
ಭಾರತದಲ್ಲಿ ಬಹು ಆಯಾಮದ ಬಡತನ (Multi Dimensional Poverty Index) ಶೇ. 14.96ರಷ್ಟಿದೆ. ಈ ಪೈಕಿ ಕೇರಳ ಅತಿ ಕಡಿಮೆ ಬಡತನ ಇರುವ ಪ್ರದೇಶವಾಗಿದೆ. ಗೋವಾದಲ್ಲೂ ಅತಿಕಡಿಮೆ ಬಡತನ ಇದೆ. ಭಾರತದಲ್ಲಿ ಶೇ. 1ಕ್ಕಿಂತಲೂ ಕಡಿಮೆ ಬಡತನ ಇರುವ ಪ್ರದೇಶಗಳಲ್ಲಿ ಕೇರಳ, ಗೋವಾ ಮತ್ತು ಪುದುಚೇರಿ ಇದೆ. ಕೇರಳದಲ್ಲಿ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ 0.55 ಪ್ರತಿಶತ ಮಾತ್ರ ಇರುವುದು. ಗೋವಾದಲ್ಲಿ ಶೇ. 0.84 ಮತ್ತು ಪುದುಚೇರಿಯಲ್ಲಿ ಶೇ. 0.85 ಮಾತ್ರವೇ ಎಂಪಿಐ ಇರುವುದು.
ಬಿಹಾರ ರಾಜ್ಯದಲ್ಲಿ ಅತೀ ಹೆಚ್ಚು ಬಡತನ ಇರುವುದು. ಇಲ್ಲಿ ಎಂಪಿಐ ಶೇ. 33.76ರಷ್ಟು ಇದೆ. ಜಾರ್ಖಂಡ್, ಮೇಘಾಲಯ, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ಬಡತನ ಪ್ರಮಾಣ ಶೇ. 20ಕ್ಕಿಂತಲೂ ಹೆಚ್ಚಿದೆ. ಮಹಾರಾಷ್ಟ್ರವೂ ಒಳಗೊಂಡಂತೆ ದಕ್ಷಿಣದ ಎಲ್ಲಾ ಪ್ರದೇಶಗಳಲ್ಲೂ ಬಡತನ ಶೇ. 10ಕ್ಕಿಂತ ಕಡಿಮೆ ಇರುವುದು ವಿಶೇಷ. ಕರ್ನಾಟಕದಲ್ಲಿ ಶೇ. 7.58 ಇದೆ.
ಇದನ್ನೂ ಓದಿ: ಪೇಟೆಂಟ್ ವ್ಯಾಜ್ಯ; ಆ್ಯಪಲ್ನ ಸ್ಮಾರ್ಟ್ವಾಚ್ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?
(ಈ ಪಟ್ಟಿಯಲ್ಲಿರುವ ಅಂಕಿ ಸಂಖ್ಯೆ 2019-20ರ ಅವಧಿಯದ್ದು.)
ಇದನ್ನೂ ಓದಿ: Indian Economy: ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇ. 16ಕ್ಕಿಂತಲೂ ಹೆಚ್ಚಿರಲಿದೆ: ಐಎಂಎಫ್ ಅನಿಸಿಕೆ
ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ (ಯುಎನ್ಡಿಪಿ), ಆಕ್ಸ್ಫರ್ಡ್ ಪಾವರ್ಟಿ, ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಎಚ್ಐ) ಸಂಸ್ಥೆಗಳ ಜೊತೆ ಸೇರಿ ನೀತಿ ಆಯೋಗ್ ಭಾರತದಲ್ಲಿ ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ (ಎಂಪಿಐ) ಅಭಿವೃದ್ಧಿಪಡಿಸಿದೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ವಿವಿಧ ಸ್ತರಗಳಲ್ಲಿ ಬಡತನದ ಪ್ರಮಾಣವನ್ನು ಅಳೆಯಲಾಗುತ್ತದೆ.
ಎಂಪಿಐ ಇಂಡೆಕ್ಸ್ಗೆ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಈ ಮೂರು ವಿಭಾಗಗಳನ್ನು ಸಮಾನವಾಗಿ ಪರಿಗಣಿಸಲಾಗಿದೆ. ಈ ಮೂರು ವಿಭಾಗಗಳಿಂದ 10 ಮಾನದಂಡಗಳನ್ನು ಇಂಡೆಕ್ಸ್ಗೆ ಬಳಕೆ ಮಾಡಲಾಗಿದೆ. ಈ 10 ಸೌಕರ್ಯಗಳು ಎಷ್ಟು ಮಂದಿಗೆ ಸಿಗುತ್ತಿವೆ ಎಂಬುದು ಅಳತೆಗೋಲು.
ಇವಿಷ್ಟೂ ಅಂಶಗಳನ್ನು ಪರಿಗಣಿಸಿ ಬಹು ಆಯಾಮ ಬಡತನ ಸೂಚಿ ತಯಾರಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Tue, 19 December 23