ಪಿಎಂ ಕಿಸಾನ್ ಸ್ಕೀಮ್: 24ನೇ ಕಂತಿನ ಹಣ ಬಿಡುಗಡೆ ದಿನ ಫಿಕ್ಸ್; 9.34 ಕೋಟಿ ರೈತರಿಗೆ ಅ. 30ಕ್ಕೆ ಸಿಗಲಿದೆ ಹಣ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 24ನೇ ಕಂತಿನ ಹಣವನ್ನು ಅಕ್ಟೋಬರ್ 30, ಶುಕ್ರವಾರ ಬಿಡುಗಡೆ ಮಾಡಲಾಗುತ್ತಿದೆ. 9.34 ಕೋಟಿ ರೈತರಿಗೆ 18,700 ಕೋಟಿ ರೂ ಹಣ ಒದಗಿಸಲಾಗುತ್ತಿದೆ. ಪ್ರತೀ ರೈತರಿಗೆ 2,000 ರೂ ಹಣ ನೇರವಾಗಿ ಅವರ ಬ್ಯಾಂಕ್ ಅಕೌಂಟ್​ಗೆ ಜಮೆ ಆಗಲಿದೆ. ಇಕೆವೈಸಿ ಆಗದಿದ್ದರೆ, ಬ್ಯಾಂಕ್ ಅಕೌಂಟ್ ತಪ್ಪಾಗಿದ್ದರೆ, ಪಹಣ ದಾಖಲೆ ತಪ್ಪಾಗಿದ್ದರೆ ಹಣ ಸಿಗದೇ ಹೋಗಬಹುದು.

ಪಿಎಂ ಕಿಸಾನ್ ಸ್ಕೀಮ್: 24ನೇ ಕಂತಿನ ಹಣ ಬಿಡುಗಡೆ ದಿನ ಫಿಕ್ಸ್; 9.34 ಕೋಟಿ ರೈತರಿಗೆ ಅ. 30ಕ್ಕೆ ಸಿಗಲಿದೆ ಹಣ
ರೈತ
Image Credit source: Getty Images

Updated on: Oct 29, 2026 | 3:20 PM

ನವದೆಹಲಿ, ಅಕ್ಟೋಬರ್ 29: ದೀಪಾವಳಿ ಹಬ್ಬಕ್ಕೆ ಮುನ್ನವೇ ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ. ಸರ್ಕಾರ ಹೊರಡಿಸಿರುವ ಪ್ರಕಟಣೆ ಪ್ರಕಾರ, ಅಕ್ಟೋಬರ್ 30, ಅಂದರೆ ನಾಳೆ ಶುಕ್ರವಾರವೇ ಹಣ ಬಿಡುಗಡೆ ಆಗುತ್ತಿದೆ. 9.34 ಕೋಟಿ ಅರ್ಹ ರೈತರಿಗೆ ತಲಾ 2,000 ರೂ ಅನ್ನು ನೇರವಾಗಿ ಬ್ಯಾಂಕ್ ಅಕೌಂಟ್​ಗೆ ವರ್ಗಾವಣೆ ಮಾಡಲಿದೆ. ಸರ್ಕಾರ ಒಟ್ಟು 18,700 ಕೋಟಿ ರೂ ಹಣವನ್ನು ರೈತರಿಗೆ ನೀಡುತ್ತಿದೆ.

ಕೆವೈಸಿ ಆಗದಿದ್ದರೆ ಹಣ ಸಿಗಲ್ಲ…

ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೂ 24ನೇ ಕಂತಿನ ಹಣ ಬರುತ್ತದೆ ಎಂದು ಖಾತ್ರಿ ಇಲ್ಲ. ಇಕೆವೈಸಿ ಆಗದಿದ್ದರೆ ಹಣ ಸಿಗುವುದಿಲ್ಲ. ಬ್ಯಾಂಕ್ ಅಕೌಂಟ್ ತಪ್ಪಾಗಿ ನಮೂದಿಸಿದ್ದರೂ ಹಣ ಕ್ರೆಡಿಟ್ ಆಗುವುದಿಲ್ಲ. ಪಹಣಿ ದಾಖಲೆಯೂ ಸರಿಯಾಗಿರಬೇಕು. ಹೀಗಾಗಿ, ಅನುಮಾನಗಳಿದ್ದರೆ ಮತ್ತೊಮ್ಮೆ ಇ-ಕೆವೈಸಿ ಮಾಡಬಹುದು.

ಇದನ್ನೂ ಓದಿ: ಬಿಎಲ್​ಎಸ್ ಪಾಲಿಮರ್ಸ್ ಐಪಿಒ; ಇವತ್ತು ಕೊನೆಯ ದಿನ; 1.7 ಕೋಟಿ ಷೇರು ವಿತರಣೆ, 60ಕ್ಕೂ ಅಧಿಕ ಪಟ್ಟು ಸಬ್​ಸ್ಕ್ರಿಪ್ಷನ್ಸ್

ಏನಿದು ಪಿಎಂ ಕಿಸಾನ್ ಯೋಜನೆ?

ಕೃಷಿಯಲ್ಲಿ ನಿರತರಾಗಿರುವ ರೈತರಿಗೆ ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುವ ಯೋಜನೆ ಇದು. 2018-19ರಲ್ಲಿ ಚಾಲನೆಗೊಂಡ ಈ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತುಗಳಲ್ಲಿ ಈ 6,000 ರೂ ಅನ್ನು ನೀಡಲಾಗುತ್ತಿದೆ. ತಲಾ 2,000 ರೂಗಳ 23 ಕಂತು ಹಣವನ್ನು ಈವರೆಗೂ ಬಿಡುಗಡೆ ಮಾಡಲಾಗಿದೆ.

ಪಿಎಂ ಕಿಸಾನ್ ಸ್ಕೀಮ್; ಅರ್ಹ ರೈತರು ಯಾರು?

  • ಸ್ವಂತ ಕೃಷಿ ಜಮೀನು ಹೊಂದಿರಬೇಕು.
  • 2019ರ ಫೆಬ್ರುವರಿ 1ಕ್ಕೆ ಮುಂಚೆ ಜಮೀನು ಖರೀದಿಸಿದ್ದಾಗಿರಬೇಕು.
  • ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರು, ಶಾಸಕರು, ಸಂಸದರು, ವೃತ್ತಿಪರರು ಇತ್ಯಾದಿ ಆಗಿರಬಾರದು, ಆಗಿದ್ದಿರಬಾರದು.

ಇದನ್ನೂ ಓದಿ: ಮೈಕ್ರೋಸಾಫ್ಟ್​ನಲ್ಲಿ ಬ್ಲಡ್​ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್​ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು

ಪಿಎಂ ಕಿಸಾನ್ ಸ್ಕೀಮ್; ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿದೆಯಾ ನೋಡಿ…

  • ಪಿಎಂ ಕಿಸಾನ್ ಸ್ಕೀಮ್​ನ ಅಧಿಕೃತ ವೆಬ್​ಸೈಟ್​ಗೆ ಹೋಗಿ: pmkisan.gov.in
  • ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ‘ಫಾರ್ಮರ್ಸ್ ಕಾರ್ನರ್’ ವಿಭಾಗ ಕಾಣುತ್ತದೆ. ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಅನ್ನು ಕ್ಲಿಕ್ ಮಾಡಿ.
  • ಈಗ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮದ ಹೆಸರನ್ನು ಆಯ್ದುಕೊಳ್ಳಿ.
  • ಆ ಗ್ರಾಮದಲ್ಲಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ ಎಲ್ಲರ ಪಟ್ಟಿ ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us