ಯುಪಿಐನಲ್ಲಿ ಸ್ಕ್ಯಾನ್ ಮಾಡಿ, ಇಎಂಐಗಳಲ್ಲಿ ಹಣ ಪಾವತಿಸಿ: ಬರಲಿದೆ ಹೊಸ ಫೀಚರ್

Split UPI Payments Into EMIs By Scanning A QR Code: ಯುಪಿಐ ಆ್ಯಪ್​ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಒಮ್ಮೆಗೇ ಪೂರ್ತಿ ಪೇಮೆಂಟ್ ಮಾಡುವ ಬದಲು ಸ್ಪ್ಲಿಟ್ ಪೇಮೆಂಟ್ ಮಾಡಬಹುದು. ಯುಪಿಐ ಪಾವತಿಯಲ್ಲಿ ಇಎಂಐ ಆಪ್ಷನ್ ಕೊಡಲು ಎನ್​ಪಿಸಿಐ ಯೋಜಿಸಿದೆ. ಇದಕ್ಕೆ ಇಂಟರ್​ಮಿಟೆಂಟ್ ಫೀ ಅಥವಾ ಶುಲ್ಕ ವಿಧಿಸುವ ಸಾಧ್ಯತೆ ಇದೆ. ಬ್ಯಾಂಕುಗಳು ಹಾಗೂ ಫಿನ್​ಟೆಕ್ ಸಂಸ್ಥೆಗಳಿಗೆ ಆದಾಯ ಮೂಲ ಸಿಕ್ಕಂತಾಗುತ್ತದೆ.

ಯುಪಿಐನಲ್ಲಿ ಸ್ಕ್ಯಾನ್ ಮಾಡಿ, ಇಎಂಐಗಳಲ್ಲಿ ಹಣ ಪಾವತಿಸಿ: ಬರಲಿದೆ ಹೊಸ ಫೀಚರ್
ಯುಪಿಐ

Updated on: Oct 03, 2025 | 12:17 PM

ನವದೆಹಲಿ, ಅಕ್ಟೋಬರ್ 3: ಭಾರತದ ನಂಬರ್ ಒನ್ ಪೇಮೆಂಟ್ ಸಿಸ್ಟಂ ಆಗಿರುವ ಯುಪಿಐ (UPI) ಆಗಾಗ್ಗೆ ಹೊಸ ಹೊಸ ಫೀಚರ್ಸ್ ಸೇರಿಸಿಕೊಳ್ಳುತ್ತಲೇ ಇರುತ್ತದೆ. ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಲೈನ್, ಫ್ಯಾಮಿಲಿ ಶೇರಿಂಗ್ ಇತ್ಯಾದಿ ಹಲವಾರು ಫೀಚರ್​ಗಳನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಇತ್ತೀಚೆಗೆ ಸೇರಿಸಿತ್ತು. ಇದೀಗ ಕ್ರೆಡಿಟ್ ಕಾರ್ಡ್​ಗಳಲ್ಲಿ ಸಿಗುವ ರೀತಿಯಲ್ಲಿ ಯುಪಿಐ ಪಾವತಿಯನ್ನೂ ಇಎಂಐಗಳಾಗಿ ವಿಭಜಿಸುವ ಒಂದು ಅವಕಾಶ ನೀಡಲು ಎನ್​ಪಿಸಿಐ ಯೋಜಿಸುತ್ತಿದೆ.

ಈ ರೀತಿ ಯುಪಿಐ ಪೇಮೆಂಟ್ ಅನ್ನು ಸ್ಪ್ಲಿಟ್ ಮಾಡುವ ಫೀಚರ್ ಇನ್ನೂ ಪ್ರಸ್ತಾಪದ ಹಂತದಲ್ಲಿದ್ದು, ಇದು ಜಾರಿಯಾದರೆ, ಪೇಟಿಎಂ, ಫೋನ್ ಪೇ, ಕ್ರೆಡ್ ಇತ್ಯಾದಿ ಫಿನ್​ಟೆಕ್ ಪ್ಲಾಟ್​ಫಾರ್ಮ್​ಗಳು ಯುಪಿಐ ಪೇಮೆಂಟ್​ನಲ್ಲಿ ಇಎಂಐ ಆಪ್ಷನ್ಸ್ ಒದಗಿಸಬಹುದು.

ಇದನ್ನೂ ಓದಿ: ಅಮೆರಿಕದ್ದೂ ಬೇಡ ರಷ್ಯದ್ದೂ ಬೇಡ, ನಮ್ಮದೇ ಯುದ್ಧವಿಮಾನ ತಯಾರಿಸೋಣ: ಕೋಟ ಹರಿನಾರಾಯಣ ಕಿವಿಮಾತು

ಗ್ರಾಹಕರು ಯುಪಿಐ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುವ ಸಂದರ್ಭದಲ್ಲೇ ಇಎಂಐ ಅವಕಾಶ ನೀಡಲಾಗುತ್ತದೆ. ಪಿಒಎಸ್ ಮೆಷಿನ್​ನಲ್ಲಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವಾಗ ಪೇಮೆಂಟ್ ಸ್ಪ್ಲಿಟ್ ಮಾಡುವ ರೀತಿಯಲ್ಲಿ ಯುಪಿಐನಲ್ಲೂ ಅಳವಡಿಸಲಾಗಬಹುದು.

ಇಎಂಐ ಫೀಚರ್​ನಿಂದ ಬ್ಯಾಂಕು ಹಾಗೂ ಫಿನ್​ಟೆಕ್​ಗಳಿಗೂ ಲಾಭದ ಅವಕಾಶ

ಇಎಂಐ ಆಪ್ಷನ್​ನಲ್ಲಿ ಶೇ. 1.5ರಷ್ಟು ಇಂಟರ್​ಮಿಟೆಂಟ್ ಫೀ ಹಾಕಲು ಎನ್​ಪಿಸಿಐ ಯೋಜಿಸಿದೆ. ಇದು ಫಿನ್​ಟೆಕ್ ಅ್ಯಪ್​ಗಳು ಹಾಗೂ ಬ್ಯಾಂಕುಗಳಿಗೆ ಆದಾಯ ಗಳಿಸಲು ಒಳ್ಳೆಯ ಮಾರ್ಗವೆನಿಸಲಿದೆ. ಯುಪಿಐನಲ್ಲಿ ಹೆಚ್ಚಿನ ವಹಿವಾಟುಗಳಿಂದ ಯಾರಿಗೂ ಸದ್ಯಕ್ಕೆ ಲಾಭ ಸಿಗುತ್ತಿಲ್ಲ. ಸ್ಪ್ಲಿಟ್ ಪೇಮೆಂಟ್​ನಲ್ಲಿ ವಿಧಿಸುವ ಇಂಟರ್​ಮಿಟೆಂಟ್ ಫೀ ಒಂದು ಆದಾಯ ಮೂಲ ಸೃಷ್ಟಿಸಬಹುದು.

ಇದನ್ನೂ ಓದಿ: ನೀರಲ್ಲಿ ಹೋಮ ಮಾಡಿದಂತಾಯ್ತು ಅಮೆರಿಕದ 19,000 ಕೋಟಿ ರೂ ಮೆಗಾ ಸೋಲಾರ್ ಪ್ರಾಜೆಕ್ಟ್

ಈಗಾಗಲೇ ವಿವಿಧ ಬ್ಯಾಂಕುಗಳು ಪೇಟಿಎಂ, ನವಿಯಂತಹ ಫಿನ್​ಟೆಕ್ ಕಂಪನಿಗಳ ಜೊತೆ ಟೈಯಪ್ ಮಾಡಿಕೊಂಡು ಬಳಕೆದಾರರಿಗೆ ಕ್ರೆಡಿಟ್ ಲೈನ್ ಆಫರ್ ಮಾಡುತ್ತಿವೆ. ಇಎಂಐ ವಿಚಾರದಲ್ಲೂ ಇದೇ ಬೆಳವಣಿಗೆ ಆಗಬಹುದು.

ಈ ಇಎಂಐ ಫೀಚರ್ ದೊಡ್ಡ ಪ್ರಮಾಣದ ಪೇಮೆಂಟ್​ಗೆ ಅನುಕೂಲವಾಗಲಿದೆ. ದೊಡ್ಡ ಪೇಮೆಂಟ್​ಗಳಿಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರು ಯುಪಿಐನಲ್ಲೇ ಪೇಮೆಂಟ್ ಮಾಡಬಹುದು. ಇದರಿಂದ ಯುಪಿಐ ಬಳಕೆ ಮತ್ತಷ್ಟು ಹೆಚ್ಚಲಿದೆ. ಹೆಚ್ಚಿನ ಮೊತ್ತದ ಪೇಮೆಂಟ್​ನಲ್ಲೂ ಯುಪಿಐ ಮೇಲುಗೈ ಸಾಧಿಸಲು ಸಾಧ್ಯವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us