AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ivanpah Project: ನೀರಲ್ಲಿ ಹೋಮ ಮಾಡಿದಂತಾಯ್ತು ಅಮೆರಿಕದ 19,000 ಕೋಟಿ ರೂ ಮೆಗಾ ಸೋಲಾರ್ ಪ್ರಾಜೆಕ್ಟ್

US wasted huge money for solar facility with obsolete tech: ಅಮೆರಿಕದ ಕ್ಯಾಲಿಫೋರ್ನಿಯಾದ ಬರಡುನೆಲದಲ್ಲಿ 2.2 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬೃಹತ್ ಸೋಲಾರ್ ಪವರ್ ಘಟಕ ನಿರ್ಮಿಸಲಾಗಿತ್ತು. 10 ವರ್ಷದಲ್ಲಿ ಇದು ಈಗ ಮುಚ್ಚುವ ಸ್ಥಿತಿಗೆ ಬಂದಿದೆ. 2014ರಿಂದ ಚಾಲನೆಯಲ್ಲಿರುವ ಈ ಘಟಕದಿಂದ ನಿರೀಕ್ಷಿತ ರೀತಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಹೀಗಾಗಿ, ಮುಚ್ಚಲಾಗುತ್ತಿದೆ. ಈ ಬಗ್ಗೆ ಒಂದು ವರದಿ.

Ivanpah Project: ನೀರಲ್ಲಿ ಹೋಮ ಮಾಡಿದಂತಾಯ್ತು ಅಮೆರಿಕದ 19,000 ಕೋಟಿ ರೂ ಮೆಗಾ ಸೋಲಾರ್ ಪ್ರಾಜೆಕ್ಟ್
ಇವಾನ್​ಪಾ ಪ್ರಾಜೆಕ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 02, 2025 | 2:30 PM

Share

ನವದೆಹಲಿ, ಅಕ್ಟೋಬರ್ 2: ಹತ್ತು ವರ್ಷದ ಹಿಂದೆ ಇಡೀ ವಿಶ್ವವೇ ಬೆರಗುಗೊಳಿಸುವ ರೀತಿಯಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾಗಿತ್ತು ಇವಾನ್​ಪಾಹ್ ಪ್ರಾಜೆಕ್ಟ್ (Ivanpah solar facility). ಇಡೀ ರಾಜ್ಯದ ವಿದ್ಯುತ್ ಅಗತ್ಯಗಳಿಗೆ ಇದೊಂದೇ ಪರಿಹಾರ ಕೊಡಬಲ್ಲುದು. ಬೇರೆ ರಾಜ್ಯಗಳಿಗೂ ಇದು ಮಾದರಿಯಾಗಬಲ್ಲುದು ಎಂದೇ ಎಲ್ಲರೂ ಭಾವಿಸಿದ್ದರು. 2.2 ಬಿಲಿಯನ್ ಡಾಲರ್ (ಸುಮಾರು 19,500 ಕೋಟಿ ರೂ) ವೆಚ್ಚದಲ್ಲಿ ತಯಾರಾಗಿದ್ದ ಈ ಸೌರ ಘಟಕ ಇದೀಗ ಮುಚ್ಚುತ್ತಿದೆ.

ಅಪಾರ ನಿರೀಕ್ಷೆಗಳೊಂದಿಗೆ ತಯಾರಾಗಿದ್ದ ಈ ಸೌರ ವಿದ್ಯುತ್ ಘಟಕದಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿರಲಿಲ್ಲ. ಅದರ ನಿರ್ಮಾಣ ಆರಂಭವಾದಾಗ ಹೊಸ ಟೆಕ್ನಾಲಜಿ. ಆದರೆ, ಅದಾದ ನಂತರ ಹೊಸ ಹೊಸ ಸೌರ ತಂತ್ರಜ್ಞಾನಗಳು ಆಗಮಿಸಿ, ಕ್ಯಾಲಿಫೋರ್ನಿಯಾ ಪ್ರಾಜೆಕ್ಟ್ ನಿರುಪಯುಕ್ತ ಎನಿಸಿಹೋಗಿತ್ತು. ಹೀಗಾಗಿ, ಇದನ್ನು ನಿಲ್ಲಿಸಲು ಅಮೆರಿಕ ಸರ್ಕಾರ ತೀರ್ಮಾನಿಸಿದೆ. 2026ಕ್ಕೆ ಪ್ರಾಜೆಕ್ಟ್​ಗೆ ತಿಲಾಂಜಲಿ ಹಾಡಲಾಗುತ್ತದೆ.

ಇದನ್ನೂ ಓದಿ: ಇದು ಭಾರತದ ವಾಟ್ಸಾಪ್; ಅರಟ್ಟೈನಲ್ಲಿದೆ ವಾಟ್ಸಾಪ್​ನಲ್ಲಿ ಇಲ್ಲದ ಒಂದು ಸ್ಮಾರ್ಟ್ ಫೀಚರ್

ಹೀಲಿಯೋಸ್ಟಾಟ್ಸ್ ಎನ್ನುವ ಕನ್ನಡಿಗಳನ್ನು ಒಳಗೊಂಡ ಅದ್ಧೂರಿ ತಂತ್ರಜ್ಞಾನ

ಕ್ಯಾಲಿಫೋರ್ನಿಯಾದ ಬೃಹತ್ ಮೊಜವೆ ಮರಳುಗಾಡಿನಲ್ಲಿ ಇವಾನ್​ಪಹ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯ ನಿರ್ಮಾಣ 2011ರಲ್ಲಿ ಆರಂಭವಾಯಿತು. 2014ರಲ್ಲಿ ಕಾಮಗಾರಿ ಮುಕ್ತಾಯಗೊಂಡು ವಿದ್ಯುತ್ ತಯಾರಿ ಆರಂಭಗೊಂಡಿತು. ಈ ಘಟಕದಲ್ಲಿ 459 ಅಡಿ ಎತ್ತರ ಇರುವ ಮೂರು ದೈತ್ಯ ಟವರ್​ಗಳ ನಿರ್ಮಾಣ ಮಾಡಲಾಯಿತು. ಹೀಲಿಯೋಸ್ಟಾಟ್ಸ್ (Heliostats) ಎಂದು ಕರೆಯಲಾಗುವ ಕಂಪ್ಯೂಟರ್ ನಿಯಂತ್ರಿತ ಕನ್ನಡಿಗಳನ್ನು (computer controlled mirrors) ಸಾವಿರಾರು ಸಂಖ್ಯೆಯಲ್ಲಿ ನಿರ್ಮಿಸಲಾಯಿತು. ಇವುಗಳನ್ನು ನಿರ್ಮಿಸಲು 2.2 ಬಿಲಿಯನ್ ಡಾಲರ್ ವೆಚ್ಚವಾಗಿತ್ತು. ಅಂದರೆ, ಸುಮಾರು 19,000 ಕೋಟಿ ರೂ ವೆಚ್ಚದಲ್ಲಿ ಪ್ರಾಜೆಕ್ಟ್ ಪೂರ್ಣಗೊಂಡಿತು.

ಹೀಲಿಯೋಸ್ಟಾಟ್ಸ್ ತಂತ್ರಜ್ಞಾನ ಅಂದಿನ ಕಾಲಘಟ್ಟಕ್ಕೆ ಅದ್ಭುತ ಎನಿಸಿತ್ತು. ಈ ಕನ್ನಡಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ಟವರ್​ಗಳ ತುದಿಯಲ್ಲಿ ಒಂದು ವಿಶೇಷ ರಿಸೀವರ್ ಇರಿಸಲಾಗಿರುತ್ತದೆ. ಹೀಲಿಯೋಸ್ಟಾಟ್ಸ್ ಮೂಲಕ ಸೂರ್ಯನ ಬೆಳಕು 1,000 ಡಿಗ್ರಿ ಉಷ್ಣಾಂಶದ ಶಕ್ತಿಯೊಂದಿಗೆ ಟವರ್ ತುದಿಯ ಸಾಧನ ರವಾನೆಯಾಗುತ್ತದೆ. ಆ ಸಾಧನದಲ್ಲಿರುವ ದ್ರವ ಬಿಸಿಯಾಗುತ್ತದೆ. ಇದರಿಂದ ಹವೆ ಸೃಷ್ಟಿಯಾಗಿ ಸ್ಟೀಮ್ ಟರ್ಬೈನ್ ನಿರ್ಮಾಣವಾಗುತ್ತದೆ. ಬಹಳ ಸಂಕೀರ್ಣ ಎನಿಸುವ ವ್ಯವಸ್ಥೆ ಎನಿಸಿದರೂ ಅಂದಿನ ಕಾಲಕ್ಕೆ ಬಹಳ ಇನ್ನೋವೇಟಿವ್ ಟೆಕ್ನಾಲಜಿ ಎಂದು ಪರಿಗಣಿಸಲಾಗಿತ್ತು.

ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತರು ಇವರು; ರೋಷನಿಗೆ 3ನೇ ಸ್ಥಾನ; ಬೆಂಗಳೂರಿಗೂ 3ನೇ ಸ್ಥಾನ

ಸುಮಾರು ಆರೇಳು ಚದರ ಕಿಮೀ ವಿಸ್ತೀರ್ಣದಲ್ಲಿ ಮೂರು ಬೃಹತ್ ಟವರ್​ಗಳು ಹಾಗೂ 1.74 ಲಕ್ಷ ಹೀಲಿಯೋಸ್ಟಾಟ್​ಗಳನ್ನು ನಿರ್ಮಿಸಲಾಗಿತ್ತು. ಕ್ಯಾಲಿಫೋರ್ನಿಯಾದ ವಿದ್ಯುತ್ ಬೇಡಿಕೆ ಪೂರೈಸಬಹುದು ಎಂದು ನಂಬಲಾಗಿತ್ತು. ಆದರೆ, ವಾಸ್ತವದಲ್ಲಿ ಇದರಿಂದ ವಿದ್ಯುತ್ ತಯಾರಿಕೆ ಆಗುತ್ತಿರುವುದು ತೀರಾ ಕಡಿಮೆ. ಈ ಪ್ರಾಜೆಕ್ಟ್ ಮುಂದುವರಿಸುವುದು ನಿರರ್ಥಕ ಎಂದು ಸರ್ಕಾರ ಭಾವಿಸಿದೆ. ಹೀಗಾಗಿ, ಯೋಜನೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಸೋಲಾರ್ ವಿದ್ಯುತ್ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿವೆ. ಫೋಟೋವೋಲ್ಟಾಯಿಕ್ ಟೆಕ್ನಾಲಜಿ ಬಂದು ಸಂಚಲವನ್ನೇ ಸೃಷ್ಟಿಸಿವೆ. ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಸೋಲಾರ್ ಪವರ್ ಸೃಷ್ಟಿಸಲು ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ