ಎನ್​ವಿಡಿಯಾ ನನ್ನ ಜೀವಮಾನದ ಕಾರ್ಯ; ನಾನು ತಪ್ಪು ಮಾಡಿಬಿಟ್ಟೆ ಎಂದ ಜೆನ್ಸೆನ್ ಹುವಾಂಗ್; ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು

ಶಂಕಿತ ಗೂಢಚಾರಿಣಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಆರೋಪದ ಹಿನ್ನೆಲೆಯಲ್ಲಿ ಜೆನ್ಸೆನ್ ಹುವಾಂಗ್ ಅವರು ಎನ್​ವಿಡಿಯಾ ಸಿಇಒ ಸ್ಥಾನದಿಂದ ಹೊರಹೋಗಿದ್ದರು. ಈಗ ತಾನು ತಪ್ಪು ಮಾಡಿದೆ. ತನ್ನ ಮರಳುವಿಕೆಯಿಂದ ಕಂಪನಿಯ ಹಿತಾಸಕ್ತಿಗೆ ಒಳಿತಾಗುತ್ತದೆ ಎಂದು ಮಂಡಳಿಗೆ ಅನಿಸಿದಲ್ಲಿ ತಾನು ಮತ್ತೆ ಸಿಇಒ ಆಗಲಿ ಸುದ್ಧ ಎಂದು ಹುವಾಂಗ್ ಹೇಳಿದ್ದಾರೆ.

ಎನ್​ವಿಡಿಯಾ ನನ್ನ ಜೀವಮಾನದ ಕಾರ್ಯ; ನಾನು ತಪ್ಪು ಮಾಡಿಬಿಟ್ಟೆ ಎಂದ ಜೆನ್ಸೆನ್ ಹುವಾಂಗ್; ವಾಪಸ್ ಕರೆಸಿಕೊಳ್ಳಲು ಕಂಪನಿ ಹಿಂದೇಟು
ಜೆನ್ಸೆನ್ ಹುವಾಂಗ್
Image Credit source: AP

Updated on: Nov 18, 2026 | 12:22 PM

ವಾಷಿಂಗ್ಟನ್, ನವೆಂಬರ್ 18: ಅಕ್ರಮ ಸಂಬಂಧದ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಎನ್​ವಿಡಿಯಾದ ಸಿಇಒ ಸ್ಥಾನದಿಂದ ಹೊರಹೋದ ಜೆನ್ಸೆನ್ ಹುವಾಂಗ್, ಈಗ ವಾಪಸ್ ಬರುವ ಇರಾದೆ ವ್ಯಕ್ತಪಡಿಸಿದ್ದಾರೆ. ಆದರೆ, ಎನ್​ವಿಡಿಯಾ ಆಡಳಿತ ಮಂಡಳಿ ಜೆನ್ಸೆನ್ ಅವರನ್ನು ವಾಪಸ್ ಕರೆಸಿಕೊಳ್ಳುವ ಮನಸು ಮಾಡಿಲ್ಲ.

ಎನ್​ವಿಡಿಯಾವನ್ನು ಸ್ಥಾಪಿಸಿ ವಿಶ್ವದ ಅಗ್ರಮಾನ್ಯ ಕಂಪನಿಗಳಲ್ಲೊಂದಾಗಿ ಮಾಡಿದ ಶ್ರೇಯಸ್ಸು ಹೆಚ್ಚಾಗಿ ಜೆನ್ಸೆನ್ ಅವರಿಗೇ ಸಲ್ಲುತ್ತದೆ. ಆದರೆ, ಶಂಕಿತ ಚೀನೀ ಗೂಢಚಾರಿಣಿ ಸೇರಿದಂತೆ ವಿವಿಧ ಮಹಿಳೆಯರ ಜೊತೆ ಅಕ್​ರಮ ಸಂಬಂಧ ಇಟ್ಟುಕೊಂಡ ಆರೋಪ ಅವರ ಮೇಲಿದೆ. ಹೀಗಾಗಿ, ಎನ್​ವಿಡಿಯಾದೊಳಗೆ ಅವರ ಮರುಪ್ರವೇಶ ಕಷ್ಟಸಾಧ್ಯ ಎನ್ನಲಾಗುತ್ತಿದೆ.

Loading...

ಇದೇ ವೇಳೆ, ಜೆನ್ಸೆನ್ ಹುವಾಂಗ್ ತಮ್ಮ ಮನಸ್ಸಿನ ಮಾತುಗಳನ್ನು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ವ್ಯಕ್ತಪಡಿಸಿದ್ದಾರೆ. ಭಾವುಕರಾಗಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಷ್ಟ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹಿಂಬಾಗಿಲ ಮೂಲಕ ಟಾಟಾ ಸನ್ಸ್ ಲಪಟಾಯಿಸುವ ಯತ್ನ: ನೋಯೆಲ್ ಟಾಟಾ ವಿರುದ್ಧ ರತನ್ ಟಾಟಾ ಸೋದರ ಆರೋಪ

ಅಮೆರಿಕ ಅಲ್ಲದೆ ಬೇರೆಲ್ಲೂ ಎನ್​ವಿಡಿಯಾ ಅರಳಲು ಸಾಧ್ಯವಿಲ್ಲ

‘ಅಮೆರಿಕ ದೇಶಕ್ಕೆ 53 ವರ್ಷಗಳ ಹಿಂದೆ ಬಂದು ಇಲ್ಲಿಯ ಪ್ರಜೆಯಾಗಿದ್ದು ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳು. ಎನ್​ವಿಡಿಯಾ ನನ್ನ ಜೀವಮಾನದ ಕೆಲಸ. ಕಂಪನಿಯನ್ನು ಈಗಿರುವ ಮಟ್ಟಕ್ಕೆ ತಂದಿರುವುದು ಮತ್ತು ಸಹೋದ್ಯೋಗಿಗಳನ್ನು ಗಳಿಸಿದ್ದು ನನಗೊಂದು ಗೌರವ. ಎನ್​ವಿಡಿಯಾದಂತಹ ಕಂಪನಿ ಅಮೆರಿಕವಲ್ಲದೆ ಬೇರೆಲ್ಲೂ ಬರಲು ಸಾಧ್ಯವಿರಲಿಲ್ಲ. ನನ್ನ ದೇಶ ಮತ್ತು ಅಮೆರಿಕವನ್ನು ಪ್ರೀತಿಸುತ್ತೇನೆ’ ಎಂದು ಜೆನ್ಸೆನ್ ಹುವಾಂಗ್ ತಮ್ಮ ಎಕ್ಸ್​ನಲ್ಲಿ ಹೇಳಿದ್ದಾರೆ.

ಗಂಭೀರ ತಪ್ಪು ಮಾಡಿಬಿಟ್ಟೆ ಎಂದ ಹುವಾಂಗ್

ಎನ್​ವಿಡಿಯಾದಲ್ಲಿ ಎಲ್ಲರ ನಿರೀಕ್ಷೆಗೆ ತಕ್ಕಂತೆ ಇರಲು ನನಗೆ ಆಗಲಿಲ್ಲ. ನನ್ನ ಖಾಸಗಿ ಜೀವನದಲ್ಲಿ ಗಂಭೀರ ತಪ್ಪುಗಳನ್ನು ಮಾಡಿದೆ. ಅದಕ್ಕೆ ನಾನೇ ಪೂರ್ಣ ಜವಾಬ್ದಾರ. ಆಡಳಿತ ಮಂಡಳಿಯ ಸ್ವತಂತ್ರ ತನಿಖೆಗೆ ನನ್ನ ಸಹಕಾರ ಇರುತ್ತದೆ ಎಂದು ಎನ್​ವಿಡಿಯಾ ಸಹ-ಸಂಸ್ಥಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: ಟಿವಿಎಸ್ ಸಾಮ್ರಾಜ್ಯದಲ್ಲಿ ಉತ್ತರಾಧಿಕಾರದ ಕಿಚ್ಚು: ತಂದೆಯ ಆಸ್ತಿಯಲ್ಲಿ ಸಮಪಾಲು ಕೋರಿದ ಲಕ್ಷ್ಮೀ ವೇಣು; ಮಗಳ ಬೆನ್ನಿಗೆ ನಿಂತ ತಾಯಿ

ಕಂಪನಿಗೆ ಮರಳಲು ಸಿದ್ಧ ಎಂದ ಜೆನ್ಸೆನ್

ಜೆನ್ಸೆನ್ ಹುವಾಂಗ್ ಅವರು ಸಿಇಒ ಆಗಿ ಎನ್​ವಿಡಿಯಾ ಕಂಪನಿಗೆ ಮರಳಬೇಕೆಂದು ಸಾವಿರಾರು ಉದ್ಯೋಗಿಗಳು ಒತ್ತಾಯಿಸಿರುವುದಂಟು. ಹುವಾಂಗ್ ಕೂಡ ತಾನು ಕಂಪನಿಗೆ ಮರಳುವ ಇರಾದೆ ವ್ಯಕ್ತಪಡಿಸಿದ್ದಾರೆ.

ಜೆನ್ಸೆನ್ ಅವರ ಎಕ್ಸ್ ಪೋಸ್ಟ್

‘ಎನ್​ವಿಡಿಯಾ ತಲೆಮಾರಿಗೊಮ್ಮೆ ಸ್ಥಾಪನೆಯಾಗುವ ಕಂಪನಿ. ಶೇರುದಾರರು, ಉದ್ಯೋಗಿಗಳು, ಕಂಪನಿ, ಮತ್ತು ದೇಶದ ಹಿತಾಸಕ್ತಿಗಳಿಗೆ ಒಳಿತಾಗುತ್ತದೆ ಎಂದು ಮಂಡಳಿಗೆ ಅನಿಸಿದರೆ ತಾನು ಸಿಇಒ ಆಗಿ ಮರಳಲು ಸಿದ್ಧ’ ಎಂದಿದ್ದಾರೆ.

ಆದರೆ, ಹುವಾಂಗ್ ಅವರು ಎಕ್ಸ್​ನಲ್ಲಿ ಈ ಪೋಸ್ಟ್ ಹಾಕಿದ ಕೆಲ ಗಂಟೆಗಳ ಬಳಿಕ ಎನ್​ವಿಡಿಯಾ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಬಂದಿದ್ದು, ಹುವಾಂಗ್ ಅವರಿಗೆ ಮರಳಿ ಬರುವ ಅವಕಾಶ ಇಲ್ಲ ಎಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Wed, 18 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us