ನವದೆಹಲಿ, ಜುಲೈ 26: ಖಾಸಗಿ ವಲಯ ಆಕ್ಸಿಸ್ ಬ್ಯಾಂಕ್ ಇದೀಗ ತನ್ನ ಫಿಕ್ಸೆಡ್ ಡೆಪಾಸಿಟ್ (Axis Bank FD Rates) ದರಗಳನ್ನು ಇಳಿಸಿದೆ. 2 ಕೋಟಿ ರೂ ಒಳಗಿನ ವಿವಿಧ ಅವಧಿಯ ಠೇವಣಿಗಳಿಗೆ ಬಡ್ಡಿ ದರಗಳನ್ನು 10 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚೆಗಷ್ಟೇ ಆಕ್ಸಿಸ್ ಬ್ಯಾಂಕ್ ತನ್ನ ನಿಶ್ಚಿತ ಠೇವಣಿಗಳಿಗೆ ಬಡ್ಡಿದರವನ್ನು 10 ಬೇಸಿಸ್ ಅಂಕಗಳಷ್ಟು ಹೆಚ್ಚು ಮಾಡಿತ್ತು. ಈಗ ಮತ್ತೆ ದರ ಪರಿಷ್ಕರಣೆ ಮಾಡಿದೆ. 7 ದಿನಗಳಿಂದ ಹಿಡಿದು 10 ವರ್ಷದವರೆಗಿನ ವಿವಿಧ ಅವಧಿಯ ಠೇವಣಿಗಳಿಗೆ ಇದೀಗ ಬಡ್ಡಿ ದರ ಶೇ. 3.5ರಿಂದ ಶೇ. 7.10ರವರೆಗೂ ಇದೆ. ಇಂದಿನಿಂದಲೇ (ಜುಲೈ 26) ಹೊಸ ದರಗಳು ಚಾಲ್ತಿಗೆ ಬರಲಿವೆ.
13 ತಿಂಗಳಿಂದ ಹಿಡಿದು 2 ವರ್ಷದೊಳಗಿನ ಅವಧಿಯವರೆಗೆ ಗರಿಷ್ಠ ಬಡ್ಡಿ ದರ ಕೊಡಲಾಗುತ್ತದೆ. ಅಂದರೆ ಶೇ. 7.10ರಷ್ಟು ಬಡ್ಡಿ ಸಿಗುತ್ತದೆ. 30 ತಿಂಗಳ ಮೇಲ್ಪಟ್ಟ ಅವಧಿಗೆ ಶೇ. 7ರಷ್ಟು ಬಡ್ಡಿ ಸಿಗುತ್ತದೆ. ಇನ್ನು 2 ಕೋಟಿ ರೂನಿಂದ 2.30 ಕೋಟಿ ರೂವರೆಗಿನ ಠೇವಣಿಯಾದರೆ 12 ತಿಂಳಿಂದ 15 ತಿಂಗಳ ಅವಧಿಯವರೆಗೆ ಶೇ. 7.25ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: PhonePe: ಫೋನ್ಪೇ ಆ್ಯಪ್ನಲ್ಲಿ ಇನ್ಕಮ್ ಟ್ಯಾಕ್ಸ್ ಹೊಸ ಫೀಚರ್; ಇಲಾಖೆ ಪೋರ್ಟಲ್ಗೆ ಹೋಗೋ ಅಗತ್ಯ ಇಲ್ಲ
ಆಕ್ಸಿಸ್ ಬ್ಯಾಂಕ್ನಲ್ಲಿ 5 ಕೋಟಿ ರೂವರೆಗಿನ ಮೊತ್ತವನ್ನು ಎಫ್ಡಿಯಲ್ಲಿ ಇಡಲು ಅವಕಾಶ ಇದೆ. 7 ದಿನಗಳಿಂದ 10 ವರ್ಷಗಳವರೆಗೆ ಠೇವಣಿ ಇಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ