ಈಗ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ಗಳನ್ನು (dual sim) ಇಟ್ಟುಕೊಳ್ಳುವುದು ಬಹಳ ಸಾಮಾನ್ಯವಾಗಿದೆ. ಕಚೇರಿ ಕೆಲಸಕ್ಕೊಂದು, ಖಾಸಗಿ ಬಳಕೆಗೆ ಇನ್ನೊಂದು ನಂಬರ್ ಇಟ್ಟುಕೊಂಡಿರುತ್ತಾರೆ. ಈಗ ಬಹುತೇಕ ಎಲ್ಲಾ ಫೋನ್ಗಳಲ್ಲೂ ಡುಯಲ್ ಸಿಮ್ ಆಯ್ಕೆ ಇರುತ್ತದೆ. ಹೀಗಾಗಿ, ಎರಡು ಸಿಮ್ಗಳ ನಿರ್ವಹಣೆ ಸುಲಭ ಹೌದು. ಹಾಗೆಯೇ, ಸ್ಮಾರ್ಟ್ಫೋನ್ ಜೊತೆಗೆ ಬ್ಯಾಟರಿ ಬ್ಯಾಕಪ್ ಇರುವ ಫೀಚರ್ ಫೋನ್ ಇಟ್ಟುಕೊಳ್ಳುವವರು ಇದ್ದಾರೆ. ಅದೇನೇ ಆದರೂ ಇವತ್ತಿನ ದರಗಳಲ್ಲಿ ಒಂದಕ್ಕಿಂತ ಹೆಚ್ಚು ನಂಬರ್ಗಳನ್ನು ಸಕ್ರಿಯವಾಗಿಟ್ಟುಕೊಳ್ಳುವುದು ತುಸು ದುಬಾರಿ ಆದೀತು. ಇವತ್ತಿನ ಸಂದರ್ಭದಲ್ಲಿ ಇದ್ದುದರಲ್ಲಿ ಅಗ್ಗದ ವಾರ್ಷಿಕ ರೀಚಾರ್ಜ್ ಪ್ಲಾನ್ಗಳ (annual recharge plans) ವಿವರ ಇಲ್ಲಿದೆ.
ಭಾರ್ತಿ ಏರ್ಟೆಲ್ ಸಂಸ್ಥೆಯ 1,799 ರೂನ ರೀಚಾರ್ಜ್ ಪ್ಲಾನ್ನಲ್ಲಿ 365 ದಿನಗಳ ವ್ಯಾಲಿಡಿಟಿ ಇದೆ. 24ಜಿಬಿಯಷ್ಟು 4ಜಿ ಡಾಟಾ ಸಿಗುತ್ತದೆ. ಅನ್ಲಿಮಿಟೆಡ್ ಕರೆ ಸೌಲಭ್ಯ, 3600 ಎಸ್ಸೆಮ್ಮೆಸ್ ಸಿಗುತ್ತದೆ. ಇದರ ಜೊತೆಗೆ ವಿಂಕ್ ಮ್ಯೂಸಿಕ್ ಮತ್ತು ಹೆಲೋ ಟ್ಯೂನ್ಗಳನ್ನು ಪಡೆಯಬಹುದು. ವರ್ಷಕ್ಕೆ 1,799 ರೂ ಎಂದರೆ ತಿಂಗಳಿಗೆ 150 ರೂ ಆಗುತ್ತದೆ.
ಇದನ್ನೂ ಓದಿ: Mobile Number: ನಿಮ್ಮ ನಂಬರ್ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?
ರಿಲಾಯನ್ಸ್ ಜಿಯೋದಲ್ಲಿ ಇರುವ ಅತಿಕಡಿಮೆಯ ವಾರ್ಷಿಕ ರೀಚಾರ್ಜ್ ಪ್ಲಾನ್ 1,599 ರೂನದ್ದು. ಆದರೆ, ಇದು 336 ತಿಂಗಳ ವ್ಯಾಲಿಡಿಟಿಯದ್ದಾಗಿದೆ. ಅಂದರೆ 11 ತಿಂಗಳ ರೀಚಾರ್ಜ್ ಪ್ಲಾನ್ ಇದು. ಇದರಲ್ಲಿ 24 ಜಿಬಿ ಡಾಟಾ ಒಳಗೊಂಡಿರುತ್ತದೆ. ಅನ್ಲಿಮಿಟೆಡ್ ಕರೆ ಮಾಡಬಹುದು. ದಿನಕ್ಕೆ ಗರಿಷ್ಠ 100ರಂತೆ ಒಟ್ಟು 3,600 ಎಸ್ಸೆಮ್ಮೆಸ್ ಲಭ್ಯ ಇದೆ. 5ಜಿ ಸೆಟ್ ಹೊಂದಿರುವವರು ಅನ್ಲಿಮಿಟೆಡ್ ಡಾಟಾ ಬಳಸಬಹುದು. ಇದರಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇವೆಗಳನ್ನು ಪಡೆಯಬಹುದು.
ವೊಡಾಫೋನ್ ಐಡಿಯಾ ಸಂಸ್ಥೆ 365 ದಿನಗಳ ವ್ಯಾಲಿಡಿಟಿ ಹೊಂದಿರುವ 1,799 ರೂ ಪ್ಲಾನ್ ಹೊಂದಿದೆ. 24ಜಿಬಿಯಷ್ಟು 4ಜಿ ಡಾಟಾ, 3600 ಎಸ್ಸೆಮ್ಮೆಸ್, ಅನ್ಲಿಮಿಟೆಡ್ ಕರೆ ಇತ್ಯಾದಿ ಸೌಲಭ್ಯ ಇದೆ. ಇದರ ಜೊತೆಗೆ ವಿಐ ಮೂವೀಸ್ ಮತ್ತು ಟಿವಿ ಸೌಲಭ್ಯವೂ ಸಿಗುತ್ತದೆ.
ಇದನ್ನೂ ಓದಿ: Tech Tips: ತಪ್ಪಿ ಬೇರೆಯವರ ನಂಬರ್ಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್ ಪಡೆಯುವುದು ಹೇಗೆ?
ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ನಲ್ಲಿ ವಾರ್ಷಿಕ ರೀಚಾರ್ಜ್ ಪ್ಲಾನ್ 1,251 ರೂನಿಂದ ಆರಂಭವಾಗುತ್ತದೆ. 365 ದಿನ ವ್ಯಾಲಿಡಿಟಿಯ ಈ ಪ್ಲಾನ್ಲ್ಲಿ ತಿಂಗಳಿಗೆ 0.75ಜಿಬಿ, ಅಂದರೆ, 750 ಎಂಬಿಯಷ್ಟು ಡಾಟಾ ಸಿಗುತ್ತದೆ.
ಗ್ರಾಹಕರು ಈ ಕನಿಷ್ಠ ಮೊತ್ತದ ವಾರ್ಷಿಕ ರೀಚಾರ್ಜ್ ಪ್ಲಾನ್ ಖರೀದಿಸಿ, ಅದರ ಮೇಲೆ ಹೆಚ್ಚು ಡಾಟಾಗೆ ಟಾಪಪ್ ಹಾಕಿಸಿಕೊಳ್ಳಬಹುದು. ಈ ಮೂಲಕ ಅಗತ್ಯ ಇರುವಷ್ಟು ಡಾಟಾ ಬಳಕೆ ಮಾಡಿ ಹಣ ಉಳಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ