ಬೆಂಗಳೂರು, ಆಗಸ್ಟ್ 01: ಜುಲೈ ಕಳೆದು ಆಗಸ್ಟ್ ತಿಂಗಳು ಬಂದಿದೆ. ಯಾವುದೇ ತಿಂಗಳಾದರೂ ಮುಂಗಡವಾಗಿ ಪ್ಲಾನ್ (Planning For August) ಮಾಡಲು ಬಹಳ ಮಂದಿ ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಏನೇನು ಬದಲಾವಣೆಗಳಾಗಿವೆ? ಯಾವ್ಯಾವ ಪ್ರಮುಖ ಬೆಲೆಗಳಲ್ಲಿ ವ್ಯತ್ಯಯಗಳಾಗಿವೆ ಎಂಬುದನ್ನು ಮೊದಲೇ ತಿಳಿದಿರುವುದು ಉತ್ತಮ. ಅನಿಲ ದರಗಳ ಏರಿಕೆ, ಜಿಎಸ್ಟಿ ನಿಯಮದಲ್ಲಿ ಬದಲಾವಣೆ ಇತ್ಯಾದಿ ಆಗಿವೆ. ಬ್ಯಾಂಕ್ಗಳ ರಜಾಪಟ್ಟಿಯನ್ನೂ ತಿಳಿದಿರುವುದು ಉತ್ತಮ. ಈ ಬಗ್ಗೆ ಒಂದು ವರದಿ.
ಐಟಿ ರಿಟರ್ನ್ ಸಲ್ಲಿಸಲು ನಿನ್ನೆ, ಜುಲೈ 31ಕ್ಕೆ ಕೊನೆಯ ದಿನವಾಗಿತ್ತು. ಆಗಸ್ಟ್ 1ರಿಂದ ನೀವು ಐಟಿಆರ್ ಫೈಲ್ ಮಾಡಬಹುದಾದರೂ ದಂಡ ಪಾವತಿಸಬೇಕಾಗುತ್ತದೆ. ನಿಯಮದ ಪ್ರಕಾರ, ನಿಮ್ಮ ವಾರ್ಷಿಕ ಆದಾಯ 5 ಲಕ್ಷ ರೂಗಿಂತ ಹೆಚ್ಚು ಇದ್ದು, ನೀವು ತಡವಾಗಿ ಐಟಿಆರ್ ಸಲ್ಲಿಸಿದರೆ ಆಗ ಕಟ್ಟಬೇಕಾದ ದಂಡದ ಮೊತ್ತ 5,000 ರೂ.
5 ಕೋಟಿಗೂ ಹೆಚ್ಚು ವ್ಯವಹಾರ ಇರುವ ಕಂಪನಿಗಳು ಆಗಸ್ಟ್ 1ರಿಂದ ಎಲೆಕ್ಟ್ರಾನಿಕ್ ಇನ್ವಾಯ್ಸ್ಗಳನ್ನು ಒದಗಿಸಬೇಕು.
ಇದನ್ನೂ ಓದಿ: LPG Price: ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಕಡಿತ
ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ವಿವಿಧೆಡೆ ಒಟ್ಟು 14 ದಿನಗಳ ಕಾಲ ರಜೆ ಇರುತ್ತದೆ. ಇದರಲ್ಲಿ ಎಲ್ಲರಿಗೂ ಸಾಮಾನ್ಯವಾಗಿರುವ 4 ಭಾನುವಾರ ಹಾಗು 2 ಶನಿವಾರದ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಭಾನುವಾರ ಮತ್ತು ಶನಿವಾರದ ರಜೆಗಳನ್ನು ಹೊರತುಪಡಿಸಿ ಆಗಸ್ಟ್ 15ರಂದು ಏಕೈಕ ರಜೆ ಇರುವುದು.
ಪ್ರತೀ ತಿಂಗಳ ಆರಂಭದಲ್ಲಿ ಎಲ್ಪಿಜಿ ದರಗಳನ್ನ ಪರಿಷ್ಕರಿಸಲಾಗುತ್ತದೆ. ಆಗಸ್ಟ್ 1ರಂದು 19 ಕಿಲೋ ಎಲ್ಪಿಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 99.75 ರೂಗಳಷ್ಟು ಕಡಿಮೆಗೊಂಡಿದೆ. ಆದರೆ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ