
ಮುಂಬೈ, ಏಪ್ರಿಲ್ 16: ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಡಿಜಿಟಲ್ ರೂಪಾಂತರದ ಭಾಗವಾಗಿ ಗ್ರಾಹಕರು ಮತ್ತು ಮಾರಾಟ ಪ್ರತಿನಿಧಿಗಳಿಗಾಗಿ (Intermediaries) ಎರಡು ಅತ್ಯಾಧುನಿಕ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಅವರು ಈ ಆಪ್‌ಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್‌ಐಸಿ ಸಿಇಒ ಮತ್ತು ಎಂಡಿ ಆರ್. ದೊರೈಸ್ವಾಮಿ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
MyLIC ತನ್ನ ಪಾಲಿಸಿದಾರರಿಗಾಗಿ ವಿನ್ಯಾಸಗೊಳಿಸಲಾದ ಮುಂದಿನ ಪೀಳಿಗೆಯ ಆಪ್ ಆಗಿದ್ದು, ಇನ್ಷೂರೆನ್ಸ್ ಪೋರ್ಟ್‌ಫೋಲಿಯೋ ನಿರ್ವಹಣೆಯನ್ನು ಸುಲಭಗೊಳಿಸಲಿದೆ. ಇದರಲ್ಲಿ ಇರುವ ಪ್ರಮುಖ ಫೀಚರ್ಸ್ ಇಂತಿವೆ:
ಇದನ್ನೂ ಓದಿ: ಗುಜರಾತ್ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ
ಇದು ಎಲ್‌ಐಸಿ ವಿಮಾ ಏಜೆಂಟ್‌ಗಳು ಮತ್ತು ಮಾರ್ಕೆಟಿಂಗ್ ಸಿಬ್ಬಂದಿಗಾಗಿ ರೂಪಿಸಲಾದ ಆಪ್ ಆಗಿದೆ. ಇದರಲ್ಲಿರುವ ಪ್ರಮುಖ ಫೀಚರ್ಸ್ ಇಂತಿವೆ:
ಈ ಎರಡೂ ಅಪ್ಲಿಕೇಶನ್‌ಗಳನ್ನು ಎಲ್‌ಐಸಿಯ ‘ಡೈವ್’ (DIVE- Digital Innovation & Value Enhancement) ಎಂಬ ಡಿಜಿಟಲ್ ರೂಪಾಂತರ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎಲ್‌ಐಸಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಮತ್ತು ಗ್ರಾಹಕರಿಗೆ ತಡೆರಹಿತ ಸೇವೆ ನೀಡಲು ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಎನ್ಬಿಎಫ್ಸಿಗಳಿಗೆ ಆರ್ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ
ಈ ಆಪ್‌ಗಳ ಬಳಕೆಯಿಂದಾಗಿ ಎಲ್‌ಐಸಿ ಗ್ರಾಹಕರು ಈಗ ವಿಮಾ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪಲಿದ್ದು, ಬೆರಳ ತುದಿಯಲ್ಲೇ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ