ಗಂಡ- ಹೆಂಡತಿ ಇಬ್ಬರಿಗೂ ಸೇರಿ ಒಂದೇ ಇನ್ಷೂರೆನ್ಸ್ ಪಾಲಿಸಿ ಕವರ್ ಆಗುವಂತಿದ್ದರೆ ಏನು ಹೇಳ್ತೀರಿ? ಇಂಥದ್ದೊಂದು ವಿಮೆಯನ್ನು ಭಾರತೀಯ ಜೀವ ವಿಮಾ ನಿಗಮದಿಂದ ತರಲಾಗಿದೆ. ಇದರ ಹೆಸರು ಜೀವನ ಸಾಥಿ. ಈ ವಿಮೆಯ ಅನುಕೂಲ ಅಥವಾ ವೈಶಿಷ್ಟ್ಯ ಏನೆಂದರೆ, ಒಂದು ವೇಳೆ ಇಬ್ಬರ ಪೈಕಿ ಒಬ್ಬರಿಗೆ ಸಾವು ಸಂಭವಿಸಿದಲ್ಲಿ ಮತ್ತೊಬ್ಬರ ಪ್ರೀಮಿಯಂ ಶಾಶ್ವತವಾಗಿ ಕಟ್ಟುವ ಅಗತ್ಯ ಇಲ್ಲ, ಅದು ಮನ್ನಾ ಆಗಿಹೋಗುತ್ತದೆ. ಇಬ್ಬರೂ ಜೀವಂತ ಇದ್ದಲ್ಲಿ ಮೆಚ್ಯೂರಿಟಿ (ಪಕ್ಷತೆ) ಸಂದರ್ಭದಲ್ಲಿ ಇಬ್ಬರಿಗೂ ಪ್ರತ್ಯೇಕವಾಗಿ ಮೊತ್ತ ಸಿಗುತ್ತದೆ. ಗಂಡ- ಹೆಂಡತಿ ಪೈಕಿ ಒಬ್ಬರು ದುರದೃಷ್ಟವಶಾತ್ ಮೃತಪಟ್ಟಲ್ಲಿ ತಕ್ಷಣವೇ ಇಡಿಗಂಟಿನ ಮೊತ್ತವನ್ನು ಎಲ್ಐಸಿಯಿಂದ ನೀಡಲಾಗುತ್ತದೆ. ಆ ನಂತರ ಜೀವಿತಾವಧಿಯುದ್ದಕ್ಕೂ ಅಗತ್ಯ ಖರ್ಚುಗಳಿಗೆ ಸ್ವಲ್ಪ ಸ್ವಲ್ಪ ಹಣ ಸಿಗುತ್ತಾ ಇರುತ್ತದೆ.
ಗಂಡ- ಹೆಂಡತಿಗೆ ಅನುಕೂಲ
ಭಾರತದಲ್ಲಿ ಮಹಿಳೆಯರಿಗಾಗಿ ಇರುವ ವಿಮೆಗಳು ಬಹಳ ಕಡಿಮೆ. ಜತೆಗೆ ಒಂದು ವೇಳೆ ತಮಗೇನಾದರೂ ಆಗಿಹೋದರೆ ಆ ಪ್ರೀಮಿಯಂ ಹಣವನ್ನು ಯಾರ ಕಟ್ಟಬೇಕು ಅನ್ನೋ ಆತಂಕ ಕೂಡ ಇದಕ್ಕೆ ಕಾರಣ. ಆ ಕಾರಣಕ್ಕೆ ಮಹಿಳೆಯರು ಜೀವ ವಿಮೆಯಿಂದ ಹೊರಗೆ ಉಳಿದುಬಿಡುತ್ತಾರೆ. ಇದನ್ನು ನೋಡಿದರೆ, ಜೀವನ ಸಾಥಿ ವಿಮೆಯು ಬಹಳ ಅನುಕೂಲ ಎನಿಸುತ್ತದೆ. ಏಕೆಂದರೆ, ಮೊದಲೇ ತಿಳಿಸಿದಂತೆ, ದಂಪತಿ ಪೈಕಿ ಯಾರಿಗೇ ಅವಘಡವಾದರೂ ಮತ್ತೊಬ್ಬರು ಪ್ರೀಮಿಯಂ ತುಂಬಬೇಕಿಲ್ಲ. ಇನ್ನು ಮೆಚ್ಯೂರಿಟಿ ಮೊತ್ತ ಇಬ್ಬರಿಗೂ ಬೇರೆ- ಬೇರೆಯಾಗಿ ಸಿಗುತ್ತದೆ.
ಈ ಪಾಲಿಸಿ ಸುಲಭವಾಗಿ ಅರ್ಥ ಮಾಡಿಕೊಳ್ಳೋಣ
ಒಂದು ಉದಾಹರಣೆ ಜತೆಗೆ ಈ ಪಾಲಿಸಿ ಬಗ್ಗೆ ತಿಳಿಯುವುದಕ್ಕೆ ಪ್ರಯತ್ನಿಸೋಣ. 25 ವರ್ಷದ ಭಾಸ್ಕರ್ ಅವರು ತಮ್ಮ ಪತ್ನಿ 23 ವರ್ಷದ ಮಂಜುಳಾಗೂ ಸೇರಿ ಜೀವನಸಾಥಿ ಪಾಲಿಸಿ ಖರೀದಿ ಮಾಡಿದ್ದಾರೆ. 25 ವರ್ಷದ ಅವಧಿಗೆ ಈ ಪಾಲಿಸಿಯನ್ನು ಪಡೆದಿದ್ದಾರೆ. ಪಾಲಿಸಿಯ ಪ್ರಕಾರ, 22 ವರ್ಷದ ತನಕ ಪ್ರೀಮಿಯಂ ಭರಿಸಬೇಕು. 25ನೇ ವರ್ಷದಲ್ಲಿ ಮೆಚ್ಯೂರಿಟಿ ಸಿಗುತ್ತದೆ. ಇಬ್ಬರದೂ ಇನ್ಷೂರ್ಡ್ ಮೊತ್ತ 5 ಲಕ್ಷ ರೂಪಾಯಿ ಅಂತ ಅಂದುಕೊಳ್ಳಿ. ಇವರಿಬ್ಬರಿಗೆ ತಿಂಗಳಿಗೆ 3,648 ರೂಪಾಯಿ ಅಥವಾ ವರ್ಷಕ್ಕಾದರೆ 42,841 ರೂಪಾಯಿ ಬರುತ್ತದೆ. ತಿಂಗಳಿಗೆ 3268 ರೂಪಾಯಿ ಅಂದರೆ ದಿನದ ಲೆಕ್ಕಕ್ಕೆ 122 ರೂಪಾಯಿ ಆಗುತ್ತದೆ.
ಈ ಪಾಲಿಸಿಯ 3 ಲಾಭಗಳು
25 ವರ್ಷದ ನಂತರ ಪಾಲಿಸಿ ಮೆಚ್ಯೂರ್ ಆಗುತ್ತದೆ. ಅದಕ್ಕಾಗಿ 22 ವರ್ಷಗಳ ಕಾಲ ಪ್ರೀಮಿಯಂ ಕಟ್ಟಬೇಕು. ವಿಮೆಯು ಮೆಚ್ಯೂರ್ ಆದ ಮೇಲೆ ಭಾಸ್ಕರ್ಗೆ 13.50 ಲಕ್ಷ ರೂಪಾಯಿ ಸಿಗುತ್ತದೆ. ಅದೇ ರೀತಿ ಅವರ ಹೆಂಡತಿ ಮಂಜುಳಾಗೂ 13.50 ಲಕ್ಷ ದೊರೆಯುತ್ತದೆ. ಇಬ್ಬರಿಗೂ ಒಟ್ಟು ಸೇರಿ 27 ಲಕ್ಷ ರೂಪಾಯಿ ಸಿಗುತ್ತದೆ. ಒಂದು ವೇಳೆ ಪಾಲಿಸಿ ತೆಗೆದುಕೊಂಡ ಮೇಲೆ ಭಾಸ್ಕರ್ ಅಥವಾ ಮಂಜುಳಾ ಜತೆ ಅಹಿತಕರವಾದದ್ದು ನಡೆದುಹೋದಲ್ಲಿ, ಅಥವಾ ಒಬ್ಬರು ಇಲ್ಲವಾದಲ್ಲಿ ಅಂಥ ಸನ್ನಿವೇಶದಲ್ಲಿ ಎಲ್ಐಸಿ ಜೀವನ ಸಾಥಿ ವಿಮೆಯು ಮೂರು ಬಗೆಯಲ್ಲಿ ಲಾಭದಾಯಕ ಎಂದು ಪರಿಗಣಿಸಲಾಗುತ್ತದೆ.
ಇಬ್ಬರ ಪೈಕಿ ಒಬ್ಬರು ಮೃತಪಟ್ಟಲ್ಲಿ ಎಷ್ಟು ಹಣ ದೊರೆಯುತ್ತದೆ
ಯಾರದರೂ ಒಬ್ಬರು ಮೃತಪಟ್ಟಲ್ಲಿ ತಕ್ಷಣವೇ 5 ಲಕ್ಷ ರೂಪಾಯಿ ಸಿಗುತ್ತದೆ. ಇನ್ನು ಭವಿಷ್ಯದಲ್ಲಿ ಕಟ್ಟಬೇಕಾದ ಅಷ್ಟೂ ಪ್ರೀಮಿಯಂ ಮನ್ನಾ ಆಗಿಹೋಗುತ್ತದೆ. ಜತೆಗೆ ಎಲ್ಐಸಿಯಿಂದ ಬದುಕಿರುವ ಸಂಗಾತಿಗೆ ಪ್ರತಿ ವರ್ಷ ಹತ್ತಿರಹತ್ತಿರ 50 ಸಾವಿರ ರೂಪಾಯಿ ಸಿಗುತ್ತದೆ. ಇದರ ಜತೆಗೆ 25 ವರ್ಷದ ನಂತರ ಮೆಚ್ಯೂರಿಟಿ ಆಗುವಾಗ ಬದುಕಿರುವ ಸಂಗಾತಿಗೆ 27 ಲಕ್ಷ ರೂಪಾಯಿಗೆ ಕೂಡ ಸಿಗುತ್ತದೆ. 18 ವರ್ಷ ಮೇಲ್ಪಟ್ಟು 50 ವರ್ಷದೊಳಗಿನವರು ಈ ಪಾಲಿಸಿಯನ್ನು ಪಡೆಯಬಹುದು. ಇನ್ನು ಕನಿಷ್ಠ 13 ವರ್ಷ ಹಾಗೂ ಗರಿಷ್ಠ 25 ವರ್ಷದ ಅವಧಿಗೆ ಪಾಲಿಸಿ ಆಯ್ಕೆ ಮಾಡಿಕೊಳ್ಳಬಹುದು. ನೀವು ಎಷ್ಟು ವರ್ಷದ ಅವಧಿಗೆ ಪಾಲಿಸಿ ಖರೀದಿ ಮಾಡಿರುತ್ತೀರೋ ಅದಕ್ಕೆ ಮೂರು ವರ್ಷ ಮುಂಚಿನ ತನಕ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: LIC Housing Finance 6 EMI Waiver: ಎಲ್ಐಸಿ ಹೌಸಿಂಗ್ ಫೈನಾನ್ಸ್ನಿಂದ ಆರು ಇಎಂಐ ಮನ್ನಾ ಘೋಷಣೆ
(Here is the must know detail about LIC Jeevan Saathi policy premium, benefits and other details)