AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಎಫ್​ಟಿಎ-ಭಾರತ ವ್ಯಾಪಾರ ಒಪ್ಪಂದ; 100 ಬಿಲಿಯನ್ ಡಾಲರ್ ಹೂಡಿಕೆ, 10 ಲಕ್ಷ ಉದ್ಯೋಗಸೃಷ್ಟಿ

India EFTA trade pact: ಯೂರೋಪ್ ಫ್ರೀ ಟ್ರೇಡ್ ಅಸೋಸಿಯೇಶನ್ (ಇಎಫ್​ಟಿಎ) ಗುಂಪಿನ ಜೊತೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷವೇ ಸಹಿ ಹಾಕಲಾಗಿದ್ದರೂ, ಈಗ ಅಕ್ಟೋಬರ್ 1ರಿಂದ ಇದು ಜಾರಿಗೆ ಬಂದಿದೆ. ಸ್ವೀಡನ್, ನಾರ್ವೇ ಸೇರಿದಂತೆ ನಾಲ್ಕು ಮುಂದುವರಿದ ಐರೋಪ್ಯ ದೇಶಗಳೊಂದಿಗೆ ಭಾರತದ ಎಫ್​ಟಿಎ ಇದು.

ಇಎಫ್​ಟಿಎ-ಭಾರತ ವ್ಯಾಪಾರ ಒಪ್ಪಂದ; 100 ಬಿಲಿಯನ್ ಡಾಲರ್ ಹೂಡಿಕೆ, 10 ಲಕ್ಷ ಉದ್ಯೋಗಸೃಷ್ಟಿ
ರಫ್ತು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 12, 2025 | 4:42 PM

Share

ನವದೆಹಲಿ, ಅಕ್ಟೋಬರ್ 12: ಭಾರತ ಮತ್ತು ಇಎಫ್​ಟಿಎ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ (India EFTA trade pact) ಭಾರತಕ್ಕೆ ಹಲವು ವಿಧದಲ್ಲಿ ಲಾಭವಾಗುವ ನಿರೀಕ್ಷೆ ಇದೆ. ಮುಂದಿನ 15 ವರ್ಷದಲ್ಲಿ ಐರೋಪ್ಯ ದೇಶಗಳಿಂದ 100 ಬಿಲಿಯನ್ ಡಾಲರ್ ಹೂಡಿಕೆಗಳು ಭಾರತಕ್ಕೆ ಹರಿದುಬರಬಹುದು. ಹತ್ತು ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಬಹುದು ಎನ್ನಲಾಗಿದೆ. ಭಾರತ ಮತ್ತು ಯೂರೋಪ್ ನಡುವಿನ ಈ ಮುಕ್ತ ವ್ಯಾಪಾರ ಒಪ್ಪಂದಕ್ಕೆ 2024ರ ಮಾರ್ಚ್ 10ರಂದು ಸಹಿಹಾಕಲಾಗಿದೆಯಾದರೂ, 2025ರ ಅಕ್ಟೋಬರ್ 1ರಂದು ಜಾರಿಗೆ ಬಂದಿದೆ.

ಇಎಫ್​ಟಿಎ ಎಂದರೆ ಯೂರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಶನ್. ಐಸ್​ಲ್ಯಾಂಡ್, ಲಿಕ್ಟನ್​ಸ್ಟೇನ್, ನಾರ್ವೇ ಮತ್ತು ಸ್ವಿಟ್ಜರ್​ಲ್ಯಾಂಡ್ ದೇಶಗಳ ಅಂತರಸರ್ಕಾರೀ ಸಂಘಟನೆ ಅದು. ಯೂರೋಪ್​ನ ಈ ನಾಲ್ಕು ಮುಂದುವರಿದ ದೇಶಗಳೊಂದಿಗೆ ಭಾರತ ಮೊದಲ ಬಾರಿಗೆ ಫ್ರೀ ಟ್ರೇಡ್ ಅಗ್ರೀಮೆಂಟ್ ಮಾಡಿಕೊಂಡಿದೆ.

ಇದನ್ನೂ ಓದಿ: ಜಿಡಿಪಿ ಸಾಲ ಅನುಪಾತ 10 ವರ್ಷದಲ್ಲಿ ಶೇ. 81ರಿಂದ 71ಕ್ಕೆ ಇಳಿಕೆ: ಕೇರ್​ಎಡ್ಜ್ ರೇಟಿಂಗ್ಸ್ ವರದಿ

ಭಾರತವು ಈ ನಾಲ್ಕು ಇಎಫ್​ಟಿಎ ದೇಶಗಳಿಗೆ 2024-25ರಲ್ಲಿ ಮಾಡಿದ ರಫ್ತಿನ ಒಟ್ಟು ಮೌಲ್ಯ 72.37 ಮಿಲಿಯನ್ ಡಾಲರ್​ನಷ್ಟಿದೆ. ಇದರಲ್ಲಿ ಅತಿಹೆಚ್ಚು ರಫ್ತಾದ ಸರಕುಗಳೆಂದರೆ ಗೋರಿಕಾಯಿ, ಸಂಸ್ಕರಿಸಿದ ತರಕಾರಿಗಳು, ಬಾಸ್ಮತಿ ಅಕ್ಕಿ, ಬೇಳೆ ಕಾಳುಗಳು, ಹಣ್ಣು, ದ್ರಾಕ್ಷಿ.

ಇಎಫ್​ಟಿಎ ಜೊತೆಗಿನ ಈ ಎಫ್​ಟಿಎಯಿಂದ ಭಾರತಕ್ಕೆ ಲಾಭ ಹೆಚ್ಚಿದೆ. ಭಾರತದ ಶೇ. 92.2 ಸರಕುಗಳಿಗೆ ಟ್ಯಾರಿಫ್ ವಿನಾಯಿತಿ ನೀಡಲಾಗುತ್ತದೆ. ಇಎಫ್​ಟಿಎಗೆ ಭಾರತ ಶೇ. 99.6ರಷ್ಟು ರಫ್ತಿಗೆ ಟ್ಯಾರಿಫ್ ರಿಯಾಯಿತಿ ಸಿಗುತ್ತದೆ. ಸಂಸ್ಕರಿತ ಕೃಷಿ ಉತ್ಪನ್ನಗಳು, ಕೃಷಿಯೇತರ ಉತ್ಪನ್ನಗಳೂ ಇದರಲ್ಲಿ ಸೇರಿವೆ.

ಇದಕ್ಕೆ ಬದಲಾಗಿ ಭಾರತವೂ ಕೂಡ ಇಎಫ್​ಟಿಎ ರಫ್ತುಗಳಿಗೆ ಒಂದಷ್ಟು ಟ್ಯಾರಿಫ್ ರಿಯಾಯಿತಿ ಕೊಟ್ಟಿದೆ. ಇಎಫ್​ಟಿಎನ ಶೇ. 82.7ರಷ್ಟು ಸರಕುಗಳಿಗೆ ಕನ್ಸಿಶನ್ ಕೊಡಲಾಗಿದೆ. ಅಲ್ಲಿನ ಶೇ. 95.3ರಷ್ಟು ರಫ್ತಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ವಿಶ್ವದ ಐದು ಅತಿಪುರಾತನ ಕಂಪನಿಗಳು ಒಂದೇ ದೇಶದಲ್ಲಿ… ಭಾರತದ ಅತಿಹಳೆಯ 10 ಕಂಪನಿಗಳ ಪಟ್ಟಿ

ಭಾರತದಲ್ಲಿ ಬಹಳ ಸೂಕ್ಷ್ಮ ಕ್ಷೇತ್ರಗಳೆಂದು ಪರಿಗಣಿಸಲಾಗಿರುವ ಡೈರಿ, ಸೋಯಾ, ಕಲ್ಲಿದ್ದಲು, ಫಾರ್ಮಾ, ಮೆಡಿಕಲ್ ಡಿವೈಸ್ ಮೊದಲಾದವುಗಳನ್ನು ಈ ಮುಕ್ತ ವ್ಯಾಪಾರದಿಂದ ಹೊರಗಿಡಲಾಗಿದೆ. ಅಂದರೆ, ಇಎಫ್​ಟಿಎಯಿಂದ ರಫ್ತಾಗಿ ಬರುವ ಈ ಮೇಲಿನ ಸರಕುಗಳಿಗೆ ಭಾರತ ಅಧಿಕ ಟ್ಯಾರಿಫ್ ವಿಧಿಸುವುದನ್ನು ಮುಂದುವರಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ