
ನಿವೃತ್ತಿ ಎಂದರೆ ದುಡಿಮೆ ನಿಲ್ಲಿಸುವ ಸಮಯ. ಮನುಷ್ಯನ ದೈಹಿಕ ಬಲ ಮತ್ತು ಮನೋಬಲ ಇರುವವರೆಗೂ ದುಡಿಯುತ್ತಿರಬಹುದು. ನಿವೃತ್ತಿಯಷ್ಟರಲ್ಲಿ (retirement) ಮನುಷ್ಯನ ಆರ್ಥಿಕ ಭದ್ರತೆ (financial stability) ಉತ್ತಮವಾಗಿರುವುದು ಅಗತ್ಯ. ದುಡಿಮೆ ಇಲ್ಲದೆಯೇ ಬದುಕುವ ಹಣಕಾಸು ಬಲ ಇರಬೇಕು. ಆದರೆ, ಎಷ್ಟು ಹಣ ಬೇಕು ಎನ್ನುವುದು ಎಲ್ಲರಲ್ಲೂ ಇರುವ ಗೊಂದಲ.
ಇವತ್ತಿನ ಬೆಲೆ ಮಟ್ಟಕ್ಕೆ ಈಗ ನಿವೃತ್ತರಾಗುವವರಿಗೆ ಕನಿಷ್ಠ ಒಂದು ಕೋಟಿಯಾದರೂ ಬೇಕು. ಈ ಒಂದು ಕೋಟಿ ರೂ ಮುಂದಿನ 30 ವರ್ಷದಲ್ಲಿ ಹೊಂದುವ ಮೌಲ್ಯ ಸುಮಾರು 8 ಕೋಟಿ ರೂ ಇರಬಹುದು. ಅಂದರೆ, 30 ವರ್ಷದ ನಂತರ ನಿವೃತ್ತರಾಗುವವರು 8 ಕೋಟಿ ರೂ ಹೊಂದಿದರೆ ಅದು ಇವತ್ತಿನ 1 ಕೋಟಿ ರೂಗೆ ಸಮ. ಬೆಲೆ ಏರಿಕೆ, ತಕ್ಕಮಟ್ಟಿಗಿನ ಜೀವನ ಮಟ್ಟ ಬೇಕೆಂದರೆ ನಿವೃತ್ತಿಯ ವೇಳೆ 10 ಕೋಟಿ ರೂ ಇರುವುದು ಅಗತ್ಯ. ಈ 10 ಕೋಟಿ ರೂ ಸಂಪಾದಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು ಎನ್ನುವ ಲೆಕ್ಕಾಚಾರ ಇಲ್ಲಿದೆ…
ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್ಗಳು; ಏನಿವುಗಳ ವಿಶೇಷತೆ?
ಶೇ. 12ರಷ್ಟು ವಾರ್ಷಿಕ ರಿಟರ್ನ್ ಕೊಡಬಹುದೆಂದು ನಿರೀಕ್ಷಿಸಬಹುದಾದ ಮ್ಯೂಚುವಲ್ ಫಂಡ್ಗಳಲ್ಲಿ ಎಸ್ಐಪಿ ಮಾಡುವುದು ಹೂಡಿಕೆಗೆ ಬೆಸ್ಟ್ ವಿಧಾನ. ನೀವು ತಿಂಗಳಿಗೆ 10,000 ರೂ ಎಸ್ಐಪಿಯಲ್ಲಿ ಹಣ ತೊಡಗಿಸಿದರೆ ಅದು 10 ಕೋಟಿ ರೂ ಆಗಿ ಬೆಳೆಯಲು ಸುಮಾರು 39 ವರ್ಷ ಆಗುತ್ತದೆ.
ಅದೇ ನೀವು ತಿಂಗಳಿಗೆ 50,000 ರೂನಂತೆ ಹೂಡಿಕೆ ಮಾಡಿದರೆ ಅದು 10 ಕೋಟಿ ರೂ ಕಾರ್ಪಸ್ ಆಗಿ ಬೆಳೆಯಲು 25 ವರ್ಷ ಬೇಕಾಗುತ್ತದೆ. ಒಂದು ಲಕ್ಷ ರೂ ಎಸ್ಐಪಿಯಿಂದ 20 ವರ್ಷದಲ್ಲಿ 10 ಕೋಟಿ ರೂ ನಿರ್ಮಿಸಬಹುದು. ನಿಮ್ಮ ದುಡಿಮೆಯ ಅವಧಿ ಎಷ್ಟಿದೆ ನೋಡಿಕೊಂಡು ಅದರ ಪ್ರಕಾರ ಹೂಡಿಕೆ ಮಾಡುತ್ತಾ ಹೋಗಬಹುದು.
ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?
ನೀವು ಇನ್ನೂ 20 ವರ್ಷ ಮಾತ್ರ ದುಡಿಯುತ್ತೀರಿ ಎಂದರೆ ತಿಂಗಳಿಗೆ ಒಂದು ಲಕ್ಷ ರೂ ಅನ್ನು ಎಸ್ಐಪಿಯಲ್ಲಿ ಹಾಕುತ್ತಾ ಹೋಗಬಹುದು. ಆಗ 10 ಕೋಟಿ ರೂ ಮೊತ್ತ ನಿಮ್ಮದಾಗಲು ಸಾಧ್ಯ. ಹೂಡಿಕೆ ಅವಧಿ ಹೆಚ್ಚಿಸಿದಷ್ಟೂ ಹಣದ ಮ್ಯಾಜಿಕ್ ಕೆಲಸ ಮಾಡುತ್ತಾ ಹೋಗುತ್ತದೆ. ಉದಾಹರಣೆಗೆ, ನೀವು ತಿಂಗಳಿಗೆ ಒಂದು ಲಕ್ಷ ರೂ ಎಸ್ಐಪಿ ಮಾಡಿದರೆ 20 ವರ್ಷದಲ್ಲಿ 10 ಕೋಟಿ ರೂ ಆಗುತ್ತದೆ. ಇನ್ನೂ 5 ವರ್ಷ ಹೂಡಿಕೆ ಮುಂದುವರಿಸಿದರೆ ಅದು 17 ಕೋಟಿ ರೂ ಆಗುತ್ತದೆ. ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಿದರೆ 30 ಕೋಟಿ ರೂ ಕಾರ್ಪಸ್ ನಿರ್ಮಾಣ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ