
ಸ್ಟಾಕ್ಹಾಮ್, ಸ್ವೀಡನ್, ಅಕ್ಟೋಬರ್ 13: ಈ ವರ್ಷದ ಸಾಲಿನ ನೊಬೆಲ್ ಪಾರಿತೋಷಕದಲ್ಲಿ ಆರ್ಥಿಕ ವಿಭಾಗದ ಪ್ರಶಸ್ತಿ (Economics Nobel) ಮೂವರಿಗೆ ಸಿಕ್ಕಿದೆ. 2025ರ ನೊಬೆಲ್ ಎಕನಾಮಿಕ್ಸ್ ಪ್ರಶಸ್ತಿಯನ್ನು ಜೋಯಲ್ ಮೋಕಿರ್ (Joel Mokyr), ಫಿಲಿಪ್ ಆಘಿಯಾನ್ (Philippe Aghion) ಮತ್ತು ಪೀಟರ್ ಹೋವಿಟ್ (Peter Howitt) ಅವರು ಗೆದ್ದಿದ್ದಾರೆ. ನೊಬೆಲ್ ಪ್ರಶಸ್ತಿಯನ್ನು (Nobel Prize) ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಸಂಸ್ಥೆ ಈ ವಿಚಾರವನ್ನು ಸೋಮವಾರ ತಿಳಿಸಿದೆ.
ಈ ಬಾರಿಯ ನೊಬೆಲ್ ಎಕನಾಮಿಕ್ಸ್ ಪ್ರಶಸ್ತಿಯ ಮೌಲ್ಯ 11 ಮಿಲಿಯನ್ ಸ್ವೀಡಿಶ್ ಕ್ರೌನ್ಸ್ (ಸುಮಾರು 10 ಕೋಟಿ ರೂ) ಆಗಿದೆ. ಇದರಲ್ಲಿ ಜೋಯಲ್ ಮೋಕಿರ್ ಅವರಿಗೆ ಅರ್ಧ ಮೊತ್ತ ಸಂದಾಯವಾಗುತ್ತದೆ. ಉಳಿದಿಬ್ಬರಾದ ಫಿಲಿಪ್ ಆಘಿಯಾನ್ ಮತ್ತು ಪೀಟರ್ ಹೋವಿಟ್ ಅವರಿಗೆ ಇನ್ನರ್ಧ ಮೊತ್ತವು ಹಂಚಿಕೆ ಆಗಲಿದೆ.
ಇದನ್ನೂ ಓದಿ: ಇಎಫ್ಟಿಎ-ಭಾರತ ವ್ಯಾಪಾರ ಒಪ್ಪಂದ; 100 ಬಿಲಿಯನ್ ಡಾಲರ್ ಹೂಡಿಕೆ, 10 ಲಕ್ಷ ಉದ್ಯೋಗಸೃಷ್ಟಿ
ಈ ಮೂವರು ಆರ್ಥಿಕ ತಜ್ಞರು ನಾವೀನ್ಯತೆ ಆಧಾರಿತ ಆರ್ಥಿಕ ಪ್ರಗತಿಯನ್ನು ವಿವರಿಸಿದ್ದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ತಂತ್ರಜ್ಞಾನ ಪ್ರಗತಿ ಮೂಲಕ ಸುಸ್ಥಿರ ಬೆಳವಣಿಗೆ ಸಾಧಿಸಲು ಬೇಕಾದ ಪೂರ್ವಬಾವಿ ಅಗತ್ಯತೆಗಳೇನು ಎಂಬುದನ್ನು ಜೋಯಲ್ ಮೋಕಿರ್ ಗುರುತಿಸಿದ್ದಾರೆ. ಫಿಲಿಪ್ ಆಘಿಯಾನ್ ಮತ್ತು ಪೀಟರ್ ಹೋವಿಟ್ ಅವರು ಕ್ರಿಯಾತ್ಮಕ ವಿನಾಶ ಅಥವಾ ಕ್ರಿಯೇಟಿವ್ ಡಿಸ್ಟ್ರಕ್ಷನ್ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಹೇಗೆ ಎನ್ನುವ ಥಿಯರಿಯನ್ನು ಮಂಡಿಸಿದ್ದಾರೆ. ಇದಕ್ಕಾಗಿ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಕೊಡಲಾಗಿದೆ.
‘ಸುಸ್ಥಿರ ಬೆಳವಣಿಗೆಯನ್ನು ನಿರ್ಲಕ್ಸಿಸುವಂತಿಲ್ಲ ಎಂಬುದನ್ನು ಈ ನೊಬೆಲ್ ಪುರಸ್ಕೃತರು ತೋರಿಸಿಕೊಟ್ಟಿದ್ದಾರೆ. ಮನುಷ್ಯನ ಇತಿಹಾಸದಲ್ಲಿ ಆರ್ಥಿಕ ಬೆಳವಣಿಗೆಗಿಂತ ನಿಶ್ಚಿಲತೆಯೇ ಹೆಚ್ಚಾಗಿ ಕಂಡು ಬರುತ್ತದೆ. ನಿರಂತರ ಬೆಳವಣಿಗೆಗೆ ಇರುವ ಅಡೆತಡೆಗಳ ಬಗ್ಗೆ ನಮಗೆ ಅರಿವು ಇರಬೇಕು ಎಂಬುದನ್ನು ಈ ಮೂವರ ಕೆಲಸಗಳಿಂದ ತಿಳಿಯಬಹುದು’ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಹೇಳಿಕೆ ನೀಡಿದೆ.
ರಾಯಲ್ ಸ್ವೀಡಿಶ್ ಅಕಾಡೆಮಿ ಎಕ್ಸ್ ಪೋಸ್ಟ್
ಇದನ್ನೂ ಓದಿ: Nobel Prize in Literature 2025: ಹಂಗೇರಿಯನ್ ಲೇಖಕ ಲಾಸ್ಲೊ ಕ್ರಾಸ್ನಹೊರ್ಕೈಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ
ಕಳೆದ ವಾರವಷ್ಟೇ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ ಮತ್ತು ಸಾಹಿತ್ಯ ವಿಭಾಗಗಳಿಗೆ ನೊಬೆಲ್ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಎಕನಾಮಿಕ್ಸ್ ವಿಭಾಗದಲ್ಲಿ ನೀಡಲಾಗುವುದು ಈ ಸಾಲಿನ ಕೊನೆಯ ನೊಬೆಲ್ ಪಾರಿತೋಷಕವಾಗಿರುತ್ತದೆ. ಸ್ವೀಡನ್ ದೇಶದ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Mon, 13 October 25