ESTIC 2026 ಉದ್ಘಾಟಿಸಿದ ಮೋದಿ; ಮೂರು ದಿನಗಳ ಸಮ್ಮೇಳನದಲ್ಲಿ 150 ಡೀಪ್​ಟೆಕ್ ಸ್ಟಾರ್ಟಪ್​ಗಳಿಂದ ಪ್ರದರ್ಶನ ಸೇರಿ ವಿವಿಧ ಕಾರ್ಯಕ್ರಮ

ನವದೆಹಲಿಯ ಭಾರತ್ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 'ಎರ್ಜೆಂಟಿಂಗ್ ಸೈನ್ಸ್, ಟೆಕ್ನಾಲಜಿ ಅಂಡ್ ಇನ್ನೋವೇಶನ್ ಕಾನ್ಕ್ಲೇವ್' (ESTIC 2026) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಅಕ್ಟೋಬರ್ 27ರಿಂದ 29ರವರೆಗೆ ನಡೆಯುವ ಈ ಕಾಂಕ್ಲೇವ್​ನಲ್ಲಿ ಭಾರತದ ಹಲವು ಡೀಪ್ಟೆಕ್ ಸ್ಟಾರ್ಟಪ್​ಗಳು, ಇನ್ನೋವೇಟರ್​ಗಳು ಪಾಲ್ಗೊಂಡಿದ್ದಾರೆ.

ESTIC 2026 ಉದ್ಘಾಟಿಸಿದ ಮೋದಿ; ಮೂರು ದಿನಗಳ ಸಮ್ಮೇಳನದಲ್ಲಿ 150 ಡೀಪ್​ಟೆಕ್ ಸ್ಟಾರ್ಟಪ್​ಗಳಿಂದ ಪ್ರದರ್ಶನ ಸೇರಿ ವಿವಿಧ ಕಾರ್ಯಕ್ರಮ
ನರೇಂದ್ರ ಮೋದಿ
Image Credit source: Narendra Modi's Youtube

Updated on: Oct 27, 2026 | 6:48 PM

ನವದೆಹಲಿ, ಅಕ್ಟೋಬರ್ 27: ಭಾರತವನ್ನು ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಬಲ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ್ ಮಂಟಪಂನಲ್ಲಿ ಅಕ್ಟೋಬರ್ 27ರಿಂದ ಪ್ರಾರಂಭವಾಗಿರುವ ‘ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನ’ (ESTIC 2026) ಅನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿಗಳು, ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಬಹಳ ಮುಖ್ಯ ಎಂದು ಹೇಳಿದ್ದಾರೆ.

ಮಂಗಳಯಾನದ ಮೂಲಕ ಮಂಗಳ ಗ್ರಹಕ್ಕೆ ಮೊದಲ ಯತ್ನದಲ್ಲೇ ಹೋಗಿ ಬಂದಿದ್ದೇವೆ. ಯಾರೂ ಹೋಗಿದಿದ್ದ ಚಂದ್ರನ ದಕ್ಷಿಣ ಧ್ರುವ ಮುಟ್ಟಿದ್ದೆವು. ಭಾರತೀಯರು ತಂತ್ರಜ್ಞಾನ ಬಳಕೆಯಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.

ಎಮರ್ಜಿಂಗ್ ಟೆಕ್ನಾಲಜಿಯಲ್ಲಿ ಭಾರತ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಕ್ರಿಟಿಕಲ್ ಟೆಕ್ನಾಲಜಿಯಲ್ಲೂ ಭಾರತ ಬೆಳವಣಿಗೆ ಹೊಂದಬೇಕಿದೆ ಎಂದರು.

ಇದನ್ನೂ ಓದಿ: ವ್ಯಾಪಾರ ಒಪ್ಪಂದಗಳು ಭಾರತಕ್ಕೆ ವಿಶ್ವದ ಶೇ. 76 ಮಾರುಕಟ್ಟೆ ಬಾಗಿಲು ತೆರೆಯುತ್ತವೆ: ಪೀಯುಷ್ ಗೋಯಲ್

ವಿಜ್ಞಾನ ಯಾವಾಗ ಯಶಸ್ವಿಯಾಗುತ್ತದೆ ಎಂದರೆ, ಅದು ಲ್ಯಾಬ್​ನಿಂದ ಆಚೆ ಬಂದು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವಾಗುವುದರಲ್ಲಿ ಅದರ ಯಶಸ್ಸು ಇದೆ. ವಿಜ್ಞಾನವು ಅನೇಕರ ಜೀವನದಲ್ಲಿ ಬದಲಾವಣೆ ತರುತ್ತಿದೆ. ಕೃಷಿ ಮತ್ತಿತರ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಮಹತ್ವದ್ದಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಅಕ್ಟೋಬರ್ 29ರವರೆಗೂ ನಡೆಯಲಿದೆ ಎಸ್ಟಿಕ್ ಸಮ್ಮೇಳನ

ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮ್ಮೇಳನವು ಇವತ್ತು ಆರಂಭಗೊಂಡು, ಅಕ್ಟೋಬರ್ 29ವರೆಗೆ ಮೂರು ದಿನಗಳ ಕಾಲ ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ (AI), ಜೈವಿಕ ತಂತ್ರಜ್ಞಾನ (Biotechnology), ಸುಧಾರಿತ ವಸ್ತುಗಳು ಮತ್ತು ಉತ್ಪಾದನೆ, ಆರೋಗ್ಯ ರಕ್ಷಣೆ, ಇಂಧನ, ಹವಾಮಾನ ವಿಜ್ಞಾನ ಮತ್ತು ಸಮುದ್ರ ಸಂಶೋಧನೆ ಸೇರಿದಂತೆ ಒಟ್ಟು 12 ಪ್ರಮುಖ ವಲಯಗಳ ಕುರಿತು ಈ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆಗಳು ನಡೆಯಲಿವೆ.

ಇದನ್ನೂ ಓದಿ: 2028, ಅಕ್ಟೋಬರ್ 23ಕ್ಕೆ ಬರಲಿದೆ ಅಪ್ಪಟ ಭಾರತೀಯ ಸ್ಮಾರ್ಟ್​ಫೋನ್; ಸಚಿವ ಎ ವೈಷ್ಣವ್ ಡೆಡ್​ಲೈನ್

150 ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳ ಪ್ರದರ್ಶನ

ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಸುಮಾರು 150 ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳ ನಾವೀನ್ಯತೆಗಳು ಮತ್ತು ಉತ್ಪನ್ನಗಳ ಪ್ರದರ್ಶನ ಆಯೋಜಿಸಲಾಗಿದೆ. ಅಲ್ಲದೆ, ಮುಂಬರುವ ಚಂದ್ರಯಾನ-4 ಮತ್ತು ಚಂದ್ರಯಾನ-5 ಬಾಹ್ಯಾಕಾಶ ಯೋಜನೆಗಳ ವಿಶೇಷ ಝಳಕುಗಳನ್ನು ಸಹ ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಹಾಗೂ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ ದೇಶ-ವಿದೇಶಗಳ 300ಕ್ಕೂ ಅಧಿಕ ತಜ್ಞರು, ಸಂಶೋಧಕರು ಹಾಗೂ ಕೈಗಾರಿಕಾ ಪ್ರತಿನಿಧಿಗಳು ಪಾಲ್ಗೊಂಡು ಜಾಗತಿಕ ಸಂಶೋಧನಾ ಒಪ್ಪಂದಗಳಿಗೆ ಒತ್ತು ನೀಡಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us