ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ನೋಂದಾಯಿತ ಹೂಡಿಕೆದಾರರ ಸಂಖ್ಯೆ ಸೋಮವಾರ (ಅಕ್ಟೋಬರ್ 25, 2021) ಐದು ಕೋಟಿ ದಾಟಿದೆ. ಮೂರು ಕೋಟಿ ನೋಂದಾಯಿತ ಹೂಡಿಕೆದಾರರಿಂದ ನಾಲ್ಕು ಕೋಟಿ ನೋಂದಾಯಿತ ಹೂಡಿಕೆದಾರರಿಗೆ ಪ್ರಯಾಣವು ಸುಮಾರು 15 ತಿಂಗಳನ್ನು ತೆಗೆದುಕೊಂಡರೆ, ಮುಂದಿನ ಒಂದು ಕೋಟಿ ಹೂಡಿಕೆದಾರರ ನೋಂದಣಿ ಏಳು ತಿಂಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿತು ಎಂದು ಪ್ರಮುಖ ಷೇರುಪೇಟೆ ಹೇಳಿಕೆಯಲ್ಲಿ ತಿಳಿಸಿದೆ. ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲಾದ ಯೂನಿಕ್ (ವಿಶಿಷ್ಟ) ಕ್ಲೈಂಟ್ ಕೋಡ್ಗಳ ಒಟ್ಟು ಸಂಖ್ಯೆ 8.86 ಕೋಟಿ (ಕ್ಲೈಂಟ್ಗಳು ಒಂದಕ್ಕಿಂತ ಹೆಚ್ಚು ಟ್ರೇಡಿಂಗ್ ಸದಸ್ಯರೊಂದಿಗೆ ನೋಂದಾಯಿಸಿಕೊಳ್ಳಬಹುದು). “ಇಂದು ಸಾಧಿಸಿದ ಮೈಲುಗಲ್ಲು ಸರ್ಕಾರಗಳು, ನಿಯಂತ್ರಕರು ಮತ್ತು ಎಲ್ಲ ಪಾಲುದಾರ ಉತ್ಪನ್ನಗಳ ಗುಚ್ಛ, ಸರಳೀಕೃತ ಕ್ಲೈಂಟ್ ಆನ್ಬೋರ್ಡಿಂಗ್ ಪ್ರಕ್ರಿಯೆಗಳು, ಹೂಡಿಕೆದಾರರ ಶಿಕ್ಷಣ ಮತ್ತು ಜಾಗೃತಿಗಾಗಿ ಮಾಡಿದ ಪ್ರಯತ್ನಗಳ ಫಲವಾಗಿದೆ,” ಎಂದು ಎನ್ಎಸ್ಇ ಎಂಡಿ ಮತ್ತು ಸಿಇಒ ವಿಕ್ರಮ್ ಲಿಮಯೆ ಹೇಳಿದ್ದಾರೆ.
“ಎಲ್ಲ ಪಾಲುದಾರರ ಕೇಂದ್ರೀಕೃತ ಪ್ರಯತ್ನಗಳಿಂದ ಖಚಿತವಾಗಿದೆ; ನಾವು ಮುಂದೆ ಈ ಸಂಖ್ಯೆಯನ್ನು ಹೆಚ್ಚಿಸುವುದನ್ನು ನೋಡಬೇಕು ಮತ್ತು ಮುಂದಿನ 3-4 ವರ್ಷಗಳಲ್ಲಿ 10 ಕೋಟಿ ಯೂನಿಕ್ ಹೂಡಿಕೆದಾರರ ಮೈಲುಗಲ್ಲನ್ನು ಮುಟ್ಟಬೇಕು,” ಎಂದು ಅವರು ಹೇಳಿದ್ದಾರೆ. ಎರಡು ಡೆಪಾಸಿಟರಿಗಳೊಂದಿಗೆ ಹೊಂದಿರುವ ದೇಶದ ಒಟ್ಟು ಡಿಮ್ಯಾಟ್ ಖಾತೆಗಳು – CDSL ಮತ್ತು NSDL- ಸುಮಾರು 7.02 ಕೋಟಿಯಷ್ಟಿದೆ. ಇದರಲ್ಲಿ ಯೂನಿಕ್ PAN ಹೊಂದಿರುವ ಒಬ್ಬ ಹೂಡಿಕೆದಾರ ಹೊಂದಿರುವ ಬಹು ಡಿಮ್ಯಾಟ್ ಖಾತೆಗಳು ಸೇರಿವೆ. ಒಬ್ಬ ಹೂಡಿಕೆದಾರ ಒಂದಕ್ಕಿಂತ ಹೆಚ್ಚು ಡಿಮ್ಯಾಟ್ ಖಾತೆ ಅಥವಾ ವ್ಯಾಪಾರ ಖಾತೆಯನ್ನು ಹೊಂದಿರಬಹುದು. ಮತ್ತು ಬೇರೆ ಬೇರೆ ಡೆಪಾಸಿಟರಿಯಲ್ಲಿ ಭಾಗವಹಿಸುವವರು ಹಾಗೂ ಒಂದೇ ಪ್ಯಾನ್ಗೆ ಜೋಡಣೆ ಆಗಿರುವ ವ್ಯಾಪಾರ ಸದಸ್ಯರನ್ನು ಹೊಂದಬಹುದು.
NSEನಲ್ಲಿ ಹೊಸ ಹೂಡಿಕೆದಾರರ ನೋಂದಣಿಗಳಲ್ಲಿ ಉತ್ತರ ಭಾರತದ ರಾಜ್ಯಗಳು ಶೇಕಡಾ 36ರಷ್ಟು ಕೊಡುಗೆ ನೀಡಿವೆ. ಪಶ್ಚಿಮದ ರಾಜ್ಯಗಳದು ಶೇಕಡಾ 31ರಷ್ಟಿದ್ದರೆ, ದಕ್ಷಿಣ ಮತ್ತು ಪೂರ್ವ ರಾಜ್ಯಗಳು ಕ್ರಮವಾಗಿ ಶೇ 20 ಮತ್ತು ಶೇ 13ರಷ್ಟು ಕೊಡುಗೆ ಇದೆ. ರಾಜ್ಯವಾರು ನೋಡಿದರೆ ಮಹಾರಾಷ್ಟ್ರವು ಶೇ 17ರಷ್ಟು ಕೊಡುಗೆ ನೀಡಿದೆ. ಉತ್ತರ ಪ್ರದೇಶವು ಶೇ 10ರಷ್ಟು ಮತ್ತು ಗುಜರಾತ್ ಶೇ 7ರಷ್ಟು ಹೊಸ ಹೂಡಿಕೆದಾರರ ನೋಂದಣಿ ನೀಡಿದೆ. ಟಾಪ್ 10 ರಾಜ್ಯಗಳು ಹೊಸ ಹೂಡಿಕೆದಾರರ ನೋಂದಣಿಗಳಲ್ಲಿ ಶೇಕಡಾ 71ರಷ್ಟು ಹೊಂದಿವೆ.
ಹೂಡಿಕೆದಾರರ ನೋಂದಣಿಯಲ್ಲಿನ ಬೆಳವಣಿಗೆಯು ಹೆಚ್ಚಾಗಿ ಮೆಟ್ರೋಯೇತರ ನಗರಗಳಿಂದ ಬಂದಿದೆ. ಅಗ್ರ 50 ನಗರಗಳ ಆಚೆಗಿನ ನಗರಗಳು ಹೊಸ ಹೂಡಿಕೆದಾರರ ನೋಂದಣಿಗಳಲ್ಲಿ ಶೇ 57 ರಷ್ಟು ಹೊಂದಿವೆ. ಆದರೆ ಅಗ್ರ 100 ನಗರಗಳನ್ನು ಮೀರಿದ ನಗರಗಳು ಶೇ 43ರಷ್ಟು ಕೊಡುಗೆ ನೀಡಿದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ಬೆಳೆಯುತ್ತಿರುವ ಆಸಕ್ತಿಯು ಮಹಾನಗರಗಳಿಗೆ ಮತ್ತು ಕೆಲವು ಟಯರ್-I ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಸೂಚಿಸುತ್ತದೆ.
ಇದನ್ನೂ ಓದಿ: Stock Market Expert Tips: ಷೇರು ಮಾರ್ಕೆಟ್ನಲ್ಲಿ ಬದಲಾವಣೆ ಗುರುತಿಸಿ ಲಾಭ ಮಾಡೋದು ಹೇಗೆ ಅನ್ನೋದನ್ನು ನಿತಿನ್ ಹೇಳ್ತಾರೆ