Bank Deposit Insurance: ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಬಗ್ಗೆ ಡಿ. 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತು

| Updated By: Srinivas Mata

Updated on: Dec 11, 2021 | 9:26 PM

ಬ್ಯಾಂಕ್​ ಠೇವಣಿಗಳ ಮೇಲಿನ ವಿಮೆ ಬಗ್ಗೆ ಠೇವಣಿದಾರರನ್ನು ಉದ್ದೇಶಿಸಿ ಡಿಸೆಂಬರ್​ 12ನೇ ತಾರೀಕಿನಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.

Bank Deposit Insurance: ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಬಗ್ಗೆ ಡಿ. 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತು
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರದಂದು (ಡಿಸೆಂಬರ್ 12, 2021) ದೆಹಲಿಯ ವಿಜ್ಞಾನ ಭವನದಲ್ಲಿ “ಡೆಪಾಸಿಟರ್ಸ್ ಫಸ್ಟ್: ಗ್ಯಾರಂಟೀಡ್ ಟೈಮ್- ಬೌಂಡ್ ಡೆಪಾಸಿಟ್ ಇನ್ಷೂರೆನ್ಸ್ ಪೇಮೆಂಟ್ ಅಪ್​ ಟು ರುಪೀಸ್ 5 ಲ್ಯಾಕ್ಸ್” ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಠೇವಣಿ ವಿಮೆಯು ಠೇವಣಿದಾರರ ಎಲ್ಲ ಠೇವಣಿಗಳಾದ ಉಳಿತಾಯ, ನಿಶ್ಚಿತ, ಚಾಲ್ತಿ, ರೆಕರಿಂಗ್ ಡೆಪಾಸಿಟ್ಸ್ ಇವೆಲ್ಲವನ್ನೂ ಕವರ್ ಮಾಡುತ್ತದೆ. ಭಾರತದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವಾಣಿಜ್ಯ ಬ್ಯಾಂಕ್​ಗಳು ಒಳಗೊಳ್ಳುತ್ತವೆ. ಅಷ್ಟೇ ಅಲ್ಲ, ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಕೋ-ಆಪರೇಟಿವ್ ಬ್ಯಾಂಕ್​ಗಳು ಸಹ ಸೇರುತ್ತವೆ. ಪ್ರಮುಖ ಸುಧಾರಣೆ ಕ್ರಮದಲ್ಲಿ ಬ್ಯಾಂಕ್ ಠೇವಣಿ ಇನ್ಷೂರೆನ್ಸ್ ಕವರ್ ಅನ್ನು ರೂ.1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು.

ಠೇವಣಿ ಇನ್ಷೂರೆನ್ಸ್ ಕವರೇಜ್ ಪ್ರತಿ ಬ್ಯಾಂಕ್​ನ ಪ್ರತಿ ಠೇವಣಿದಾರರಿಗೆ 5 ಲಕ್ಷ ರೂಪಾಯಿ ಆಗುತ್ತದೆ. ಕಳೆದ ಹಣಕಾಸು ವರ್ಷದ ಅಂತ್ಯಕ್ಕೆ ಶೇ 98.1ರಷ್ಟು ಖಾತೆಗಳಿಗೆ ಪೂರ್ಣ ಪ್ರಮಾಣದ ಭದ್ರತೆ ಒದಗಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದ ಬೆಂಚ್​ಮಾರ್ಕ್​ ಇದರಲ್ಲಿ ಶೇ 80ರಷ್ಟು ಇದೆ. ಈಚೆಗಷ್ಟೇ ಡೆಪಾಸಿಟ್​ ಇನ್ಷೂರೆನ್ಸ್ ಅಂಡ್ ಕ್ರೆಡಿಟ್​ ಗ್ಯಾರಂಟಿ ಕಾರ್ಪೊರೇಷನ್ ಈಚೆಗೆ ಮೊದಲ ಕಂತನ್ನು ಬಿಡುಗಡೆ ಮಾಡಿದೆ. ಆರ್​ಬಿಐ ಅಡಿಯಲ್ಲಿ ಬರುವ 16 ಅರ್ಬನ್ ಕೋ ಆಪರೇಟಿವ್​ ಬ್ಯಾಂಕ್​ಗಳ ಠೇವಣಿದಾರರು ಪಡೆದುಕೊಂಡಿದ್ದಾರೆ.

1 ಲಕ್ಷದಷ್ಟು ಠೇವಣಿದಾರರು ತಮ್ಮ ಕ್ಲೇಮ್​ಗೆ ರೂ. 1300 ಕೋಟಿ ಪಾವತಿದಾರರು ಪಡೆದುಕೊಂಡಿದ್ದಾರೆ. ಅಂದಹಾಗೆ ಭಾನುವಾರದ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವರಾದ ಭಾಗ್ವತ್ ಕೆ. ಕರಡ್ ಮತ್ತು ಆರ್​ಬಿಐ ಗವರ್ನರ್​ ಆದ ಶಕ್ತಿಕಾಂತ ದಾಸ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್