
ನವದೆಹಲಿ, ಜುಲೈ 31: ಟ್ರಂಪ್ರ ಡೆಡ್ಲೈನ್ನೊಳಗೆ ಅಮೆರಿಕದೊಂದಿಗೆ ಪಾಕಿಸ್ತಾನ ಟ್ರೇಡ್ ಡೀಲ್ ಮಾಡಿಕೊಂಡಿದೆ. ಆಗಸ್ಟ್ 1ರಿಂದ ಬೀಸುತ್ತಿದ್ದ ಟ್ರಂಪ್ ದೊಣ್ಣೆಯಿಂದ ಪಾಕಿಸ್ತಾನ (Pakistan) ಬಚಾವಾಗಿದೆ. ಹೆಚ್ಚಿನ ಟ್ಯಾರಿಫ್ ಬೀಳುವುದನ್ನು ಪಾಕಿಸ್ತಾನ ತಪ್ಪಿಸಿದೆ. ಭಾರತಕ್ಕೆ ಟ್ರಂಪ್ ಶೇ. 25 ಟ್ಯಾರಿಫ್ ಹಾಕುವುದನ್ನು ಕಂಡು ಪಾಕಿಸ್ತಾನ ಮುಗುಳ್ನಗುತ್ತಿದೆ. ಆದರೆ, ಪಾಕಿಸ್ತಾನಕ್ಕೆ ಅಮೆರಿಕ ಎಷ್ಟು ತೆರಿಗೆ ವಿಧಿಸುತ್ತದೆ, ಅಥವಾ ಕಡಿಮೆ ಮಾಡಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ಈ ಟ್ರೇಡ್ ಡೀಲ್ನಲ್ಲಿ ಪಾಕಿಸ್ತಾನದ ತೈಲವನ್ನು ಹೆಕ್ಕಿ ತೆಗೆಯುವ ಯೋಜನೆಯೂ ಸೇರಿದೆ. ಇದು ಪಾಕಿಸ್ತಾನದ ಮೇಲೆ ಅಮೆರಿಕದ ಆಕರ್ಷಣೆ ಹೆಚ್ಚಲು ಕಾರಣವಾ?
‘ಪಾಕಿಸ್ತಾನದ ಜೊತೆ ಈಗಷ್ಟೇ ಒಪ್ಪಂದ ಅಂತಿಮಗೊಳಿಸಿದ್ದೇವೆ. ಪಾಕಿಸ್ತಾನಲ್ಲಿರುವ ಭಾರೀ ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ನೆರವಾಗಲಿದೆ. ಈ ಪಾಲುದಾರಿಕೆಯನ್ನು ಯಾವ ತೈಲ ಕಂಪನಿ ಮುನ್ನಡೆಸಬೇಕೆಂದು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಯಾರಿಗೆ ಗೊತ್ತು, ಒಂದು ದಿನ ಅವರು ಭಾರತಕ್ಕೆ ತೈಲ ಮಾರುವ ದಿನ ಬರಬಹುದು’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Dead Economy: ಭಾರತದ ಸತ್ತ ಆರ್ಥಿಕತೆ ನೆಲಕಚ್ಚಬೇಕು: ಡೊನಾಲ್ಡ್ ಟ್ರಂಪ್ ಹಿಡಿಶಾಪ
ಇದರ ಜೊತೆಗೆ, ಟ್ರಂಪ್ ಅವರ ಕುಹಕದ ಮಾತುಗಳು ಮುಂದುವರಿದಿವೆ. ಬೇರೆ ದೇಶಗಳು ಅಮೆರಿಕವನ್ನು ಸಂತುಷ್ಟಗೊಳಿಸಲು ಬಯಸುತ್ತಿವೆ ಎಂದು ಉದ್ದಟತನದಿಂದ ಹೇಳಿದ್ದಾರೆ.
‘ವೈಟ್ಹೌಸ್ನಲ್ಲಿ ಕೂತು ಟ್ರೇಡ್ ಡೀಲ್ಗಳಲ್ಲಿ ನಾವು ಬ್ಯುಸಿಯಾಗಿಬಿಟ್ಟಿದ್ದೇವೆ. ಹಲವು ದೇಶಗಳ ಮುಖಂಡರ ಜೊತೆ ನಾನು ಮಾತನಾಡಿದ್ದೇನೆ. ಅವರೆಲ್ಲರೂ ಅಮೆರಿಕವನ್ನು ಅತಿಯಾಗಿ ಸಂತುಷ್ಟಿಗೊಳಿಸಲು ಹಾತೊರೆಯುತ್ತಿದ್ದಾರೆ. ಇದೇ ಮಧ್ಯಾಹ್ನ ನಾನು ಸೌತ್ ಕೊರಿಯಾದ ಟ್ರೇಡ್ ನಿಯೋಗವನ್ನು ಭೇಟಿ ಮಾಡುತ್ತಿದ್ದೇನೆ. ಸೌತ್ ಕೊರಿಯಾಗೆ ಸದ್ಯ ಶೇ. 25 ಟ್ಯಾರಿಫ್ ಹಾಕುತ್ತಿದ್ದೇವೆ. ಈ ಟ್ಯಾರಿಫ್ ಅನ್ನು ಖರೀದಿಸುವ ಆಫರ್ ಅವರಿಂದ ಇದೆ. ಏನದು ಆ ಆಫರ್ ಎಂದು ತಿಳಿಯಲು ಕುತೂಹಲ ಹೊಂದಿದ್ದೇನೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇತ್ತೀಚಿನ ಕೆಲ ವರ್ಷಗಳಿಂದ ಪಾಕಿಸ್ತಾನದ ವಿವಿಧೆಡೆ ದೊಡ್ಡ ಪ್ರಮಾಣದ ತೈಲ ಮತ್ತು ಅನಿಲ ನಿಕ್ಷೇಪಗಳಿರುವುದು ಪತ್ತೆಯಾಗಿದೆ. ಸಿಂಧೂ ಜಲಾನಯನ ಭಾಗದಲ್ಲಿ ಭಾರೀ ಪ್ರಮಾಣದ ಹೈಡ್ರೋಕಾರ್ಬನ್ ವಲಯ ಇರಬಹುದು ಎಂಬದು 3ಡಿ ಸೀಸ್ಮಿಕ್ ಮ್ಯಾಪಿಂಗ್ನಿಂದ ಗೊತ್ತಾಗಿದೆ. ಫಾಕಿರ್-1 ಎಂಬಲ್ಲೂ ಹೈಡ್ರೋಕಾರ್ಬನ್ ಇರುವುದು ಪತ್ತೆಯಾಗಿದೆ. ನಾರ್ತ್ ವಜಿರಿಸ್ತಾನ್ನಲ್ಲಿ ತೈಲ ನಿಕ್ಷೇಪಗಳು ಪತ್ತೆಯಾಗಿವೆ.
ಇದನ್ನೂ ಓದಿ: ಆ. 1ರಿಂದ ಭಾರತದ ಮೇಲೆ ಶೇ. 25 ಟ್ಯಾರಿಫ್: ಅಮೆರಿಕ ಅಧ್ಯಕ್ಷ ಘೋಷಣೆ
ಇವುಗಳನ್ನು ಹೆಕ್ಕಿ ತೆಗೆಯಲು ಅಮೆರಿಕ ಆಸಕ್ತವಾಗಿದೆ. ಅಮೆರಿಕನ್ ಕಂಪನಿಗಳಿಗೆ ಇದರ ಗುತ್ತಿಗೆ ಸಿಗಬಹುದು. ಪಾಕಿಸ್ತಾನದಲ್ಲಿ ತೈಲ ಸಿಕ್ಕಿದ್ದೇ ಆದರಲ್ಲಿ ಅದರ ಹೆಚ್ಚಿನ ನಿಯಂತ್ರಣವು ಅಮೆರಿಕನ್ ಕಂಪನಿಗಳ ಕೈಗೆ ಹೋಗುತ್ತದೆ. ಈ ಮೂಲಕ ಅಮೆರಿಕ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ