ನವದೆಹಲಿ, ಡಿಸೆಂಬರ್ 12: ವಿಶೇಷ ಹೂಡಿಕೆ ಸಂಸ್ಥೆ ಒಮಿಡ್ಯಾರ್ ನೆಟ್ವರ್ಕ್ ಇಂಡಿಯಾ (Odidyar Network India) ಭಾರತದ ಮಾರುಕಟ್ಟೆಯಿಂದ ಹೊರಬೀಳಲು ನಿರ್ಧರಿಸಿದೆ. 2024ರ ಅಂತ್ಯದೊಳಗೆ ಭಾರತದಿಂದ ಹೂಡಿಕೆಗಳನ್ನು ಸಂಪೂರ್ಣ ಹೊರತೆಗೆಯಲಿದೆ. ಈ ವಿಚಾರವನ್ನು ಒಮಿಡ್ಯಾರ್ ಗ್ರೂಪ್ ತನ್ನ ಬ್ಲಾಗ್ ಪೋಸ್ಟ್ವೊಂದರಲ್ಲಿ ಬರೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಒಮಿಡ್ಯಾರ್ ನೆಟ್ವರ್ಕ್ನ 14 ವರ್ಷಗಳ ಕಾರ್ಯಾಚರಣೆ ಅಂತ್ಯಗೊಂಡಂತಾಗುತ್ತದೆ. ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಸಾಕಷ್ಟು ಪರಿವರ್ತನೆಗೆ ಅನುವು ಮಾಡುವಂತಹ ಹೂಡಿಕೆಗಳನ್ನು ಮಾಡಿದ್ದೇವೆ ಎಂದು ಒಮಿಡ್ಯಾರ್ ಸಂಸ್ಥೆ ತೃಪ್ತಿ ವ್ಯಕ್ತಪಡಿಸಿದೆ.
ಒಮಿಡ್ಯಾರ್ ನೆಟ್ವರ್ಕ್ನ ಭಾಗವಾಗಿರುವ ಓಮಿಡ್ಯಾರ್ ನೆಟ್ವರ್ಕ್ ಇಂಡಿಯಾ ಸಂಸ್ಥೆ ಡುಯಲ್ ಚೆಕ್ಬುಕ್ ಹೂಡಿಕೆ ವಿಧಾನವನ್ನು (dual cheque book investing model) ಅನುಸರಿಸುತ್ತದೆ. ಡುಯಲ್ ಚೆಕ್ಬುಕ್ ಮಾಡೆಲ್ ಅಂದರೆ, ಎರಡು ಮಾದರಿಯ ಹೂಡಿಕೆಗಳನ್ನು ಅನುಸರಿಸುವುದು. ಒಂದು ರೀತಿಯಲ್ಲಿ, ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಕಮರ್ಷಿಯಲ್ ಮತ್ತು ಆರ್ಟ್ ಈ ಎರಡೂ ಮಾದರಿಯ ಸಿನಿಮಾ ಪ್ರೊಡ್ಯೂಸ್ ಮಾಡುವಂತಹ ರೀತಿಯದ್ದು. ಡುಯಲ್ ಚೆಕ್ಬುಕ್ ಇನ್ವೆಸ್ಟ್ಮೆಂಟ್ ಮಾಡಲ್ನಲ್ಲಿ ಮೊದಲನೆಯದು ಎಲ್ಲಾ ಹೂಡಿಕೆ ಸಂಸ್ಥೆಗಳು ಕೈಗೊಳ್ಳುವ ಸಹಜ ಹೂಡಿಕೆ. ಇಲ್ಲಿ ಇಂಪ್ಯಾಕ್ಟ್ ಸೆಕ್ಟರ್ಗಳೆನಿಸಿದ ಸಾಮಾಜಿಕ ಮತ್ತು ಪರಿಸರ ಕ್ಷೇತ್ರದ ಸಂಸ್ಥೆಗಳಿಗೆ ಬಂಡವಾಳ ಕೊಡುವುದು. ಎರಡನೆಯದು, ನಾನ್ ಪ್ರಾಫಿಟ್ ಸಂಸ್ಥೆಗಳಿಗೆ (non profit organization) ಬಂಡವಾಳ ಕೊಡುವುದು. ಈ ಎರಡನೆಯದು ಸಾಮಾಜಿಕವಾಗಿ ಪರಿವರ್ತನೆ ಮಾಡುವಂಥದ್ದು.
ಇದನ್ನೂ ಓದಿ: ಐಫೋನ್ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್ನಿಂದ ಫ್ಯಾಕ್ಟರಿ ಸ್ಥಾಪನೆ
ಒಮಿಡ್ಯಾರ್ ನೆಟ್ವರ್ಕ್ ಸಂಸ್ಥೆ ಇಂಪ್ಯಾಕ್ಟ್ ಸೆಕ್ಟರ್ಗಳಲ್ಲಿ ಹೂಡಿಕೆ ಮಾಡುತ್ತದೆ. ಸಾಮಾಜಿಕ ಮತ್ತು ಪರಿಸರ ವಲಯಗಳನ್ನು ಇಂಪ್ಯಾಕ್ಟ್ ಸೆಕ್ಟರ್ ಎಂದು ಪರಿಗಣಿಸಲಾಗುತ್ತದೆ. ಈ ವಲಯದ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡುವಂತಹ ಉದ್ಯಮಗಳಿಗೆ ಬಂಡವಾಳ ಹಾಕುವುದಕ್ಕೆ ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಎನ್ನುವುದು.
ಭಾರತದಲ್ಲಿ ಈ ರೀತಿಯ ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಕಾರ್ಯಕ್ಕೆ ಸಾಕಷ್ಟು ಹೂಡಿಕೆ ಸಂಸ್ಥೆಗಳು ಕೈಜೋಡಿಸಿವೆ. ಇಂಪ್ಯಾಕ್ಟ್ ಸೆಕ್ಟರ್ಗಳಿಗೆ ಸಾಕಷ್ಟು ಬಂಡವಾಳ ಬರುತ್ತಿದೆ. ಈ ವಲಯಕ್ಕೆ ಪುಷ್ಟಿ ಕೊಡಬೇಕೆನ್ನುವ ತಮ್ಮ ಪ್ರಾಥಮಿಕ ಗುರಿ ಈಡೇರಿದೆ ಎಂದು ಒಮಿಡ್ಯಾರ್ ನೆಟ್ವರ್ಕ್ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ