
ನವದೆಹಲಿ, ಆಗಸ್ಟ್ 27: ಇರಾನ್‌ನ ಕರೆನ್ಸಿಯಾದ ರಿಯಾಲ್ (Rial) ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ಹಣದುಬ್ಬರದಿಂದಾಗಿ ಇರಾನ್ ಕರೆನ್ಸಿಯ ಮೌಲ್ಯವು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದು ಯುಎಸ್ ಡಾಲರ್ಗೆ 2.02 ಮಿಲಿಯನ್ ರಿಯಾಲ್ ಮೌಲ್ಯ್ಕಕೆ ಕುಸಿದಿದೆ. ಅಂದರೆ ಭಾರತದ ₹100 ಹಣ ಕೊಟ್ಟರೆ 20 ಲಕ್ಷ ರಿಯಾಲ್ (Iranian Rial) ಪಡೆಯಬಹುದು.
ಜಾಗತಿಕ ರಾಜಕೀಯ ಒತ್ತಡಗಳು ಹಾಗೂ ಅಮೆರಿಕದ ಸಾಲು ಸಾಲು ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್‌ನ ‘ರಿಯಾಲ್’ ಮೌಲ್ಯ ಸಂಪೂರ್ಣವಾಗಿ ಕುಸಿದಿದೆ.
ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆ: ಕರೆನ್ಸಿ ಮೌಲ್ಯ ಕುಸಿದು ತೀವ್ರ ಹಣದುಬ್ಬರ (Inflation) ಸ್ಥಿತಿ ಉದ್ಭವಿಸಿದೆ. ಇರಾನ್ನಲ್ಲಿ ದಿನಸಿ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಸ್ಥಳೀಯರು ಕಷ್ಟಪಡುವಂತಾಗಿದೆ. ಅಲ್ಲಿನ ಜನರು ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳಲು ಸಹ ದೊಡ್ಡ ಪ್ರಮಾಣದ ಕರೆನ್ಸಿ ನೋಟುಗಳ ಕಟ್ಟನ್ನು ಒಯ್ಯಬೇಕಾದ ದುಸ್ಥಿತಿ ಬಂದೊದಗಿದೆ.
ಇದನ್ನೂ ಓದಿ: ಮಂತ್ರಿಯಾಗ್ತಾರಾ ಟಾಟಾ ಸನ್ಸ್ ಮಾಜಿ ಛೇರ್ಮನ್? ಎನ್ ಚಂದ್ರಶೇಖರನ್ ರಾಜಕೀಯ ಪ್ರವೇಶದ ಬಗ್ಗೆ ದಟ್ಟ ವದಂತಿ
ಇರಾನ್ ಜಿಡಿಪಿ ಮತ್ತು ವಿಕೋಪಕ್ಕೆ ತಲುಪಿರುವ ಆರ್ಥಿಕತೆಯು ಅಲ್ಲಿನ ಸಾಮಾನ್ಯ ನಾಗರಿಕರ ದೈನಂದಿನ ಜೀವನೋಪಾಯವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.
ಒಂದು ಸಾವಿರ ರೂಪಾಯಿ ಮಾರಿ ನೀವು 2 ಕೋಟಿ ಇರಾನೀ ರಿಯಾಲ್ ಹಣವನ್ನು ಪಡೆಯಬಹುದು. ಅಷ್ಟು ಹಣ ಇಟ್ಟುಕೊಂಡು ವರ್ಷ ಪೂರ್ತಿ ಇರಬಹುದು ಎಂದು ಭಾವಿಸಿ ಹೋದರೆ, ಒಂದು ವಾರದ ವೆಚ್ಚಕ್ಕೂ ಅದು ಸಾಕಾಗುವುದಿಲ್ಲ. 20 ಲಕ್ಷ ರಿಯಾಲ್ಗೆ 2 ಕಿಲೋ ಟೊಮೊಟೋ ಕೂಡ ಸಿಗುವುದಿಲ್ಲವಂತೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ಬೆಲೆಗಳು ಎರಡು ಪಟ್ಟು ಮೂರು ಪಟ್ಟು ಹೆಚ್ಚಿವೆ. ಅದರಲ್ಲೂ ಔಷಧಗಳಿಗಂತೂ ವಿಪರೀತ ಬೇಡಿಕೆ ಇದೆ.
ಇದನ್ನೂ ಓದಿ: ಬೀಟಾ ಗ್ರೂಪ್ ಮುಖ್ಯಸ್ಥರ ಸ್ಫೂರ್ತಿಯುತ ಕತೆ; ಸತತ ಕಷ್ಟ, ಸವಾಲುಗಳ ನಡುವೆ ಯಶಸ್ಸಿನ ಉದ್ಯಮ ಕಟ್ಟಿದ ರಾಜಮೋಹನ್ ಪಿಳ್ಳೈ
ಇರಾನ್‌ನ ಕರೆನ್ಸಿ ಮೌಲ್ಯ ನೆಲ ಕಚ್ಚಿರುವುದರಿಂದ ಸರ್ಕಾರವು ದೇಶದೊಳಗೆ ಕನಿಷ್ಠ ವೇತನವನ್ನು ಗಣನೀಯವಾಗಿ ಹೆಚ್ಚಿಸಿದೆ. ತಿಂಗಳಿಗೆ 166 ಮಿಲಿಯನ್ ರಿಯಾಲ್ ವೇತನ ನೀಡಬೇಕು ಎಂದು ಕಟ್ಟುಪಾಡು ಮಾಡಿದೆ. ಆದರೂ ಕೂಡ ದುಬಾರಿ ಬೆಲೆಯಲ್ಲಿ ಇಷ್ಟು ಹಣ ಯಾತಕ್ಕೂ ಸಾಕಾಗದಂತಹ ಪರಿಸ್ಥಿತಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ