LIC Housing Finance 6 EMI Waiver: ಎಲ್ಐಸಿ ಹೌಸಿಂಗ್ ಫೈನಾನ್ಸ್ನಿಂದ ಆರು ಇಎಂಐ ಮನ್ನಾ ಘೋಷಣೆ
ಎಲ್ಐಸಿ ಹೌಸಿಂಗ್ ಫೈನಾನ್ಸ್ನ ಗೃಹ ವರಿಷ್ಠ ಯೋಜನೆ ಅಡಿಯಲ್ಲಿ ಸಾಲ ಪಡೆಯುವವರಿಗೆ 6 ಇಎಂಐಗಳನ್ನು ಮನ್ನಾ ಮಾಡುವುದಾಗಿ ಗುರುವಾರ ಘೋಷಣೆ ಮಾಡಲಾಗಿದೆ. ಇದರ ಅನುಕೂಲ ಯಾರ್ಯಾರಿಗೆ ಸಿಗುತ್ತದೆ ಎಂಬುದನ್ನು ತಿಳಿಯಿರಿ.
ಎಲ್ಐಸಿ ಹೌಸಿಂಗ್ ಫೈನಾನ್ಸ್ನ ಗೃಹ ವರಿಷ್ಠ ವಿಶೇಷ ಗೃಹ ಸಾಲ ಯೋಜನೆ ಅಡಿಯಲ್ಲಿ ಆರು ಇಎಂಐ (ಸಮಾನ ಮಾಸಿಕ ಕಂತುಗಳು) ಮನ್ನಾ ಮಾಡುವುದಾಗಿ ಗುರುವಾರ ಘೋಷಣೆ ಮಾಡಲಾಗಿದೆ. ಈ ಯೋಜನೆಯು ವೇತನದಾರ ಸಾಲಗಾರರು ಮತ್ತು ಡಿಫೈನ್ಡ್ ಬೆನಿಫಿಟ್ ಪೆನ್ಷನ್ ಸ್ಕೀಮ್ (DBPS) ಪಿಂಚಣಿದಾರರಿಗೆ ಅನ್ವಯ ಆಗುತ್ತದೆ. 37, 38, 73, 74, 121 ಮತ್ತು 122ನೇ ಇಎಂಐ ಮನ್ನಾ ಮಾಡಿ, ಆ ಮೊತ್ತವನ್ನು ಬಾಕಿ ಇರುವ ಅಸಲಿನೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಅಡಮಾನ ಮಾಡಿಕೊಂಡು ಸಾಲ ನೀಡುವ ಸಂಸ್ಥೆಯಾದ ಎಲ್ಐಸಿ ಹೌಸಿಂಗ್ ಈ ಬಗ್ಗೆ ಹೇಳಿಕೆ ನೀಡಿ, ನಿವೃತ್ತ ಅಥವಾ ಈಗ ಸೇವೆಯಲ್ಲಿ ಇರುವ ಪಿಎಸ್ಯು ಇನ್ಷೂರೆನ್ಸ್ದಾರರಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಿ, ರೈಲ್ವೇಸ್, ರಕ್ಷಣಾ, ಬ್ಯಾಂಕ್ ಮತ್ತಿತರ ವಲಯಗಳಲ್ಲಿ ಡಿಫೈನ್ಡ್ ಬೆನಿಫಿಟ್ ಪೆನ್ಷನ್ ಸ್ಕೀಮ್ಗೆ ಇತರರು ಯಾರು ಅರ್ಹರಿರುತ್ತಾರೆ ಅಂಥವರಿಗೆ ಈ ಉತ್ಪನ್ನವು ಅನುಕೂಲ ಒದಗಿಸುತ್ತದೆ ಎಂದು ಹೇಳಲಾಗಿದೆ.
ಗರಿಷ್ಠ ಅವಧಿ 30 ವರ್ಷ ಅಥವಾ 80 ವರ್ಷ ವಯಸ್ಸು “ಗೃಹ ವರಿಷ್ಠ ಎಂಬುದು ವಿಶಿಷ್ಟ ಗೃಹ ಸಾಲ ಉತ್ಪನ್ನ. ಅರ್ಜಿ ಸಲ್ಲಿಸುವಾಗ 65 ವರ್ಷದ ತನಕ ವಯಸ್ಸಾಗಿರುವವರು ಇದಕ್ಕೆ ಅರ್ಹರು. 80 ವರ್ಷ ತುಂಬುವ ತನಕ ಅಥವಾ ಗರಿಷ್ಠ ಅವಧಿ 30 ವರ್ಷ- ಈ ಎರಡರ ಪೈಕಿ ಯಾವುದೋ ಶೀಘ್ರವೋ ಅಲ್ಲಿಯ ತನಕ ಸಾಲ ಮರುಪಾವತಿಗೆ ಅವಕಾಶ ದೊರೆಯುತ್ತದೆ,” ಎನ್ನಲಾಗಿದೆ.
3000 ಕೋಟಿ ರೂಪಾಯಿ ಸಾಲ ವಿತರಣೆ ಎಲ್ಐಸಿ ಹೌಸಿಂಗ್ ಫೈನಾನ್ಸ್ನ ಮುಖ್ಯಾಧಿಕಾರಿ ವೈ. ವಿಶ್ವನಾಥ ಗೌಡ್ ಮಾತನಾಡಿ, ವಿಶಿಷ್ಟ ಲಕ್ಷಣಗಳ ಮೂಲಕ ಗೃಹ ವರಿಷ್ಠವು ಆರಂಭವಾದ ಜುಲೈ 2020ರಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಂಪೆನಿಯಿಂದ 3000 ಕೋಟಿ ರೂಪಾಯಿ ಮೊತ್ತದ 15,000 ಸಾಲ ವಿತರಣೆ ಮಾಡಲಾಗಿದೆ. ಈ ಆರು ಇಎಂಐ ಮನ್ನಾ ಎಂಬುದು ಗ್ರಾಹಕರಿಗೆ ವಿಸ್ತರಣೆ ಮಾಡುತ್ತಿರುವ ಲಾಯಲ್ಟಿ ಕಾರ್ಯಕ್ರಮ ಎಂದು ಹೇಳಿದ್ದಾರೆ.
ಕಂಪೆನಿಯು ತಿಳಿಸಿರುವ ಪ್ರಕಾರ, ಸಿಬಿಲ್ ಸ್ಕೋರ್ 700 ಮತ್ತು ಅದಕ್ಕಿಂತ ಹೆಚ್ಚಿಗೆ ಇರುವ ಗ್ರಾಹಕರಿಗೆ 15 ಕೋಟಿ ರೂಪಾಯಿ ತನಕದ ಗೃಹ ಸಾಲವನ್ನು ಸದ್ಯಕ್ಕೆ ಶೇ 6.9ರ ಆರಂಭಿಕ ದರದಲ್ಲಿ ನೀಡಲಾಗುತ್ತಿದೆ.
ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು