜಂಟಿ ಖಾತೆಯಲ್ಲಿ ರೂ. 9 ಲಕ್ಷ ಇಡಬಹುದು. ಎಲ್ಲ ಜಂಟಿ ಖಾತೆದಾರರು ಜಂಟಿ ಖಾತೆಯಲ್ಲಿನ ಹೂಡಿಕೆಯ ಸಮಾನ ಭಾಗವನ್ನು ಹೊಂದಿರಬೇಕು. ಎಲ್ಲ MIS ಖಾತೆಗಳಲ್ಲಿ ವ್ಯಕ್ತಿಯ ಒಟ್ಟು ಠೇವಣಿ/ಷೇರುಗಳು ರೂ. 4.50 ಲಕ್ಷ ಮೀರಬಾರದು. ಅಪ್ರಾಪ್ತ ವಯಸ್ಕರ ಪರವಾಗಿ ಪಾಲಕರಾಗಿ ತೆರೆಯಲಾದ ಖಾತೆಯ ಮಿತಿಯು ಪ್ರತ್ಯೇಕವಾಗಿರುತ್ತದೆ.

ಎಂಐಎಸ್ ಲೆಕ್ಕಾಚಾರ ಎಂಐಎಸ್ ಕ್ಯಾಲ್ಕುಲೇಟರ್ ಪ್ರಕಾರ, ಯಾರಾದರೂ ಈ ಖಾತೆಗೆ ಒಮ್ಮೆ 50,000 ರೂಪಾಯಿಗಳನ್ನು ಹಾಕಿದರೆ ತಿಂಗಳಿಗೆ 275 ರೂಪಾಯಿ ಅಥವಾ ವರ್ಷಕ್ಕೆ 3,300 ರೂಪಾಯಿಗಳನ್ನು ಪಡೆಯುತ್ತಾರೆ. ಅಂದರೆ, ಐದು ವರ್ಷಗಳ ಅವಧಿಯಲ್ಲಿ 16,500 ರೂಪಾಯಿ ಬಡ್ಡಿಯನ್ನು ಪಡೆಯುತ್ತಾರೆ. ಅದೇ ರೀತಿ, 1 ಲಕ್ಷ ರೂಪಾಯಿಗಳ ಠೇವಣಿಗೆ ತಿಂಗಳಿಗೆ 550 ರೂಪಾಯಿ, ಪ್ರತಿ ವರ್ಷ 6600 ರೂಪಾಯಿ ಮತ್ತು ಐದು ವರ್ಷಗಳ ನಂತರ 33,000 ರೂಪಾಯಿ ಪಡೆಯುತ್ತಾರೆ. ಐದು ವರ್ಷಗಳಲ್ಲಿ ರೂ. 4.5 ಲಕ್ಷವು ತಿಂಗಳಿಗೆ ರೂ. 2475, ವರ್ಷಕ್ಕೆ ರೂ 29,700 ಮತ್ತು 5 ವರ್ಷದಲ್ಲಿ ಬಡ್ಡಿ ರೂಪವಾಗಿ ರೂ. 1,48,500 ಗಳಿಸುತ್ತದೆ.

ಅಂಚೆ ಕಚೇರಿ MIS ಬಡ್ಡಿ ಆರಂಭದ ದಿನಾಂಕದಿಂದ ಪ್ರತಿ ತಿಂಗಳ ಕೊನೆಯಲ್ಲಿ ಮತ್ತು ಖಾತೆ ಮೆಚ್ಯೂರ್ (ಪಕ್ವ) ಆಗುವ ತನಕ ಬಡ್ಡಿಯನ್ನು ಪಾವತಿಸಲಾಗುತ್ತದೆ. ಖಾತೆದಾರರು ಮಾಸಿಕ ಬಡ್ಡಿ ಪಡೆಯದಿದ್ದರೆ ಆ ಬಡ್ಡಿಗೆ ಯಾವುದೇ ಹೆಚ್ಚುವರಿ ಬಡ್ಡಿ ನೀಡುವುದಿಲ್ಲ. ಠೇವಣಿದಾರರು ಅಧಿಕ ಠೇವಣಿ ಇಟ್ಟರೆ, ಹೆಚ್ಚುವರಿ ಠೇವಣಿ ಮರು ಪಾವತಿಯಾಗುತ್ತದೆ. ಮತ್ತು ಖಾತೆ ತೆರೆದಾಗಿನಿಂದ ಮರುಪಾವತಿ ಆಗುವ ತನಕ ಅಂಚೆ ಕಚೇರಿ ಉಳಿತಾಯ ಖಾತೆ ಬಡ್ಡಿ ಮಾತ್ರ ಅನ್ವಯವಾಗುತ್ತದೆ. ಅದೇ ಪೋಸ್ಟ್ ಆಫೀಸ್ ಅಥವಾ ಇಸಿಎಸ್​ನಲ್ಲಿ ಉಳಿತಾಯ ಖಾತೆಗೆ ಆಟೋ ಕ್ರೆಡಿಟ್ ಅನ್ನು ಬಡ್ಡಿ ಗಳಿಸಲು ಬಳಸಬಹುದು. ಸಿಬಿಎಸ್ ಪೋಸ್ಟ್ ಆಫೀಸ್‌ಗಳಲ್ಲಿ ಎಂಐಎಸ್ ಖಾತೆಯಲ್ಲಿ ಗಳಿಸಿದ ಮಾಸಿಕ ಬಡ್ಡಿಯನ್ನು ಯಾವುದೇ ಸಿಬಿಎಸ್ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಗೆ ಜಮಾ ಮಾಡಬಹುದು. ಠೇವಣಿದಾರರ ಕೈಯಲ್ಲಿ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.

ಪೋಸ್ಟ್ ಆಫೀಸ್ ಎಂಐಎಸ್ ಖಾತೆಯ ಪ್ರಿ- ಮೆಚ್ಯೂರ್ ಕ್ಲೋಷರ್ ಒಂದು ವರ್ಷದ ಮೊದಲು ಠೇವಣಿ ಹಿಂಪಡೆಯಲಾಗುವುದಿಲ್ಲ. ಒಂದು ವರ್ಷದ ನಂತರ ಆದರೆ ಮೂರು ವರ್ಷಗಳ ಮೊದಲು ಖಾತೆಯನ್ನು ಕ್ಲೋಸ್ ಮಾಡಿದರೆ ಅಸಲು ಮೊತ್ತದಿಂದ ಶೇ 2ರಷ್ಟನ್ನು ಕಡಿತ ಮಾಡಿ, ಉಳಿದ ಮೊತ್ತವನ್ನು ಪಾವತಿಸಲಾಗುತ್ತದೆ. ಮೂರು ವರ್ಷಗಳ ನಂತರ, ಆದರೆ ಐದು ವರ್ಷಗಳ ಮೊದಲು ಖಾತೆಯನ್ನು ಕ್ಲೋಸ್ ಮಾಡಿದರೆ ಅಸಲು ಮೊತ್ತದಿಂದ ಶೇ 1ರಷ್ಟು ಕಡಿತಗೊಳಿಸಿ ಉಳಿದ ಬಾಕಿಯನ್ನು ಪಾವತಿಸಲಾಗುತ್ತದೆ. ಸಂಬಂಧಿತ ಅಂಚೆ ಕಚೇರಿಗೆ ಪಾಸ್‌ಬುಕ್‌ನೊಂದಿಗೆ ಸೂಕ್ತ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಖಾತೆಯನ್ನು ಮುಂಚಿತವಾಗಿ ಕ್ಲೋಸ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Post Office Savings Scheme: ಪೋಸ್ಟ್​ ಆಫೀಸ್​ನ ಈ SCSS ಯೋಜನೆಯಡಿ ತಿಂಗಳಿಗೆ ರೂ. 8,334 ಉಳಿಸಿದರೆ 5 ವರ್ಷದಲ್ಲಿ 7 ಲಕ್ಷ ರೂ.

Published On - 6:08 pm, Wed, 15 June 22