ಗ್ರಾಹಕರ ಕಾರ್ಡ್ ಡೇಟಾ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI)ವು ರುಪೇ ಕಾರ್ಡ್‌ಗಳಿಗೆ ಟೋಕನೈಸೇಷನ್ ವ್ಯವಸ್ಥೆಯನ್ನು ಘೋಷಣೆ ಮಾಡಿದೆ. ಎನ್ಪಿಸಿಐ ಟೋಕನೈಸೇಷನ್ ಸಿಸ್ಟಮ್ (NTS) ವ್ಯಾಪಾರಿಗಳೊಂದಿಗೆ ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಪರ್ಯಾಯವಾಗಿ ಕಾರ್ಡ್ ಟೋಕನೈಸೇಷನ್ ಅನ್ನು ಸಪೋರ್ಟ್ ಮಾಡುತ್ತದೆ ಎಂದು ಅದು ಹೇಳಿದೆ. ಅಲ್ಲದೆ, ಇದು ಗ್ರಾಹಕರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ತಡೆರಹಿತವಾದ ಶಾಪಿಂಗ್ ಅನುಭವವನ್ನು ಒದಗಿಸುತ್ತದೆ. ಆರ್ಬಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸುರಕ್ಷಿತ ವಹಿವಾಟುಗಳಿಗೆ ಸಹಾಯ ಮಾಡಲು ಗ್ರಾಹಕರ ಎಲ್ಲ ಸೂಕ್ಷ್ಮ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡಿದ ಟೋಕನ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.
ಗ್ರಾಹಕರ ವಿವರಗಳನ್ನು ಬಹಿರಂಗಪಡಿಸದೆ ಅಥವಾ ಪಾವತಿ ಮಧ್ಯವರ್ತಿಗಳಿಗೆ ಭದ್ರತೆ ಮತ್ತು ಗೋಪ್ಯತೆಯನ್ನು ಉಲ್ಲಂಘಿಸುವ ಅಥವಾ ಗ್ರಾಹಕರ ಡೇಟಾವನ್ನು ಸಂಗ್ರಹಿಸಲು ಅವಕಾಶ ನೀಡದೆ ಈ ಟೋಕನ್‌ಗಳು ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಅನುಮತಿಸುತ್ತದೆ ಎಂದು ಅದು ಹೇಳಿದೆ.
ಗ್ರಾಹಕರ ಯಾವುದೇ ಸೂಕ್ಷ್ಮ ಮಾಹಿತಿ ಸೋರಿಕೆಯಾಗಲ್ಲ
ಸ್ವಾಧೀನ ಮಾಡಿಕೊಳ್ಳುವ ಬ್ಯಾಂಕ್ಗಳು, ಅಗ್ರಿಗೇಟರ್‌ಗಳು, ವ್ಯಾಪಾರಿಗಳು ಮತ್ತು ಇತರರು NTS ಅನ್ನು ತಮ್ಮಷ್ಟಕ್ಕೆ NPCIಯೊಂದಿಗೆ ಪ್ರಮಾಣೀಕರಿಸಿಕೊಳ್ಳಬಹುದು. ಮತ್ತು ಉಳಿಸಿದ ಎಲ್ಲ ಕಾರ್ಡ್ ಸಂಖ್ಯೆಗಳ ವಿರುದ್ಧ ಟೋಕನ್ ಉಲ್ಲೇಖ ಸಂಖ್ಯೆ ಉಳಿಸಲು ಸಹಾಯ ಮಾಡುವುದಕ್ಕೆ ಟೋಕನ್ ವಿನಂತಿದಾರರ ಪಾತ್ರವನ್ನು ವಹಿಸಬಹುದು.
NPCI ಹೇಳಿರುವಂತೆ, ತಮ್ಮ ರುಪೇ ಗ್ರಾಹಕರು ಆರಂಭಿಸಿದ ವಹಿವಾಟಿನಿಂದ ಭವಿಷ್ಯದ ವ್ಯವಹಾರಗಳಿಗೆ ಟೋಕನ್ ರೆಫರೆನ್ಸ್ ಆನ್ ಫೈಲ್ (TROF) ಅನ್ನು ಬಳಸಿಕೊಳ್ಳುವ ತಮ್ಮ ರುಪೇ ಗ್ರಾಹಕರ ಬೇಸ್ ಅನ್ನು ಈ ವ್ಯಾಪಾರಗಳು ನಿರ್ವಹಿಸಬಹುದು.
ಫೂಲ್-ಪ್ರೂಫ್ ಮತ್ತು ಪಾರದರ್ಶಕ ವ್ಯವಸ್ಥೆಯು ಯಾವುದೇ ಗ್ರಾಹಕ-ಸೂಕ್ಷ್ಮ ಮಾಹಿತಿಯು ಸೋರಿಕೆ ಆಗದಂತೆ ನೋಡಿಕೊಳ್ಳುತ್ತದೆ. ಗ್ರಾಹಕರಿಗೆ ವೇಗವಾಗಿ ಚೆಕ್-ಔಟ್ ಅನುಭವವನ್ನು ಒದಗಿಸುವ ಮೂಲಕ ಪಾವತಿ ಪ್ರಕ್ರಿಯೆಯಲ್ಲಿ ತಿಕ್ಕಾಟವನ್ನು ಕಡಿಮೆ ಮಾಡಲು ಟೋಕನೈಸೇಷನ್ ಸಹಾಯ ಮಾಡುತ್ತದೆ.
ಇದನ್ನೂ ಓದಿ: RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್ಲೈನ್ನಲ್ಲಿ ಸೇವ್ ಆಗಲ್ಲ; ಇಲ್ಲಿದೆ ಆರ್ಬಿಐ ಹೊಸ ನಿಯಮ