AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಿಯಾಗ್ತಾರಾ ಟಾಟಾ ಸನ್ಸ್ ಮಾಜಿ ಛೇರ್ಮನ್? ಎನ್ ಚಂದ್ರಶೇಖರನ್ ರಾಜಕೀಯ ಪ್ರವೇಶದ ಬಗ್ಗೆ ದಟ್ಟ ವದಂತಿ

Buzz around N Chandrasekaran entering union cabinet: ನೀಟ್ ಪ್ರಕರಣ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ನಂತರ ತೆರವಾಗಿರುವ ಶಿಕ್ಷಣ ಸಚಿವ ಸ್ಥಾನಕ್ಕೆ ಟಾಟಾ ಸನ್ಸ್ ಮಾಜಿ ಛೇರ್ಮನ್ ಸೇರ್ಪಡೆಯಾಗಲಿದ್ದಾರಾ? ಎನ್ ಚಂದ್ರಶೇಖರನ್ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಬಹುದು ಎನ್ನುವಂತಹ ವದಂತಿ ಸುದ್ದಿ ಹಬ್ಬಿದೆ. ಉನ್ನತ ಸರ್ಕಾರಿ ಅಧಿಕಾರಿಗಳಾಗಿದ್ದ ಎ ವೈಷ್ಣವ್ ಮತ್ತು ಎಸ್ ಜೈಶಂಕರ್ ಅವರಂತೆ ಚಂದ್ರಶೇಖರನ್ ಸಚಿವರಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಮಂತ್ರಿಯಾಗ್ತಾರಾ ಟಾಟಾ ಸನ್ಸ್ ಮಾಜಿ ಛೇರ್ಮನ್? ಎನ್ ಚಂದ್ರಶೇಖರನ್ ರಾಜಕೀಯ ಪ್ರವೇಶದ ಬಗ್ಗೆ ದಟ್ಟ ವದಂತಿ
ಎನ್ ಚಂದ್ರಶೇಖರನ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2026 | 11:58 AM

Share

ನವದೆಹಲಿ, ಆಗಸ್ಟ್ 27: ಇತ್ತೀಚೆಗಷ್ಟೇ ಟಾಟಾ ಸನ್ಸ್ (Tata Sons) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದ ಉದ್ಯಮ ರಂಗದ ದಿಗ್ಗಜ ಎನ್. ಚಂದ್ರಶೇಖರನ್ (N Chandrasekaran) ಅವರು ಕೇಂದ್ರ ಸಚಿವ ಸಂಪುಟವನ್ನು ಸೇರಬಹುದು ಎಂಬ ವದಂತಿ ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಸಂಭಾವ್ಯ ಮೋದಿ ಮಂತ್ರಿಮಂಡಲ ಪುನಾರಚನೆ (cabinet reshuffle) ವೇಳೆ ಚಂದ್ರಶೇಖರನ್ ಅವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಬಹುದು ಎಂದು ಟ್ರಿಬ್ಯೂನ್ ಇಂಡಿಯಾ ಪತ್ರಿಕೆಯ ವರದಿಯೊಂದರಲ್ಲಿ ಹೇಳಲಾಗಿದೆ.

ಚಂದ್ರಶೇಖರನ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಆಲೋಚನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಅದಿತಿ ಟಂಡನ್ ಅವರು ಈ ವರದಿಯಲ್ಲಿ ಬರೆದಿದ್ದಾರೆ. ಐಟಿ ಮತ್ತು ಕಾರ್ಪೊರೇಟ್ ರಂಗದಲ್ಲಿ (ಟಿಸಿಎಸ್ ಮತ್ತು ಟಾಟಾ ಗ್ರೂಪ್ ಸಂಸ್ಥೆಗಳಲ್ಲಿ) ದಶಕಗಳ ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ಚಂದ್ರಶೇಖರನ್ ಅವರ ಅನುಭವವನ್ನು ಭಾರತದ ಆರ್ಥಿಕ, ಕೈಗಾರಿಕಾ ಅಥವಾ ತಂತ್ರಜ್ಞಾನ ವಲಯಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ: ಬೀಟಾ ಗ್ರೂಪ್ ಮುಖ್ಯಸ್ಥರ ಸ್ಫೂರ್ತಿಯುತ ಕತೆ; ಸತತ ಕಷ್ಟ, ಸವಾಲುಗಳ ನಡುವೆ ಯಶಸ್ಸಿನ ಉದ್ಯಮ ಕಟ್ಟಿದ ರಾಜಮೋಹನ್ ಪಿಳ್ಳೈ

ರಾಜ್ಯಸಭೆ ಮೂಲಕ ಪ್ರವೇಶ?: ಅವರು ನೇರ ರಾಜಕೀಯದಲ್ಲಿ ಇಲ್ಲದಿರುವುದರಿಂದ, ಒಂದು ವೇಳೆ ಸಚಿವರಾದರೆ ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ (Rajya Sabha MP) ಮಾಡಿ ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಆದರೆ, ಈ ಕುರಿತು ಕೇಂದ್ರ ಸರ್ಕಾರವಾಗಲಿ ಅಥವಾ ಎನ್. ಚಂದ್ರಶೇಖರನ್ ಅವರಾಗಲಿ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಅಥವಾ ಪ್ರಕಟಣೆ ನೀಡಿಲ್ಲ.

ರಾಜಕೀಯದಲ್ಲಿಲ್ಲದವರೂ ಸಚಿವರಾಗಿರುವ ಉದಾಹರಣೆಗಳುಂಟು

ಸರ್ಕಾರ ಕೆಲವಾರು ಪ್ರಮುಖರನ್ನು ಹಿಂಬಾಗಿಲ ಮೂಲಕ ಸಂಪುಟಕ್ಕೆ ಸೇರಿಸಿಕೊಂಡಿದ್ದಿದೆ. ನೇರ ಚುನಾವಣೆಯನ್ನು ಎದುರಿಸದ, ಅಥವಾ ರಾಜಕೀಯ ನಂಟೇ ಇಲ್ಲದ ಕೆಲವರು ಸಚಿವರಾಗಿದ್ದಾರೆ. ಎಸ್ ಜೈಶಂಕರ್, ಎ ವೈಷ್ಣವ್ ಇದಕ್ಕೆ ತಾಜಾ ಉದಾಹರಣೆ. ಸರ್ಕಾರಿ ಆಡಳಿತ ಸೇವೆಯಲ್ಲಿದ್ದ ಈ ಇಬ್ಬರೂ ಕೂಡ ಮೋದಿ ಸಂಪುಟದಲ್ಲಿ ಯಶಸ್ವಿ ಸಚಿವರೆನಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಭಾರೀ ಸಾಲ; ಬಡ್ಡಿ ಕಟ್ಟಲು ಹೊಸ ಸಾಲ; ಬಾಂಡ್ ಈಲ್ಡ್ ಕುಸಿತ; ಚಿನ್ನದ ಬೆಲೆ ಏರುತ್ತಾ?

ಚಂದ್ರಶೇಖರನ್ ಸಾಧನೆ ಸಾಮಾನ್ಯವಲ್ಲ…

ಎನ್ ಚಂದ್ರಶೇಖರನ್ ಭಾರತದ ಉದ್ಯಮ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಟಾಟಾ ಸನ್ಸ್ ಛೇರ್ಮನ್ ಸ್ಥಾನ ಪಡೆದದ್ದೂ ಅಲ್ಲದೆ, ಹಲವು ವರ್ಷ ಕಾಲ ಆ ಸ್ಥಾನದಲ್ಲಿ ಮುಂದುವರಿದಿದ್ದು, ಹಾಗು ಟಾಟಾದ ವಿಸ್ತೃತ ಉದ್ದಿಮೆ ಪ್ರಪಂಚಕ್ಕೆ ಹೊಸ ಮೆರಗು ಕೊಟ್ಟಿದ್ದು ಸಾಮಾನ್ಯ ಸಂಗತಿಯಲ್ಲ. ಟಾಟಾ ಮನೆತನಕ್ಕೆ ಸೇರದ ಹೊರಗಿನ ವ್ಯಕ್ತಿಯೊಬ್ಬರು ಟಾಟಾ ಸನ್ಸ್ ಛೇರ್ಮನ್ ಆಗಿದ್ದು ಅದೇ ಮೊದಲು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಕ್ಷಾ ಬಂಧನ ಮುಹೂರ್ತ; ಪ್ರಸಿದ್ಧ ಜ್ಯೋತಿಷಿ  ನೀಡಿರುವ ಮಹತ್ವದ ಮಾಹಿತಿ
ರಕ್ಷಾ ಬಂಧನ ಮುಹೂರ್ತ; ಪ್ರಸಿದ್ಧ ಜ್ಯೋತಿಷಿ  ನೀಡಿರುವ ಮಹತ್ವದ ಮಾಹಿತಿ
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಕಬ್ಬಿನ ತೋಟದಲ್ಲಿ 4 ಚಿರತೆ ಮರಿಗಳು
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಈದ್ ಮೆರವಣಿಗೆ ವೇಳೆ ಘರ್ಷಣೆ ಸಂಬಂಧ 3 FIR: 8 ಮಂದಿ ಪೊಲೀಸ್ ವಶಕ್ಕೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಹಯಗ್ರೀವ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
ಬಿಹಾರದಲ್ಲಿ 21 ಜನರಿದ್ದ ದೋಣಿ ಮಗುಚಿ ಇಬ್ಬರು ನಾಪತ್ತೆ; ವಿಡಿಯೋ ಇಲ್ಲಿದೆ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ