AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್

EPFO to release E-Praapti portal by end of August to help trace old PF accounts: ಯುಎಎನ್ ಚಾಲನೆಗೊಳ್ಳುವ ಮುನ್ನ ಇದ್ದ ಹಳೆಯ ಇಪಿಎಫ್ ಖಾತೆಗಳನ್ನು ಮರಳಿಪಡೆಯದೇ ಉಳಿದವರಿಗೆ ಖುಷಿ ಸುದ್ದಿ. ಇಂಥ ನಿಷ್ಕ್ರಿಯ ಇಪಿಎಫ್ ಖಾತೆಗಳನ್ನು ಹುಡುಕಿ ಕ್ಲೇಮ್ ಮಾಡಲು ಅಥವಾ ಯುಎಎನ್​ಗೆ ಲಿಂಕ್ ಮಾಡಲು ಹೊಸ ಪೋರ್ಟಲ್ ಸಿದ್ಧವಾಗಿದೆ. ಈ ಇ-ಪ್ರಾಪ್ತಿ (E-PRAAPTI) ಆಗಸ್ಟ್ ತಿಂಗಳು ಮುಗಿಯುವುದರೊಳಗೆ ಚಾಲನೆಗೆ ಬರಲಿದೆ.

ಹಳೆಯ ಪಿಎಫ್ ಖಾತೆಗಳನ್ನು ಪಡೆಯಲು ಈ ತಿಂಗಳಲ್ಲೇ ಬರಲಿದೆ E-PRAAPTI ಪೋರ್ಟಲ್
ಸಾಂದರ್ಭಿಕ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 06, 2026 | 1:58 PM

Share

ಮುಖ್ಯಾಂಶಗಳು

  • ಹಳೆಯ ಇಪಿಎಫ್ ಖಾತೆಗಳನ್ನು ಮರಳಿಪಡೆಯದೇ ಉಳಿದವರಿಗೆ ಖುಷಿ ಸುದ್ದಿ.
  • ನಿಷ್ಕ್ರಿಯ ಇಪಿಎಫ್ ಖಾತೆಗಳನ್ನು ಹುಡುಕಿ ಕ್ಲೇಮ್ ಮಾಡಲು ಹೊಸ ಪೋರ್ಟಲ್ ಸಿದ್ಧವಾಗಿದೆ.
  • ಈ ಇ-ಪ್ರಾಪ್ತಿ (E-PRAAPTI) ಆಗಸ್ಟ್ ತಿಂಗಳು ಮುಗಿಯುವುದರೊಳಗೆ ಚಾಲನೆಗೆ ಬರಲಿದೆ.

ನವದೆಹಲಿ, ಆಗಸ್ಟ್ 6: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರು ತಮ್ಮ ಹಳೆಯ ಅಥವಾ ನಿಷ್ಕ್ರಿಯಗೊಂಡ (Inactive) ಪಿಎಫ್ ಖಾತೆಗಳಲ್ಲಿ ಉಳಿದುಕೊಂಡಿರುವ ಹಣವನ್ನು ಸುಲಭವಾಗಿ ಪತ್ತೆಹಚ್ಚಿ ಕ್ಲೈಮ್ ಮಾಡಲು ನೆರವಾಗುವ ‘ಇ-ಪ್ರಾಪ್ತಿ’ (E-PRAAPTI) ಡಿಜಿಟಲ್ ಪೋರ್ಟಲ್ ಅನ್ನು ಈ ತಿಂಗಳಲ್ಲೇ ಜಾರಿಗೆ ತರಲು ಇಪಿಎಫ್‌ಒ ಸಿದ್ಧತೆ ನಡೆಸಿದೆ. ಈ ನೂತನ ವ್ಯವಸ್ಥೆಯು ಕೋಟಿಗಟ್ಟಲೆ ಉದ್ಯೋಗಿಗಳಿಗೆ ತಮ್ಮ ಹಳೆಯ ಪಿಎಫ್ ಹಣವನ್ನು ಪಡೆಯಲು ಎದುರಾಗುತ್ತಿದ್ದ ತೊಡಕುಗಳನ್ನು ನಿವಾರಿಸಲಿದೆ.

‘ಇ-ಪ್ರಾಪ್ತಿ’ ಎಂದರೇನು?

‘ಇ-ಪ್ರಾಪ್ತಿ’ (E-PRAAPTI – EPF Aadhaar-Based Access Portal for Tracking Inoperative Accounts) ಎಂಬುದು ಆಧಾರ್ ಆಧಾರಿತ ಡಿಜಿಟಲ್ ವೇದಿಕೆಯಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಯುಎಎನ್ (UAN) ಸಂಖ್ಯೆಗೆ ಲಿಂಕ್ ಆಗದಿರುವ ಅಥವಾ ನಿಷ್ಕ್ರಿಯಗೊಂಡಿರುವ ಹಳೆಯ ಇಪಿಎಫ್ ಖಾತೆಗಳನ್ನು ಪತ್ತೆಹಚ್ಚಲು, ಲಿಂಕ್ ಮಾಡಲು ಮತ್ತು ಸಕ್ರಿಯಗೊಳಿಸಲು ಈ ಪೋರ್ಟಲ್ ನೆರವಾಗಲಿದೆ.

ಇದನ್ನೂ ಓದಿ: ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು

ಹೊಸ ಪೋರ್ಟಲ್​ನ ಮುಖ್ಯಾಂಶಗಳು ಮತ್ತು ಪ್ರಯೋಜನಗಳು

  • ಪ್ರಸ್ತುತ ಇಪಿಎಫ್‌ಒನಲ್ಲಿ 30.91 ಲಕ್ಷಕ್ಕೂ ಹೆಚ್ಚು ನಿಷ್ಕ್ರಿಯ ಖಾತೆಗಳಿದ್ದು, ಇವುಗಳಲ್ಲಿ ಸುಮಾರು ₹9,330 ಕೋಟಿ ಹಣ ಕ್ಲೇಮ್ ಆಗದೆ (Unclaimed) ಉಳಿದಿದೆ.
  • ಯಾವುದೇ ಪಿಎಫ್ ಖಾತೆಗೆ ಸತತ 3 ವರ್ಷಗಳ ಕಾಲ (36 ತಿಂಗಳು) ಯಾವುದೇ ವಂತಿಗೆ (Contribution) ಜಮೆಯಾಗದಿದ್ದರೆ ಅದನ್ನು ‘ನಿಷ್ಕ್ರಿಯ ಖಾತೆ’ ಎಂದು ಪರಿಗಣಿಸಲಾಗುತ್ತದೆ.
  • ಹಳೆಯ ಕಾಗದಪತ್ರಗಳ ಆಧಾರಿತ ಸುದೀರ್ಘ ಪ್ರಕ್ರಿಯೆಯನ್ನು ತಪ್ಪಿಸಿ, ಆಧಾರ್ ದೃಢೀಕರಣ (Aadhaar Authentication) ಮೂಲಕ ಸುರಕ್ಷಿತವಾಗಿ ಹಳೆಯ ಖಾತೆಗಳನ್ನು ಯುಎಎನ್ (UAN) ಗೆ ಲಿಂಕ್ ಮಾಡಬಹುದು.
  • ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ಡಿಜಿಟಲ್ ರೂಪದಲ್ಲೇ ಪ್ರೊಫೈಲ್ ಅಪ್‌ಡೇಟ್ ಮಾಡಿ ಹಣವನ್ನು ಕ್ಲೈಮ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಯುಎಎನ್​ಗಿಂತಲೂ ಮೊದಲು ಇದ್ದ ಹಳೆಯ ಪಿಎಫ್ ಖಾತೆ ಲಿಂಕ್ ಆಗಿಲ್ಲವಾ? ಇಲ್ಲಿದೆ ಮಾರ್ಗೋಪಾಯ

ಇ-ಪ್ರಾಪ್ತಿ ಪೋರ್ಟಲ್ ಹೇಗೆ ಕೆಲಸ ಮಾಡುತ್ತದೆ?

  • ಯುಎಎನ್ ಜಾರಿಗೆ ಬರುವ ಮುನ್ನ ಇದ್ದ ಹಳೆಯ ಪಿಎಫ್ ಖಾತೆಗಳನ್ನು ಆಧಾರ್ ವಿವರಗಳ ಮೂಲಕ ಪತ್ತೆ ಮಾಡುತ್ತದೆ.
  • ಕಂಡುಕೊಂಡ ಹಳೆಯ ಖಾತೆಯನ್ನು ಹಾಲಿ ಇರುವ ಸಕ್ರಿಯ ಯುಎಎನ್‌ಗೆ ಡಿಜಿಟಲ್ ಆಗಿ ಲಿಂಕ್ ಮಾಡುತ್ತದೆ.
  • ಹಳೆಯ ಖಾತೆಯ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ಅಥವಾ ನೇರವಾಗಿ ಹಿಂಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Thu, 6 August 26

Follow Us
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
‘ಹೇಗಿದೆ ಟಾಕ್ಸಿಕ್?’ ಕಲೆಕ್ಷನ್, ವಿಮರ್ಶೆ ಇತ್ಯಾದಿ: ವಿಡಿಯೋ ನೋಡಿ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?
ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ
ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!
ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!