
ಆಸ್ತಿ ವರ್ಗಾವಣೆಯಲ್ಲಿ ಉಯಿಲು ಅಥವಾ ವಿಲ್ (Will) ಬರೆದಿಡುವುದು ಸಾಮಾನ್ಯವಾಗುತ್ತಿದೆ. ಈ ವಿಲ್ ಅನ್ನು ಎಕ್ಸಿಕ್ಯೂಟ್ ಮಾಡುವ ಸಂದರ್ಭದಲ್ಲಿ ಪ್ರೊಬೇಟ್ (Probate) ಮಾಡಿಸುವ ಪ್ರಕ್ರಿಯೆ ಬಗ್ಗೆ ಕೇಳಿರಬಹುದು. ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಮಾಡಿಸಬೇಕಾಗಬಹುದು. ಕೋರ್ಟ್ನಲ್ಲಿ ಸಕ್ಸಶನ್ ಸರ್ಟಿಫಿಕೇಟ್ ಪಡೆಯುವುದು ಮತ್ತು ಪ್ರೊಬೇಟ್ (Probate) ಮಾಡಿಸುವುದು, ಇವೆರಡು ಸಂಗತಿಗಳ ಬಗ್ಗೆ ಕೆಲವರಲ್ಲಿ ಸಹಜ ಗೊಂದಲಗಳಿವೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಪ್ರೋಬೇಟ್ ಎಂದರೆ ಮರಣಶಾಸನ ಅಥವಾ ಉಯಿಲು ಅಥವಾ ವಿಲ್ (Will) ನೈಜವಾದುದು ಮತ್ತು ಮಾನ್ಯವಾದುದು ಎಂದು ಸಿವಿಲ್ ನ್ಯಾಯಾಲಯವು ನೀಡುವ ಅಧಿಕೃತ ಪ್ರಮಾಣಪತ್ರವಾಗಿದೆ. ಇದು ವಿಲ್ ಬರೆದ ವ್ಯಕ್ತಿಯು ಮಾನಸಿಕವಾಗಿ ಸ್ವಸ್ಥನಾಗಿದ್ದಾಗ ಅದನ್ನು ಬರೆದಿದ್ದಾನೆಯೇ ಎಂಬುದನ್ನು ಖಚಿತಪಡಿಸುತ್ತದೆ ಮತ್ತು ಅದನ್ನು ಜಾರಿಗೆ ತರಲು ವಿಲ್‌ನಲ್ಲಿ ಹೆಸರಿಸಲಾದ ವ್ಯಕ್ತಿಗೆ (Executor) ಕಾನೂನುಬದ್ಧ ಅಧಿಕಾರ ನೀಡುತ್ತದೆ. ಕೋರ್ಟ್ನಿಂದ ಪ್ರೊಬೇಟ್ ಪಡೆದ ವ್ಯಕ್ತಿಯು ವಿಲ್ನಲ್ಲಿರುವಂತೆ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಕಾನೂನು ಪ್ರಕ್ರಿಯೆಗೆ ಮುಂದಾಗಬಹುದು.
2025 ರ ‘ರಿಪೀಲಿಂಗ್ ಅಂಡ್ ಅಮೆಂಡಿಂಗ್ ಆಕ್ಟ್’ ಮೂಲಕ ‘ಇಂಡಿಯನ್ ಸಕ್ಸೆಷನ್ ಆಕ್ಟ್ 1925’ ನ ಸೆಕ್ಷನ್ 213 ಅನ್ನು ರದ್ದುಗೊಳಿಸಲಾಗಿದೆ. ಈಗ ಪ್ರೋಬೇಟ್ ಪ್ರಕ್ರಿಯೆಯು ಐಚ್ಛಿಕ (Voluntary) ಮಾತ್ರವೇ ಆಗಿದೆ.
ಇದನ್ನೂ ಓದಿ: ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ
ಪ್ರೋಬೇಟ್ ಈಗ ಕಡ್ಡಾಯವಲ್ಲದಿದ್ದರೂ, ಈ ಕೆಳಗಿನ ಸಂದರ್ಭಗಳಲ್ಲಿ ಇದು ಅತ್ಯಂತ ಉಪಯುಕ್ತ:
ಗಮನಿಸಿ: ಪ್ರೋಬೇಟ್ ಎನ್ನುವುದು ಆಸ್ತಿಯ ಮಾಲೀಕತ್ವದ ಸಾಕ್ಷಿಯಲ್ಲ; ಇದು ವಿಲ್‌ನ ಸಿಂಧುತ್ವವನ್ನು ಮಾತ್ರ ಪ್ರಮಾಣೀಕರಿಸುತ್ತದೆ. ಪ್ರೋಬೇಟ್ ಬಂದ ನಂತರ ಖಾತೆ ಬದಲಾವಣೆ (Mutation) ಪ್ರಕ್ರಿಯೆಯ ಮೂಲಕ ಮಾಲೀಕತ್ವ ವರ್ಗಾವಣೆಯಾಗುತ್ತದೆ. ವಿಲ್ ಇದ್ದಾಗ ಮಾತ್ರವೇ ಈ ಪ್ರೊಬೇಟ್ ಪ್ರಕ್ರಿಯೆ ಇರುವುದು.
ವ್ಯಕ್ತಿಯು ಯಾವುದೇ ವಿಲ್ ಬರೆಯದೆ ನಿಧನರಾದರೆ, ಪ್ರೋಬೇಟ್ ಅನ್ವಯಿಸುವುದಿಲ್ಲ. ಬದಲಾಗಿ, ಅವರ ಧರ್ಮ/ಸಂಪ್ರದಾಯಕ್ಕೆ ಅನುಗುಣವಾಗಿ ವಾರಸುದಾರರಿಗೆ ಆಸ್ತಿ ಹಂಚಿಕೆಯಾಗುತ್ತದೆ (ಉದಾಹರಣೆಗೆ: ಹಿಂದೂಗಳಿಗೆ ‘ಹಿಂದೂ ಉತ್ತರಾಧಿಕಾರ ಕಾಯ್ದೆ, 1956’).
ಇಂತಹ ಸಂದರ್ಭಗಳಲ್ಲಿ, ಸಕ್ಸಷನ್ ಸರ್ಟಿಫಿಕೇಟ್ (Succession Certificate) ಮತ್ತು ಲೀಗಲ್ ಹೇರ್ ಸರ್ಟಿಫಿಕೇಟ್ (Legal Heir Certificate) ಆಯ್ಕೆಗಳಿರುತ್ತವೆ.
ಇದನ್ನೂ ಓದಿ: ಆಫ್ರಿಕಾದ ಅತಿದೊಡ್ಡ ಏರ್ಲೈನ್ಸ್ ಬೆಳೆಸಿದ್ದ ತೆವೊಲ್ಡೆ ಗೆಬ್ರೆಮರಿಯಮ್ ಈಗ ಏರ್ ಇಂಡಿಯಾದ ನೂತನ ಸಾರಥಿ
ಬ್ಯಾಂಕ್ ಖಾತೆ ಅಥವಾ ಇನ್ಶೂರೆನ್ಸ್‌ನಲ್ಲಿ ‘ನಾಮಿನಿ’ (Nominee) ಆಗಿರುವ ವ್ಯಕ್ತಿಯು ಹಣ ಅಥವಾ ಆಸ್ತಿಯನ್ನು ಪಡೆಯುವ ಅರ್ಹತೆ ಹೊಂದಿದ್ದರೂ, ಅವರೇ ಅದರ ಪೂರ್ಣ ಕಾನೂನುಬದ್ಧ ಮಾಲೀಕರಾಗುವುದಿಲ್ಲ. ಅಂತಿಮವಾಗಿ ಕಾನೂನುಬದ್ಧ ವಾರಸುದಾರರೇ (Legal Heirs) ಆ ಆಸ್ತಿಗೆ ನಿಜವಾದ ಹಕ್ಕುದಾರರಾಗಿರುತ್ತಾರೆ. ನಾಮಿನಿ ಎನಿಸಿಕೊಂಡವರು, ಆಸ್ತಿಯನ್ನು ಕಾನೂನುಬದ್ಧ ವಾರಸುದಾರರಿಗೆ ತಲುಪಿಸಲು ಅಧಿಕಾರ ಹೊಂದಿರುತ್ತಾರೆ. ನಾಮಿನಿಯೇ ನೈಜ ವಾರಸುದಾರರಾಗಿದ್ದರೆ ಅವರೇ ಆಸ್ತಿಯನ್ನು ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ