AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಅತ್ಯಂತ ಶ್ರೀಮಂತರು ಇವರು; ರೋಷನಿಗೆ 3ನೇ ಸ್ಥಾನ; ಬೆಂಗಳೂರಿಗೂ 3ನೇ ಸ್ಥಾನ

Hurun India rich list 2025: ಹುರೂನ್ ಇಂಡಿಯಾದ 2025ರ ಸಾಲಿನ ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆಯಾಗಿದೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮಧ್ಯೆ ನಿಕಟ ಪೈಪೋಟಿ ಮುಂದುವರಿದಿದೆ. ಅಂಬಾನಿ ಮೇಲೇರಿದ್ದಾರೆ. ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್​ಗಳಿದ್ದಾರೆ. ಬೆಂಗಳೂರಿಗೆ 3ನೇ ಸ್ಥಾನ ಸಿಕ್ಕಿದೆ. ಎಚ್​ಸಿಎಲ್ ಟೆಕ್ನಾಲಜೀಸ್​ನ ರೋಷನಿ ನಾದರ್ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ್ದಾರೆ.

ಭಾರತದ ಅತ್ಯಂತ ಶ್ರೀಮಂತರು ಇವರು; ರೋಷನಿಗೆ 3ನೇ ಸ್ಥಾನ; ಬೆಂಗಳೂರಿಗೂ 3ನೇ ಸ್ಥಾನ
ಭಾರತದ ಅತ್ಯಂತ ಶ್ರೀಮಂತರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2025 | 11:08 PM

Share

ನವದೆಹಲಿ, ಅಕ್ಟೋಬರ್ 1: ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತೊಮ್ಮೆ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಎಂ3ಎಂ ಇಂಡಿಯಾ ಹಾಗೂ ಹುರೂನ್ ರಿಸರ್ಚ್ ಇನ್ಸ್​ಟಿಟ್ಯೂಟ್ ಜಂಟಿಯಾಗಿ ಬಿಡುಗಡೆ ಮಾಡಿದ 14ನೇ ಆವೃತ್ತಿಯ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ (M3M Hurun India  Rich List 2025) ಮುಕೇಶ್ ಅಂಬಾನಿ ಹಾಗೂ ಕುಟುಂಬದವರು 9.55 ಲಕ್ಷ ಕೋಟಿ ರೂ ನಿವ್ವಳ ಆಸ್ತಿಯೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಹಾಗೂ ಕುಟುಂಬದ ಆಸ್ತಿಮೌಲ್ಯ 8.15 ಲಕ್ಷ ಕೋಟಿ ರೂ ಇದ್ದು, ಅಂಬಾನಿ ಫ್ಯಾಮಿಲಿಗೆ ಸಮೀಪದಲ್ಲೇ ಇದೆ.

ಹುರೂನ್ ಶ್ರೀಮಂತ ಭಾರತೀಯ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಅಚ್ಚರಿಯ ಹೆಸರು ಬಂದಿದೆ. ಎಚ್​ಸಿಎಲ್ ಟೆಕ್ನಾಲಜೀಸ್​ನ ರೋಷನಿ ನಾದರ್ ಮಲ್ಹೋತ್ರಾ ಹಾಗೂ ಕುಟುಂಬವು ಇದೇ ಮೊದಲ ಬಾರಿಗೆ ಟಾಪ್-3 ಸ್ಥಾನ ಪಡೆದಿದೆ. ಈ ಫ್ಯಾಮಿಲಿಯ ಆಸ್ತಿಮೌಲ್ಯ 2.84 ಲಕ್ಷ ಕೋಟಿ ರೂ. ರೋಷನಿ ನಾದರ್ ಇದರೊಂದಿಗೆ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಡಿಎ ಶೇ. 3 ಏರಿಕೆ; 1 ಕೋಟಿ ಉದ್ಯೋಗಿಗಳು, ಪಿಂಚಣಿದಾರರಿಗೆ ಖುಷಿ ಸುದ್ದಿ

ಹುರೂನ್ ಇಂಡಿಯಾ ಶ್ರೀಮಂತರ ಪಟ್ಟಿ 2025ರ ಟಾಪ್-10

  1. ಮುಕೇಶ್ ಅಂಬಾನಿ ಕುಟುಂಬ: 9.55 ಲಕ್ಷ ಕೋಟಿ ರೂ
  2. ಗೌತಮ್ ಅದಾನಿ ಕುಟುಂಬ: 8.14 ಲಕ್ಷ ಕೋಟಿ ರೂ
  3. ರೋಷನಿ ನಾದರ್ ಮಲ್ಹೋತ್ರಾ ಕುಟುಂಬ: 2.84 ಲಕ್ಷ ಕೋಟಿ ರೂ
  4. ಸೈರಸ್ ಪೂನಾವಾಲ ಕುಟುಂಬ: 2.46 ಲಕ್ಷ ಕೋಟಿ ರೂ
  5. ಕುಮಾರಮಂಗಲಂ ಬಿರ್ಲಾ ಕುಟುಂಬ: 2.32 ಲಕ್ಷ ಕೋಟಿ ರೂ
  6. ನೀರಜ್ ಬಜಾಜ್ ಕುಟುಂಬ: 2.32 ಲಕ್ಷ ಕೋಟಿ ರೂ
  7. ದಿಲೀಪ್ ಸಾಂಘವಿ: 2.30 ಲಕ್ಷ ಕೋಟಿ ರೂ
  8. ಅಜೀಮ್ ಪ್ರೇಮ್​ಜಿ ಕುಟುಂಬ: 2.21 ಲಕ್ಷ ಕೋಟಿ ರೂ
  9. ಗೋಪಿಚಂದ್ ಹಿಂದೂಜಾ ಫ್ಯಾಮಿಲಿ: 1.85 ಲಕ್ಷ ಕೋಟಿ ರೂ
  10. ರಾಧಾಕಿಶನ್ ದಮಾನಿ ಕುಟುಂಬ: 1.82 ಲಕ್ಷ ಕೋಟಿ ರೂ

ಪತಂಜಲಿ ಆಯುರ್ವೇದ್ ಸಂಸ್ಥೆಯ ಸಹ-ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರು 43,640 ಕೋಟಿ ರೂನೊಂದಿಗೆ 57ನೇ ಅತಿ ಶ್ರೀಮಂತ ಭಾರತೀಯ ಎನಿಸಿದ್ದಾರೆ. ಮೇಘ ಎಂಜಿನಿಯರಿಂಗ್ ಸಂಸ್ಥೆಯ ಪಿ ಪಿಚಿ ರೆಡ್ಡಿ ಹಾಗೂ ಪಿವಿ ಕೃಷ್ಣ ರೆಡ್ಡಿ ಅವರು ಕ್ರಮವಾಗಿ 60 ಮತ್ತು 62ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಜಿಡಿಪಿ, ಹಣದುಬ್ಬರ ಸ್ಥಿತಿ ಸಕಾರಾತ್ಮಕ; ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಇಲ್ಲಿವೆ ಆರ್​ಬಿಐ ಎಂಪಿಸಿ ನಿರ್ಧಾರಗಳು

ಭಾರತದಲ್ಲಿ ಬಿಲಿಯನೇರ್​ಗಳ ಸಂಖ್ಯೆ 350ಕ್ಕಿಂತಲೂ ಹೆಚ್ಚು

ಒಂದು ಬಿಲಿಯನ್ ಡಾಲರ್​ಗೂ ಅಧಿಕ (ಸುಮಾರು 8,900 ಕೋಟಿ ರೂ) ಆಸ್ತಿಮೌಲ್ಯ ಇರುವ ಶ್ರೀಮಂತರ ಸಂಖ್ಯೆ ಭಾರತದಲ್ಲಿ 350ರ ಗಡಿ ದಾಟಿದೆ. 13 ವರ್ಷಗಳ ಹಿಂದಿನ ಪಟ್ಟಿಗೆ ಹೋಲಿಸಿದರೆ ಭಾರತೀಯ ಬಿಲಿಯನೇರ್​ಗಳ ಸಂಖ್ಯೆ ಆರು ಪಟ್ಟು ಹೆಚ್ಚಿದೆ. ಇವರೆಲ್ಲರ ಸಂಪತ್ತು ಒಟ್ಟು ಸೇರಿಸಿದರೆ 167 ಲಕ್ಷ ಕೋಟಿ ರೂ ಆಗುತ್ತದೆ.

ಪರ್​ಪ್ಲೆಕ್ಸಿಟಿ ಎನ್ನುವ ಎಐ ಕಂಪನಿಯ ಸ್ಥಾಪಕ ಅರವಿಂದ್ ಶ್ರೀನಿವಾಸ್ ಭಾರತದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿದ್ದಾರೆ. 31 ವರ್ಷದ ಇವರ ಆಸ್ತಿ ಮೌಲ್ಯ 21,190 ಕೋಟಿ ರೂ.

ಇನ್ನು, ಹುರೂನ್ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವವರ ಪೈಕಿ ಅತ್ಯಂತ ಕಿರಿಯರೆಂದರೆ ಝೆಪ್ಟೋದ ಕೈವಲ್ಯ ವೋಹ್ರಾ ಹಾಗೂ ಆದಿತ್ ಪಲಿಚ. ಇವರಿಬ್ಬರ ವಯಸ್ಸು ಕ್ರಮವಾಗಿ 22 ಮತ್ತು 23 ವರ್ಷ.

ಇದನ್ನೂ ಓದಿ: ಗೋಲ್ ಲೋನ್​ನಿಂದ ಹಿಡಿದು ಸ್ಪೀಡ್ ಪೋಸ್ಟ್ ದರ ಹೆಚ್ಚಳದವರೆಗೆ, ಅ. 1ರಿಂದ ಬದಲಾಗಲಿರುವ ಹಣಕಾಸು ನಿಯಮಗಳು

ಮುಂಬೈ ಬಿಲಿಯನೇರ್​ಗಳ ನಗರಿ

ಮುಂಬೈ ನಗರದಲ್ಲಿ ಅತಿಹೆಚ್ಚು ಬಿಲಿಯನೇರ್​ಗಳಿದ್ದಾರೆ. ಈ ವಾಣಿಜ್ಯ ನಗರಿಯಲ್ಲಿರುವ ಬಿಲಿಯನೇರ್​ಗಳ ಸಂಖ್ಯೆ 451. ರಾಷ್​ಟ್ರ ರಾಜಧಾನಿ ದೆಹಲಿಯಲ್ಲಿ 223 ಬಿಲಿಯನೇರ್​ಗಳಿದ್ದಾರೆ. ಐಟಿ ನಗರಿ ಹಾಗೂ ಸ್ಟಾರ್ಟಪ್​ಗಳ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಬಿಲಿಯನೇರ್​ಗಳ ಸಂಖ್ಯೆ 116 ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​