AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ

9 digital platforms penalized for Dark Patterns: ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ ಬಳಸಿದ ಕಾರಣಗಳಿಗೆ 9 ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ದಂಡ ವಿಧಿಸಿದೆ. ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಮೊದಲಾದ ಸಂಸ್ಥೆಗಳಿಗೆ ಒಟ್ಟು 20 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. ಸಿಸಿಪಿಎ ಈ ದಂಡ ವಿಧಿಸಿರುವ ಮಾಹಿತಿಯನ್ನು ಸರ್ಕಾರವು ರಾಜ್ಯಸಭೆಗೆ ನೀಡಿದೆ.

ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ: ಝೆಪ್ಟೋ, ಬುಕ್ ಮೈ ಶೋ, ಫಿಸಿಕ್ಸ್ ವಾಲಾ ಸೇರಿದಂತೆ 9 ಕಂಪನಿಗಳಿಗೆ ದಂಡ
ಸಾಂದರ್ಭಿಕ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 06, 2026 | 2:17 PM

Share

ಮುಖ್ಯಾಂಶಗಳು

  • ಗ್ರಾಹಕರ ಮೇಲೆ ಡಾರ್ಕ್ ಪ್ಯಾಟರ್ನ್ ತಂತ್ರ ಬಳಸಿದ 9 ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ದಂಡ ವಿಧಿಸಿದೆ.
  • ಝೆಪ್ಟೋ ಫಿಸಿಕ್ಸ್ ವಾಲಾ ಮೊದಲಾದ ಸಂಸ್ಥೆಗಳಿಗೆ ಒಟ್ಟು 20 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ.
  • ಸಿಸಿಪಿಎ ಈ ದಂಡ ವಿಧಿಸಿರುವ ಮಾಹಿತಿಯನ್ನು ಸರ್ಕಾರವು ರಾಜ್ಯಸಭೆಗೆ ನೀಡಿದೆ.

ನವದೆಹಲಿ, ಆಗಸ್ಟ್ 6: ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ಡಾರ್ಕ್ ಪ್ಯಾಟರ್ನ್ (Dark Patterns) ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ (CCPA – Central Consumer Protection Authority) “ಡಾರ್ಕ್ ಪ್ಯಾಟರ್ನ್‌” ಬಳಸಿದ್ದಕ್ಕಾಗಿ ಜೆಪ್ಟೋ, ಬುಕ್‌ಮೈಶೋ, ಸ್ಪೈಸ್‌ಜೆಟ್, ಇಂಡಿಗೋ ಸೇರಿದಂತೆ 9 ಪ್ರಮುಖ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ದಂಡ ವಿಧಿಸಿದೆ. ಸರ್ಕಾರವು ರಾಜ್ಯಸಭೆಗೆ ನೀಡಿದ ಮಾಹಿತಿಯಂತೆ, ಈ ಕಂಪನಿಗಳಿಂದ ಒಟ್ಟು ₹20 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಯಾವ ಕಂಪನಿಗೆ ಎಷ್ಟು ದಂಡ ಮತ್ತು ಕಾರಣಗಳು?

  1. Zepto (ಜೆಪ್ಟೋ): ₹7 ಲಕ್ಷ ದಂಡ ವಿಧಿಸಲಾಗಿದೆ. ಆರಂಭದಲ್ಲಿ ಕಡಿಮೆ ದರ ತೋರಿಸಿ, ನಂತರ ಹ್ಯಾಂಡ್ಲಿಂಗ್ ಶುಲ್ಕ ಮತ್ತು ಸದಸ್ಯತ್ವ ಶುಲ್ಕಗಳನ್ನು ಆಟೋಮ್ಯಾಟಿಕ್ ಆಗಿ ಸೇರಿಸಲಾಗುತ್ತಿತ್ತು (Drip Pricing & Basket Sneaking).
  2. Physics Wallah (ಫಿಸಿಕ್ಸ್ ವಾಲಾ): ₹5 ಲಕ್ಷ ದಂಡ ಹಾಕಲಾಗಿದೆ. ಆನ್​ಲೈನ್ ಶಿಕ್ಷಣ ಸಂಸ್ಥೆಯಾದ ಇದು ಚೆಕ್​ಔಟ್ ಸಂದರ್ಭದಲ್ಲಿ ತನ್ನ ಪಿಡಬ್ಲ್ಯು ಫೌಂಡೇಶನ್​ಗೆಂದು ₹10 ದೇಣಿಗೆಯನ್ನು ಪೂರ್ವಭಾವಿಯಾಗಿ ಆಯ್ಕೆ (Pre-selected) ಮಾಡುತ್ತಿದ್ದುದು ಕಂಡು ಬಂದಿದೆ. ಉಚಿತ ಕೋರ್ಸ್‌ಗಳಿಗೆ ವೈಯಕ್ತಿಕ ಮಾಹಿತಿ ನೀಡಲು ಕಡ್ಡಾಯಗೊಳಿಸಿತ್ತು. ಹೀಗಾಗಿ ದಂಡ ಹಾಕಲಾಗಿದೆ.
  3. BookMyShow (ಬುಕ್‌ಮೈಶೋ): ಗ್ರಾಹಕರು ಹಣ ಪಾವತಿಸುವಾಗ ‘BookASmile’ ನಿಧಿಗೆ ₹1 ದೇಣಿಗೆಯನ್ನು ಪೂರ್ವಭಾವಿಯಾಗಿ ಟಿಕ್ (Pre-ticked) ಮಾಡಿಡುವುದು ಕಂಡು ಬಂದಿತ್ತು. ಇದನ್ನು ತೆಗೆದುಹಾಕಲು ಸೂಚಿಸಲಾಗಿದೆ.
  4. IndiGo (ಇಂಡಿಗೋ): ಆ್ಯಪ್‌ನಲ್ಲಿ ವಿಮೆ ಪಡೆಯದಿದ್ದಾಗ ಗ್ರಾಹಕರನ್ನು ಹೆದರಿಸುವಂತಹ “No, I will take risk” ಎಂಬ ಸಂದೇಶ ಬಳಸುವುದು (Confirm Shaming). ಇದನ್ನು ಬದಲಾಯಿಸಲು ಸೂಚಿಸಲಾಗಿದೆ.
  5. SpiceJet (ಸ್ಪೈಸ್‌ಜೆಟ್): ₹1 ಲಕ್ಷ ದಂಡ ಹಾಕಲಾಗಿದೆ. ಆಟೋಮ್ಯಾಟಿಕ್ ಲಾಯಲ್ಟಿ ಪ್ರೋಗ್ರಾಮ್ ನೋಂದಣಿ ಮತ್ತು ಪ್ರಚಾರ ಸಂದೇಶಗಳಿಗೆ ಬಲವಂತದ ಸಮ್ಮತಿ ಪಡೆಯಲಾಗುತ್ತಿತ್ತು.
  6. ಅನುಜ್ ಜಿಂದಾಲ್ (Anuj Jindal): ₹3 ಲಕ್ಷ ದಂಡ
  7. ಫರ್ಸ್ಟ್ ಕ್ರೈ (FirstCry): ₹2 ಲಕ್ಷ ದಂಡ
  8. ಫಾರ್ಮ್‌ಈಸಿ (PharmaEasy): ₹1 ಲಕ್ಷ ದಂಡ
  9. ಮೆಕಾಫಿ (McAfee): ₹1 ಲಕ್ಷ ದಂಡ

ಇದನ್ನೂ ಓದಿ: ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್

ಏನಿದು ‘ಡಾರ್ಕ್ ಪ್ಯಾಟರ್ನ್’?

ಡಿಜಿಟಲ್ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳು ಗ್ರಾಹಕರಿಗೆ ಗೊತ್ತಿಲ್ಲದಂತೆ ಹೆಚ್ಚುವರಿ ಹಣ ಪಾವತಿಸುವಂತೆ ಮಾಡುವುದು, ಸಮ್ಮತಿಯಿಲ್ಲದೆ ವೈಯಕ್ತಿಕ ಮಾಹಿತಿ ಪಡೆಯುವುದು ಅಥವಾ ಅನಗತ್ಯ ಸಬ್​ಸ್ಕ್ರಿಪ್ಷನ್ಸ್ (Subscriptions) ಹೇರುವುದಕ್ಕೆ ಬಳಸುವ ತಂತ್ರಗಳನ್ನು ‘ಡಾರ್ಕ್ ಪ್ಯಾಟರ್ನ್’ (Dark Patterns) ಎನ್ನಲಾಗುತ್ತದೆ.

ಕೇಂದ್ರ ಸರ್ಕಾರವು 2023 ರಲ್ಲಿ 13 ರೀತಿಯ ಡಾರ್ಕ್ ಪ್ಯಾಟರ್ನ್‌ಗಳನ್ನು ನಿಷೇಧಿಸಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Thu, 6 August 26

Follow Us
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು
ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು
ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಅಕ್ಸಾ
ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಅಕ್ಸಾ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ಪೋಸ್ಟ್​: ಓರ್ವನ ಬಂಧನ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ