Loan Account: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ

ಒಬ್ಬ ವ್ಯಕ್ತಿ ಬ್ಯಾಂಕ್‌ನಿಂದ ಸಾಲ ತೆಗೆದಾಗ ಸಾಲದ ಖಾತೆಯಲ್ಲಿ ನಾಮಿನಿ ಹೆಸರನ್ನು ಹಾಕಲಾಗುತ್ತದೆ. ಸಾಲಗಾರರು ಮೃತಪಟ್ಟರೆ ಆ ಸಾಲದ ಹೊಣೆಗಾರಿಕೆಯನ್ನು ಅಥವಾ ಸಾಲದ ಆಸ್ತಿಯನ್ನು ನಿರ್ವಹಿಸುವವರೇ ಈ ನಾಮಿನಿಗಳೇ ಆಗಿರುತ್ತಾರೆ. ಸಾಲಗಾರರು ಈ ನಾಮಿನಿ ಹೆಸರನ್ನು ಬದಲಾಯಿಸುವ ಅವಕಾಶವಿದೆ. ಅದೇಗೆ ಅಂತೀರಾ? ಇಲ್ಲಿದೆ ಮಾಹಿತಿ

Loan Account: ಲೋನ್ ಅಕೌಂಟ್‌ನಲ್ಲಿನ ನಾಮಿನಿ ಹೆಸರನ್ನು ಬದಲಾಯಿಸಲು ಹೀಗೆ ಮಾಡಿ
ಲೋನ್‌ ಅಕೌಂಟ್‌
Image Credit source: Pinterest
Edited By:

Updated on: Jul 16, 2026 | 3:51 PM

ಮುಖ್ಯಾಂಶಗಳು

  • ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ, ಕಾನೂನು ಪ್ರಕ್ರಿಯೆಗಳನ್ನು ಸುಲಭಗೊಳಿಸುವುದೇ ಈ ನಾಮಿನಿ
  • ನಾಮಿನಿ ಹೆಸರನ್ನು ಬದಲಾಯಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕು
  • ಹೆಸರು ಬದಲಾವಣೆಗೆ ನಾಮಿನಿಯ ಗುರುತಿನ ಚೀಟಿ ಹಾಗೂ ವಿಳಾಸದ ಪುರಾವೆಯ ಜೆರಾಕ್ಸ್ ಪ್ರತಿ ಬೇಕು

ಎಷ್ಟೇ ಪರಿಚಯಸ್ಥರೇ ಆಗಲಿ, ಸಾಲ (loan) ಪಡೆಯುತ್ತಿದ್ದರೆ ಆ ಸಾಲಕ್ಕೆ ನಾಮಿನಿಯಾಗಿ ತಮ್ಮ ಹೆಸರನ್ನು ಹಾಕಲು ಹಿಂದೇಟು ಹಾಕುತ್ತೇವೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮೃತ ಪಟ್ಟರೆ ಆ ಸಾಲದ ಹೊರೆ ನಮ್ಮ ಮೇಲೆ ಬರುತ್ತದೆ ಎಂಬ ಭಯ ಕಾಡುವುದು ಸಹಜ. ಆದರೆ ಈ ಸಾಲದ ಅವಧಿಯಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ, ಕಾನೂನು ಪ್ರಕ್ರಿಯೆಗಳನ್ನು ಸುಲಭಗೊಳಿಸುವುದೇ ಈ ನಾಮಿನಿ ಹೆಸರು (nominee name). ಸಾಲಗಾರನು ಈ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ. ಸಾಲದ ಖಾತೆಯಲ್ಲಿರುವ ಹೆಸರನ್ನು ಬದಲಾಯಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಲದ ಖಾತೆಯಲ್ಲಿ ನಾಮಿನಿ ಹೆಸರನ್ನು ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಸಾಲವಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ನಾಮಿನೇಷನ್ ಬದಲಾವಣೆ ಫಾರ್ಮ್ ಪಡೆಯಿರಿ. ಆದರೆ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನ ಡೌನ್‌ಲೋಡ್ ವಿಭಾಗದಲ್ಲಿ ಈ ಫಾರ್ಮ್‌ಗಳು ಲಭ್ಯವಿರುತ್ತದೆ.

ಹಂತ 2: ಈ ಫಾರ್ಮ್‌ನಲ್ಲಿ ನಿಮ್ಮ ಸಾಲದ ಖಾತೆ ಸಂಖ್ಯೆ, ಹೊಸದಾಗಿ ನಾಮಿನಿ ಮಾಡಲು ಬಯಸುವ ವ್ಯಕ್ತಿಯ ಹೆಸರು, ಆ ವ್ಯಕ್ತಿಯ ಜನ್ಮದಿನಾಂಕ ಹಾಗೂ ನಿಮ್ಮೊಂದಿಗಿರುವ ಸಂಬಂಧ ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ಹೊಸ ನಾಮಿನಿಯ ಪಾನ್ ಕಾರ್ಡ್, ಆಧಾರ್ ಕಾರ್ಡ್, ಅಥವಾ ಪಾಸ್‌ಪೋರ್ಟ್‌ನಂತಹ ದಾಖಲೆಗಳು, ವಿಳಾಸದ ಪುರಾವೆಯ ಜೆರಾಕ್ಸ್ ಪ್ರತಿಯನ್ನು ಫಾರ್ಮ್‌ನೊಂದಿಗೆ ಲಗತ್ತಿಸಿ.

ಹಂತ 4: ಸಾಲದ ಖಾತೆದಾರರು ನಾಮಿನೇಷನ್ ಬದಲಾವಣೆ ಫಾರ್ಮ್‌ನಲ್ಲಿ ಸಹಿ ಮಾಡಿ.

ಹಂತ 5: ಭರ್ತಿ ಮಾಡಿದ ಫಾರ್ಮ್ ಹಾಗೂ ಗುರುತಿನ ಚೀಟಿ ಸೇರಿದಂತೆ ಇನ್ನಿತ್ತರ ದಾಖಲೆಗಳನ್ನು ಬ್ಯಾಂಕ್ ಅಧಿಕಾರಿಗೆ ನೀಡಿ.

ಹಂತ 6: ಬ್ಯಾಂಕ್ ಸಿಬ್ಬಂದಿ ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಿಮ್ಮ ಸಾಲದ ಖಾತೆಯಲ್ಲಿ ಹೊಸ ನಾಮಿನಿ ಹೆಸರನ್ನು ಸೇರಿಸುತ್ತಾರೆ.

ಇದನ್ನೂ ಓದಿ: ಸಾಲ ಮರುಪಾವತಿ ಮಾಡಿದ ಕೂಡ್ಲೇ ಬ್ಯಾಂಕ್‌ನಿಂದ ಈ ದಾಖಲೆಗಳನ್ನು ತಪ್ಪದೇ ಪಡೆಯಿರಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ನಾಮಿನಿ ಎಂದರೆ ಯಾರು?

ಉತ್ತರ: ಸಾಲಗಾರರು ಮೃತಪಟ್ಟರೆ ಆ ಸಾಲದ ಹೊಣೆಗಾರಿಕೆಯನ್ನು ಅಥವಾ ಸಾಲದ ಆಸ್ತಿಯನ್ನು ನಿರ್ವಹಿಸುವವರೇ ಈ ನಾಮಿನಿಗಳು.

ಪ್ರಶ್ನೆ: ಸಾಲಗಾರರಿಗೆ ತಮ್ಮ ಲೋನ್ ಅಕೌಂಟ್ ನಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆಯೇ?

ಉತ್ತರ: ತಮ್ಮ ಲೋನ್ ಅಕೌಂಟ್ ನಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸಲು ಅವಕಾಶವಿದೆ.

ಪ್ರಶ್ನೆ: ಸಾಲದ ಖಾತೆಯಲ್ಲಿರುವ ನಾಮಿನಿ ಹೆಸರನ್ನು ಬದಲಾಯಿಸುವುದು ಹೇಗೆ?

ಉತ್ತರ: ನಾಮಿನಿ ಹೆಸರನ್ನು ಬದಲಾಯಿಸಲು  ಸಾಲ ಪಡೆದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯ ಶಾಖೆಗೆ ಭೇಟಿ ನೀಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 6:12 pm, Wed, 15 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us