ಇದು ಭಾರತದ ವಾಟ್ಸಾಪ್; ಅರಟ್ಟೈನಲ್ಲಿದೆ ವಾಟ್ಸಾಪ್ನಲ್ಲಿ ಇಲ್ಲದ ಒಂದು ಸ್ಮಾರ್ಟ್ ಫೀಚರ್
Zoho Arattai vs WhatsApp: ವಾಟ್ಸಾಪ್ಗೆ ಪರ್ಯಾಯವೆನಿಸಿರುವ ಜೋಹೋ ಅರಟ್ಟೈ ಸದ್ಯ ಭಾರತದಾದ್ಯಂತ ಟ್ರೆಂಡಿಂಗ್ನಲ್ಲಿರುವ ಮೆಸೇಜಿಂಗ್ ಪ್ಲಾಟ್ಫಾರ್ಮ್. ವಾಟ್ಸಾಪ್ನಲ್ಲಿರುವ ಬಹುತೇಕ ಎಲ್ಲ ಪ್ರಮುಖ ಫೀಚರ್ಗಳು ಅರಟ್ಟೈನಲ್ಲಿವೆ. ವಾಟ್ಸಾಪ್ನಲ್ಲಿ ಇಲ್ಲದ ಆ್ಯಂಡ್ರಾಯ್ಡ್ ಟಿವಿ ವರ್ಷನ್ನ ಫೀಚರ್ ಅರಟ್ಟೈನಲ್ಲಿ ಇದೆ ಎನ್ನುವುದು ವಿಶೇಷ. ಈ ಬಗ್ಗೆ ಒಂದು ವರದಿ.

ಬೆಂಗಳೂರು, ಅಕ್ಟೋಬರ್ 1: ಕಳೆದ ಕೆಲ ದಿನಗಳಿಂದ ಜೋಹೋ ಅರಟ್ಟೈ (Zoho Arattai) ಬಹಳ ಸುದ್ದಿಯಲ್ಲಿದೆ. ವಿಶ್ವದ ಅತಿ ಹೆಚ್ಚು ಬಳಕೆಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆದ ವಾಟ್ಸಾಪ್ಗೆ ಭಾರತದಲ್ಲಿ ಸರಿಸಾಟಿಯಾದ ಆ್ಯಪ್ ಎಂದು ಅರಟ್ಟೈಯನ್ನು ಪರಿಗಣಿಸಲಾಗಿದೆ. ಕೇಂದ್ರ ಸಚಿವರೊಬ್ಬರು ಜೋಹೋ ಉತ್ಪನ್ನಗಳನ್ನು ತಮ್ಮ ಕಚೇರಿಗೆ ಅಳವಡಿಸುತ್ತಿರುವುದಾಗಿ ಹೇಳಿದ ಬಳಿಕ ಅರಟ್ಟೈ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಪ್ಲೇಸ್ಟೋರ್ನಲ್ಲಿ ಅತಿಹೆಚ್ಚು ಡೌನ್ಲೋಡ್ ಆದ ಮೆಸೇಜಿಂಗ್ ಆ್ಯಪ್ಗಳಲ್ಲಿ ವಾಟ್ಸಾಪ್ (Whatsapp) ಅನ್ನೂ ಇದು ಮೀರಿಸಿದೆ.
ಜೋಹೋ ಅರಟ್ಟೈ ವಿಶೇಷತೆ ಏನು?
ಇದು ವಾಟ್ಸಾಪ್ನಂತೆ ಒಂದು ಮೆಸೇಜಿಂಗ್ ಪ್ಲಾಟ್ಫಾರ್ಮ್. ವಾಟ್ಸಾಪ್ನ ಬಹುತೇಕ ಎಲ್ಲಾ ಫೀಚರ್ಗಳು ಅರಟ್ಟೈನಲ್ಲಿ ಇವೆ. ಟೆಕ್ಸ್ಟ್ ಮೆಸೇಜ್, ಕಾಲ್, ಫೈಲ್ ಶೇರಿಂಗ್ ಇತ್ಯಾದಿ ಫೀಚರ್ಸ್ ಇವೆ. ವಾಟ್ಸಾಪ್ಗಿಂತ ಕೆಲ ಭಿನ್ನ ಅಂಶಗಳೂ ಅರಟ್ಟೈನಲ್ಲಿ ಇವೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?
ವಾಟ್ಸಾಪ್ನಲ್ಲಿ ಬಳಕೆದಾರರ ದತ್ತಾಂಶವೆಲ್ಲವೂ ವಿದೇಶಗಳಲ್ಲಿರುವ ಸರ್ವರ್ಗಳಲ್ಲಿ. ಭಾರತೀಯರ ದತ್ತಾಂಶ ಸಂಪೂರ್ಣ ಸುರಕ್ಷಿತ ಎಂದು ಹೇಳುವುದು ಕಷ್ಟ. ಆದರೆ, ಅರಟ್ಟೈ ಸಂಪೂರ್ಣ ದೇಶೀಯವಾಗಿ ನಿರ್ಮಿತವಾಗಿರುವ ಪ್ಲಾಟ್ಫಾರ್ಮ್. ಅರಟ್ಟೈ ಮಾತ್ರವಲ್ಲ, ಜೋಹೋದ ಪ್ರತಿಯೊಂದು ಉತ್ಪನ್ನಗಳೂ ಕೂಡ ದೇಶೀಯವಾಗಿ ನಿರ್ಮಿತವಾದವೇ.
ವಾಟ್ಸಾಪ್ನಲ್ಲಿ ಇಲ್ಲದ ಒಂದು ದೊಡ್ಡ ಫೀಚರ್ ಅರಟ್ಟೈನಲ್ಲಿ ಇದೆ. ಅದು ಆಂಡ್ರಾಯ್ಡ್ ಟಿವಿ ಆವೃತ್ತಿಯ ಫೀಚರ್. ಅರಟ್ಟೈ ಆ್ಯಪ್ನ ಆಂಡ್ರಾಯ್ಡ್ ಟಿವಿ (Android TV version) ಆವೃತ್ತಿ ಲಭ್ಯ ಇದೆ. ಟಿವಿಯಲ್ಲಿ ಅರಟ್ಟೈ ಅಕೌಂಟ್ಗೆ ಲಾಗಿನ್ ಆದರೆ ಟಿವಿ ಸ್ಕ್ರೀನ್ನಲ್ಲೇ ಮೆಸೇಜಿಂಗ್ ವೀಕ್ಷಿಸಬಹುದು, ಮಾಡಬಹುದು. ಈ ಫೀಚರ್ ವಾಪ್ಸಾಪ್ನಲ್ಲಿ ಇಲ್ಲ.
ಇದನ್ನೂ ಓದಿ: ಜಿಡಿಪಿ, ಹಣದುಬ್ಬರ ಸ್ಥಿತಿ ಸಕಾರಾತ್ಮಕ; ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಇಲ್ಲಿವೆ ಆರ್ಬಿಐ ಎಂಪಿಸಿ ನಿರ್ಧಾರಗಳು
ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಇತ್ತೀಚೆಗೆ ಕೆಲ ಕುತೂಹಲ ವಿಷಯಗಳನ್ನು ತಿಳಿಸಿದ್ದರು. ಅವರ ಪ್ರಕಾರ ಮೈಕ್ರೋಸಾಫ್ಟ್ಗೆ ಸಂಪೂರ್ಣ ಪರ್ಯಾಯವನ್ನು ಜೋಹೋ ಸಂಸ್ಥೆ ಹೊಂದಿದೆ. ಮೈಕ್ರೋಸಾಫ್ಟ್ನ ಅನೇಕ ಉತ್ಪನ್ನಗಳಿಗೆ ಪರ್ಯಾಯವಾದ ಹಾಗೂ ಅಗ್ಗವಾಗಿರುವ ಉತ್ಪನ್ನಗಳು ಜೋಹೋ ಹೊಂದಿದೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Wed, 1 October 25




