ಇನ್ಷೂರೆನ್ಸ್ ಆಗಲೀ ಅಥವಾ ಯಾವುದಾದರೂ ನಿಯಮಿತ ಹೂಡಿಕೆ ಯೋಜನೆಯಾಗಲೀ ಕೆಲವೊಮ್ಮೆ ಕಾರಣಾಂತರಗಳಿಂದ ಹಣ ಪಾವತಿಸಲು ಸಾಧ್ಯವಾಗದೇ ಹೋಗಬಹುದು. ಉದ್ಯೋಗ ನಷ್ಟ, ಅನಾರೋಗ್ಯ ಇತ್ಯಾದಿ ಬೇರೆ ಬೇರೆ ಕಾರಣಕ್ಕೆ ಹೀಗಾಗಬಹುದು. ಎಲ್ಐಸಿಯ ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್ಗಳನ್ನು (LIC Insurance Policy) ನೀವು ನಿರ್ದಿಷ್ಟ ಅವಧಿಯಲ್ಲಿ ಕಟ್ಟದೇ ಹೋದರೆ ಪಾಲಿಸಿ ನಿಷ್ಕ್ರಿಯಗೊಳ್ಳಬಹುದು. ನೀವು ಕೆಲವಾರು ವರ್ಷ ಪ್ರೀಮಿಯಮ್ ಕಟ್ಟಿ ಪಾಲಿಸಿ ಲ್ಯಾಪ್ಸ್ ಆಗಿ ಹೋದರೆ ಅದನ್ನು ಕೈಬಿಟ್ಟುಬಿಟ್ಟರೆ ನಷ್ಟವೇ. ಲ್ಯಾಪ್ಸ್ ಅಥವಾ ನಿಷ್ಕ್ರಿಯಗೊಂಡಿರುವ ನಿಮ್ಮ ಎಲ್ಐಸಿ ಪಾಲಿಸಿಯನ್ನು ಮತ್ತೆ ಚಾಲನೆಗೊಳಿಸಲು ಮಾರ್ಗೋಪಾಯಗಳಿವೆ.
ಸಾಮಾನ್ಯವಾಗಿ ಎಲ್ಐಸಿ ಸಂಸ್ಥೆ ತನ್ನ ಪಾಲಿಸಿದಾರರಿಗೆ ಪ್ರೀಮಿಯಮ್ ಕಟ್ಟಲು ನಿಗದಿತ ದಿನಕ್ಕಿಂತ ಒಂದಷ್ಟು ಹೆಚ್ಚಿನ ಕಾಲಾವಕಾಶ ಕೊಡುತ್ತದೆ. ನಿಮ್ಮ ಪ್ರೀಮಿಯಮ್ ಕಟ್ಟಸಲು ಜೂನ್ 30 ಡೆಡ್ಲೈನ್ ಎಂದಿದ್ದರೂ ಗ್ರೇಸ್ ಪೀರಿಯಡ್ ಆಗಿ 30 ಅಥವಾ 31 ದಿನ ಹೆಚ್ಚುವರಿ ಕಾಲಾವಕಾಶ ಇರುತ್ತದೆ. ಈ ಹೆಚ್ಚುವರಿ ಅವಧಿಯಲ್ಲಿ ನೀವು ಪ್ರೀಮಿಯಮ್ ಕಟ್ಟದೇ ಹೋದಾಗ ಪಾಲಿಸಿ ಲ್ಯಾಪ್ಸ್ ಆಗುತ್ತದೆ.
ಲ್ಯಾಪ್ಸ್ ಆದ ಎಲ್ಐಸಿ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶಗಳಿವೆ. ನಿಮ್ಮ ಎಲ್ಐಸಿ ಪಾಲಿಸಿ ದಾಖಲೆಗಳಲ್ಲಿ ಅದನ್ನು ಬರೆದಿರಲಾಗುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ವಿಧಾನಗಳನ್ನು ನೀವು ಪರಿಶೀಲಿಸಬಹುದು:
ಎಲ್ಐಸಿಯ ಕಸ್ಟಮರ್ ಕೇರ್ ನಂಬರ್, ಇಮೇಲ್ ಮೂಲಕ ಸಂಪರ್ಕಸಬಹುದು. ಅಥವಾ ಯಾವುದಾದರೂ ಎಲ್ಐಸಿ ಕಚೇರಿ ಅಥವಾ ಸರ್ವಿಸ್ ಸೆಂಟರ್ಗೆ ಹೋಗಿ ಮಾತನಾಡಬಹುದು. ಏಜೆಂಟ್ ಮೂಲಕವಾದರೂ ನೀವು ಪಾಲಿಸಿ ರಿವೈವಲ್ ಮಾಡಬಹುದು.
ಎಲ್ಐಸಿ ಕಚೇರಿಯಲ್ಲಿ ನೀವು ರಿವೈವಲ್ ಫಾರ್ಮ್ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: ಪಿಪಿಎಫ್ ಹಣ ಹಿಂಪಡೆಯುವುದು ಹೇಗೆ? ನಿಯಮಗಳು, ದಾಖಲೆ, ಮಾನದಂಡಗಳೇನೇನು? ಇಲ್ಲಿದೆ ವಿವರ
ಬಹಳ ಕಾಲದಿಂದ ಇನ್ಷೂರೆನ್ಸ್ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕಾಗಬಹುದು. ಇದರ ಖರ್ಚು ವೆಚ್ಚವನ್ನು ಪಾಲಿಸಿದಾರರೇ ಭರಿಸಬೇಕಾಗುತ್ತದೆ.
ನೀವು ಎಲ್ಐಸಿ ಪಾಲಿಸಿ ರಿವೈವಲ್ಗೆ ಮನವಿ ಸಲ್ಲಿಸಿದ ಬಳಿಕ ಅವಶ್ಯಕತ ದಾಖಲೆಗಳನ್ನು ಪರಿಶೀಲಿಸಿ, ಎಲ್ಐಸಿ ನಿಮಗೆ ಹೊಸ ಪಾಲಿಸಿ ದಾಖಲೆ ಕೊಡುತ್ತದೆ.
ಇದಾದ ಬಳಿಕ ಮೊದಲಿನಂತೆ ನಿಮ್ಮ ಪಾಲಿಸಿಯಲ್ಲಿ ಪ್ರೀಮಿಯಮ್ ಕಟ್ಟುವುದನ್ನು ಮುಂದುವರಿಸಬಹುದು. ಪಾಲಿಸಿಯ ಯಾವುದೇ ಪ್ರಯೋಜನಗಳಲ್ಲೂ ವ್ಯತ್ಯಯ ಆಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ