AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು

No Petrol likely if don't have third party insurance for vehicles: ವಾಹನಗಳಿಗೆ ಥರ್ಡ್ ಪಾರ್ಟ್ ಇನ್ಷೂರೆನ್ಸ್ ಇದ್ದರೆ ಮಾತ್ರ ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್ ಅಥವಾ ಡೀಸಲ್ ಸಿಗುತ್ತದೆ. ಇಂಥದ್ದೊಂದು ಕಾನೂನು ಮತ್ತು ವ್ಯವಸ್ಥೆ ತರುವಂತೆ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ. ದೇಶದಲ್ಲಿ ರಸ್ತೆಗಿಳಿಯುವ ಶೇ. 56ರಷ್ಟು ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯೇ ಇಲ್ಲ ಎನ್ನುವ ವಿಚಾರದ ಬಗ್ಗೆ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್-ಡೀಸಲ್ ಸಿಗಲ್ಲ: ಸುಪ್ರೀಂಕೋರ್ಟ್ ನಿರ್ದೇಶನದಲ್ಲಿ ಬರಲಿದೆ ಹೊಸ ಕಾನೂನು
ಇನ್ಷೂರೆನ್ಸ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 05, 2026 | 4:54 PM

Share

ನವದೆಹಲಿ, ಆಗಸ್ಟ್ 5: ವಾಹನಗಳಿಗೆ ಮಾನ್ಯತೆ ಹೊಂದಿರುವ ಥರ್ಡ್ ಪಾರ್ಟಿ ಇನ್ಶೂರೆನ್ಸ್ (Third-party Insurance) ಇಲ್ಲದಿದ್ದರೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್/ಡೀಸಲ್/ಗ್ಯಾಸ್ ಸಿಗದೇ ಹೋಗುವ ದಿನ ದೂರ ಇಲ್ಲ. ಇಂಥದ್ದೊಂದು ಕಾನೂನು ರೂಪಿಸಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಪ್ರಾಯೋಗಿಕವಾಗಿ ಈ ಕಾನೂನು ತರುವಂತೆ ಕೋರ್ಟ್ ಆದೇಶ ನೀಡಿದೆ. ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ.

‘ಇನ್ಶೂರೆನ್ಸ್ ಇಲ್ಲದಿದ್ದರೆ ಇಂಧನವಿಲ್ಲ’

ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಜಂಟಿಯಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನಗಳ ಇನ್ಶೂರೆನ್ಸ್ ತಪಾಸಣೆ ಮಾಡುವ ಪೈಲಟ್ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಮಾನ್ಯವಾಗಿರುವ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ನೀಡಬಾರದು ಎನ್ನುವುದು ಕೋರ್ಟ್ ಅನಿಸಿಕೆ.

ಏನಿದು ಥರ್ಡ್ ಪಾರ್ಟಿ ಇನ್ಷೂರೆನ್ಸ್?

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಎಂದರೆ ನಿಮ್ಮ ವಾಹನ ಅಪಘಾತವಾಗಿ ಬೇರೆಯವರಿಗೆ ಹಾನಿಯಾದಾಗ ಆ ನಷ್ಟ ಭರಿಸುವ ವಿಮೆ. ಉದಾಹರಣೆಗೆ, ವಾಹನ ಅಪಘಾತವಾದಾಗ ನಿಮ್ಮ ವಾಹನದಿಂದ ಇನ್ನೊಬ್ಬರಿಗೆ ಗಾಯವಾದರೆ, ಅಥವಾ ಸಾವಾದರೆ, ಅಥವಾ ಪ್ರಾಪರ್ಟಿಗೆ ಹಾನಿಯಾದರೆ ಅದನ್ನು ಥರ್ಡ್ ಪಾರ್ಟಿ ಇನ್ಷೂರೆನ್ಸ್​ನಲ್ಲಿ ಕವರೇಜ್ ಸಿಗುತ್ತದೆ.

ಇದನ್ನೂ ಓದಿ: ಯುನಿಟಿ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ಗೆಯೇ ಸಿಗುತ್ತೆ ಶೇ. 7 ಬಡ್ಡಿ; ಶೇ. 8.5ರವರೆಗೆ ಎಫ್​ಡಿ ದರ

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಯಾಕೆ ಮುಖ್ಯ?

ವಾಹನ ಅಪಘಾತ ಸಂಭವಿಸಿದಾಗ ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕೋರ್ಟ್ ಅಲೆದಾಡುವುದನ್ನು ತಪ್ಪಿಸಬಹುದು. ಈಗ ಸುಪ್ರೀಂಕೋರ್ಟ್ ಈ ವಿಚಾರದ ಬಗ್ಗೆ ಮಧ್ಯಪ್ರವೇಶಿಸಿರುವುದರಿಂದ ಹೊಸ ಕಾನೂನು ಬರುವ ಸಾಧ್ಯತೆ ದಟ್ಟವಾಗಿದೆ. ಇದೇನಾದರೂ ಜಾರಿಗೆ ಬಂದರೆ, ಪೊಲೀಸರು ಥರ್ಡ್ ಪಾರ್ಟಿ ಇನ್ಷೂರೆನ್ಸ್​ಗಾಗಿ ವಾಹನಗಳ ತಪಾಸಣೆ ಮಾಡುವುದು ಹೆಚ್ಚಾಗಲಿದೆ.

ಶೇ. 56 ರಷ್ಟು ವಾಹನಗಳಿಗೆ ಇನ್ಶೂರೆನ್ಸ್ ಇಲ್ಲ

ಸಂಸದೀಯ ಸಮಿತಿಯ ವರದಿ ಪ್ರಕಾರ ಭಾರತದ ರಸ್ತೆಗಳಲ್ಲಿ ಸಂಚರಿಸುವ ಶೇ. 56 ರಷ್ಟು ವಾಹನಗಳು ಯಾವುದೇ ಇನ್ಶೂರೆನ್ಸ್ ಹೊಂದಿಲ್ಲದಿರುವುದು ಆಘಾತಕಾರಿ ಎಂದು ಇದೇ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ಎಎನ್‌ಪಿಆರ್ (ANPR) ಕ್ಯಾಮೆರಾಗಳ ಬಳಕೆ: ಹೆದ್ದಾರಿಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ANPR) ಕ್ಯಾಮೆರಾಗಳನ್ನು ‘ವಾಹನ್’ (VAHAN) ಪೋರ್ಟಲ್ ಹಾಗೂ ಇನ್ಶೂರೆನ್ಸ್ ಡೇಟಾಬೇಸ್‌ಗೆ ಲಿಂಕ್ ಮಾಡಿ. ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ಆಟೋಮ್ಯಾಟಿಕ್ ಇ-ಚಲನ್ ಕಳುಹಿಸಿ ಎಂದು ಕೋರ್ಟ್ ಸಲಹೆ ಕೊಟ್ಟಿದೆ.

ಟ್ರಾಫಿಕ್ ಪೊಲೀಸರಿಗೆ ಹೊಸ ಆ್ಯಪ್/ಸಾಧನ: ಸ್ಥಳದಲ್ಲೇ ಇನ್ಶೂರೆನ್ಸ್ ಪರಿಶೀಲಿಸಲು ರಾಜ್ಯ ಟ್ರಾಫಿಕ್ ಪೊಲೀಸರಿಗೆ ‘ವಾಹನ್’ ಡೇಟಾ ಸಂಪರ್ಕವಿರುವ ಮೊಬೈಲ್ ಆ್ಯಪ್ ಅಥವಾ ಡಿಜಿಟಲ್ ಸಾಧನಗಳನ್ನು ಒದಗಿಸುವಂತೆಯೂ ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ರೆಪೋ ದರ ಯಥಾಸ್ಥಿತಿ, ತಟಸ್ಥ ನೀತಿ; ಜಿಡಿಪಿ ಶೇ. 6.7, ಹಣದುಬ್ಬರ ಶೇ. 5; ಇದು ಆರ್​ಬಿಐ ಎಂಪಿಸಿ ಸಭೆ ಮುಖ್ಯಾಂಶಗಳು

ಹೊಸ ವಾಹನಗಳಿಗೆ ಇನ್ಶೂರೆನ್ಸ್ ಅವಧಿ ಹೆಚ್ಚಳ

  • ಹೊಸ ಕಾರುಗಳಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅವಧಿಯನ್ನು 3 ವರ್ಷದಿಂದ 4 ವರ್ಷಕ್ಕೆ ಹೆಚ್ಚಿಸಲಾಗಿದೆ.
  • ಹೊಸ ದ್ವಿಚಕ್ರ ವಾಹನಗಳಿಗೆ (ಬೈಕ್/ಸ್ಕೂಟರ್) ಈ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us